ದಾವಣಗೆರೆ: ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ದಾವಣರೆಗೆಯಲ್ಲಿ ಇಂದು ಚಾಲನೆ ನೀಡಲಾಗಿದೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ 12 ಅಡಿ ಎತ್ತರದ ಬೃಹತ್ ಗಪಣತಿಯ ಶೋಭಾಯಾತ್ರೆಗೆ ಶ್ರೀರಾಮ ಸೇನಾ ಮುಖಂಡ ಪ್ರಮೋದ್ ಮುತಾಲಿಕ್ ಹಾಗೂ ಉಜ್ಜಯಿನಿ ಶ್ರೀಗಳು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್, ದಾವಣಗೆರೆಯಲ್ಲಿ ಹಿಂದೂಗಳನ್ನು ಸಂಘಟಿಸುತ್ತಿರುವುದು ಹೆಮ್ಮೆಯ ವಿಷಯ, ಲಕ್ಷಾಂತರ ಜನ ಹಿಂದೂಗಳು ಶೋಭಯಾತ್ರೆಯಲ್ಲಿ ಭಾಗವಹಿಸಿದ್ದು, ಹಿಂದೂಗಳನ್ನು ಒಗ್ಗೂಡಿಸಲು ಮಾಡಿದ ತಿಲಕರ ಪ್ರಯತ್ನ ಇದು ಎಂದರು.
Advertisement
Advertisement
ಸರ್ಕಾರ ಗಣಪತಿ ಹಬ್ಬಕ್ಕೆ ನಿರ್ಬಂಧನೆ ಹೇರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಡಿಜೆ ಗೆ ನಿರ್ಬಂಧ ಹೇರಿದೆ. ಆದರೆ ರಾಜ್ಯ ಸರ್ಕಾರ ಕೇವಲ ಹಿಂದೂಗಳ ಆಚರಣೆಗೆ ಮಾತ್ರ ನಿರ್ಬಂಧಗಳನ್ನು ಹೇರುತ್ತಿದೆ. ಈ ಮಾರ್ಗದಲ್ಲೇ ಮೆರವಣಿಗೆ ಹೋಗಬೇಕು ಎಂದು ನಿಯಮ ಹೇರುವುದು ಸರಿಯಲ್ಲ. ಮುಸ್ಲಿಂ ಹಬ್ಬಗಳಿಗೂ ಇದೇ ರೀತಿಯ ನಿರ್ಬಂಧನೆಗಳನ್ನು ಹಾಕಬೇಕು ಎಂದರು. ಇದೇ ವೇಳೆ ನಾಸಿಕ್ ಡೋಲ್, ಚಂಡೆ, ನಾದಸ್ವರ, ಸಮಾಳ, ವೀರಗಾಸೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಶೋಭಾಯಾತ್ರೆಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv