ಬೆಂಗಳೂರು: ಸ್ಕೂಲ್‍ನವರು (School) ಕೊಡುವ ನಾಲ್ಕು ಲಕ್ಷ ರೂ. ಬೇಡ, ನಮಗೆ ನನ್ನ ಮೊಮ್ಮಗಳ ಸಾವಿಗೆ ನ್ಯಾಯ ಬೇಕು ಎಂದು ನಿಶಿತಾ ಅಜ್ಜಿ ನರ್ಸಮ್ಮ ತಿಳಿಸಿದರು.
ಆರ್‌ಡಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕಿ (Teacher) ಹೊಡೆತದಿಂದ ವಿದ್ಯಾರ್ಥಿನಿ (Student) ನಿಶಿತಾ(12) ಶುಕ್ರವಾರ ಮೃತಪಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿ ಮಾತನಾಡಿದ ಅವರು, ನಮ್ಮ ಮಗುವಿನ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ಮಾಡಿದ್ದಾರೆ. ಆಗ ಮಗು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದೆ. ಈ ಹಿಂದೆ ಕೂಡ ಡೆಸ್ಟರ್‌ನಿಂದ ಕಣ್ಣಿಗೆ ಹೊಡೆದಿದ್ದರು ಎಂದು ಆರೋಪಿಸಿದರು.
Advertisement
Advertisement
ನಿನ್ನೆ ಕೂಡ ಹೊಡೆದಿದ್ದಾರೆ, ಅದೇ ಕಾರಣಕ್ಕೆ ಮಗು ಸಾವನ್ನಪ್ಪಿದೆ. ನಮಗೆ ವಿಚಾರ ತಿಳಿದು ಸ್ಕೂಲ್ ಬಳಿ ಹೋದಾಗ ಮಗುಗೆ ಪ್ರಜ್ಞೆ ಇರಲಿಲ್ಲ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ವಿ, ಅಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ಈಗ ಸ್ಕೂಲ್‍ನವರು, 4 ಲಕ್ಷ ಪರಿಹಾರ ಕೊಡ್ತೀವಿ ಅಂತಿದ್ದಾರೆ. ನಮಗೆ ಹಣ ಬೇಡ, ನಮಗೆ ನ್ಯಾಯಬೇಕು. ಹಲ್ಲೆ ಮಾಡಿದ ಶಿಕ್ಷಕಿ ಬಂಧಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು – ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್
Advertisement
ಇನ್ನೂ ನಿಶಿತಾಳ ಕೊನೆ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯದಲ್ಲಿ ನಿಶಿತಾ ತನ್ನ ಸ್ಕೂಲ್‍ನಲ್ಲೇ ಓದುತ್ತಿದ್ದ ತಮ್ಮನನ್ನು ಮಧ್ಯಾಹ್ನ 1:30ರ ವೇಳೆ ಹೊರಗೆ ಕರೆದುಕೊಂಡು ಬಂದು ಅಜ್ಜಿ ಜೊತೆಗೆ ಬಿಟ್ಟು ಹೋಗಿದ್ದಳು. ಆದರೆ ಆಕೆಯನ್ನು 1:50ರ ವೇಳೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಕೂಲ್‍ನ ಹೊರಗೆ ತಂದಿದ್ದಾರೆ. ಸಿಬ್ಬಂದಿಯೇ ಬೈಕ್‍ವೊಂದರಲ್ಲಿ ಕೂರಿಸಿಕೊಂಡು, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
Advertisement
ಅಲ್ಲಿಂದ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ನಿಶಿತಾ ಮೃತಪಟ್ಟಿರುವ ವಿಚಾರ ತಿಳಿಸಿದ ನಂತರ ಪೋಷಕರಿಗೆ ವಿಚಾರ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆಗೆ ಹೋಗುವ ಮೊದಲೇ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ದೃಢವಾಗಿದೆ. ಇದನ್ನೂ ಓದಿ: ಮನೆ ಬಿಟ್ಟು ಹೋಗದ ಅತ್ತೆ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ – ವೃದ್ಧೆ ಸ್ಥಿತಿ ಚಿಂತಾಜನಕ