ನವದೆಹಲಿ: ಜಿ20 ಶೃಂಗಸಭೆಗೆ (G20 Summit) ಭಾರತ ಸಂಪೂರ್ಣ ಸಿದ್ಧವಾಗಿದೆ. ವಿದೇಶಿ ಗಣ್ಯರ ವಾಸ್ತವ್ಯಕ್ಕೆ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದ್ದು, ಇಲ್ಲಿ ಭೋಜನದ (Dinner) ವೇಳೆ ವಿಶೇಷ ಅನುಭೂತಿ ನೀಡಲು ಚಿನ್ನ (Gold) ಲೇಪಿತ ತಟ್ಟೆ (Plate), ಬೆಳ್ಳಿ (Silver) ಲೋಟಗಳಲ್ಲಿ (Glass) ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
Advertisement
ಇದಕ್ಕಾಗಿ ಐಕಾನಿಕ್ ಐಟಿಸಿ ತಾಜ್ ಸೇರಿದಂತೆ 11 ಹೋಟೆಲ್‌ಗಳಿಗೆ ತಟ್ಟೆ ಮತ್ತು ಲೋಟಗಳನ್ನು ಸರಬರಾಜು ಮಾಡುವ ಕ್ರೋಕರಿ ಕಂಪನಿಗೆ ಚಿನ್ನ ಮತ್ತು ಬೆಳ್ಳಿ ಲೇಪಿತ ಅಗತ್ಯಗಳನ್ನು ಪೂರೈಕೆ ಮಾಡಲು ಜವಾಬ್ದಾರಿ ನೀಡಲಾಗಿದೆ. ಪಾತ್ರೆಗಳ ಮೇಲೆ ಜೈಪುರ, ಉದಯಪುರ, ವಾರಣಾಸಿ ಮತ್ತು ಕರ್ನಾಟಕದ ಸಂಕೀರ್ಣ ಕಲಾತ್ಮಕತೆ ಇರಲಿದ್ದು, ಇದು ಭಾರತದ ವೈವಿಧ್ಯಮಯ ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಗವದ್ಗೀತೆಯ ನೀತಿಗಳನ್ನು ಹರಡಲಿರುವ ಗೀತಾ ಅಪ್ಲಿಕೇಷನ್!
Advertisement
Advertisement
Advertisement
ಈ ವಸ್ತುಗಳು ತಯಾರಾದ ಬಳಿಕ ಪ್ರತಿ ವಸ್ತುವನ್ನು R&D ಲ್ಯಾಬ್‌ನಲ್ಲಿ ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪಾತ್ರೆಗಳ ವಿನ್ಯಾಸವು ಪ್ರತಿ ಹೋಟೆಲ್‌ನ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿರುತ್ತದೆ. ಉದಾಹರಣೆಗೆ ‘ಮಹಾರಾಜ ಥಾಲಿ’ ಸೆಟ್, ಉಪ್ಪು ಮತ್ತು ಮೆಣಸಿನಕಾಯಿಗಾಗಿ ಪ್ರತ್ಯೇಕ ಬೆಳ್ಳಿಯ ಪೆಟ್ಟಿಗೆಗಳು ಮತ್ತು 5-6 ಬೌಲ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲವನ್ನೂ ಹೋಟೆಲ್‌ನ ಮೆನು ಮತ್ತು ಶೈಲಿಗೆ ಹೊಂದಿಸಲು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಭದ್ರತೆ
ಕ್ರೋಕರಿ ಕಂಪನಿಯು ರಾಷ್ಟ್ರೀಯ ಪಕ್ಷಿಯಾದ ನವಿಲನ್ನು ವಿನ್ಯಾಸದಲ್ಲಿ ಅಳವಡಿಸಿಕೊಂಡಿದೆ. ಇದು ಈ ಹಿಂದೆ ಅತಿಥಿಗಳಿಂದ ಮೆಚ್ಚುಗೆಯನ್ನು ಗಳಿಸಿತ್ತು. ಮಹಾರಾಜ ಥಾಲಿ ಜೊತೆಗೆ, ದಕ್ಷಿಣ ಭಾರತದ ವಿನ್ಯಾಸಗಳನ್ನು ಸಹ ಸಂಗ್ರಹದಲ್ಲಿ ಒಳಗೊಳಿಸಲಾಗುತ್ತಿದೆ. ಕಂಪನಿಯ ಮಾಲೀಕ ರಾಜೀವ್, ಮಾಜಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ ವಿಶೇಷ ಊಟದ ಸೆಟ್‌ಗಳನ್ನು ಪ್ರಸ್ತುತಪಡಿಸಿದ್ದರು. ಇವುಗಳನ್ನು ಕಂಡು ಒಬಾಮಾ ತುಂಬಾ ಪ್ರಭಾವಿತರಾಗಿ ತಮ್ಮೊಂದಿಗೆ ಊಟದ ಸೆಟ್ ಅನ್ನು ಕೊಂಡೊಯ್ದಿದ್ದರು. ಇದನ್ನೂ ಓದಿ: ಇಂಡಿಯಾ, ಭಾರತದ ನಡುವಿನ ವ್ಯತ್ಯಾಸ ವಿವರಿಸಿದ್ದ ಲಾಲೂ ಹಳೆಯ ವೀಡಿಯೋ ವೈರಲ್
Web Stories