ನಿವೇಶನ ಇಲ್ಲದಿದ್ರೆ ಗ್ರಾಮ ಪಂಚಾಯತ್ ಮುಂದೆ ಹೋಗಿ ಮಲಗು ಎಂದ ಅಧ್ಯಕ್ಷ – ವಿಕಲಚೇತನನಿಂದ ವಿನೂತನ ಪ್ರತಿಭಟನೆ

Public TV
1 Min Read
HASSANA MAN 1

ಹಾಸನ: ನಿವೇಶನಕ್ಕಾಗಿ ಆಗ್ರಹಿಸಿ ಗ್ರಾಮ ಪಂಚಾಯತ್ ಮುಂದೆ ಮಲಗಿ ವಿಕಲಚೇತನ ವ್ಯಕ್ತಿಯೊಬ್ಬರು ಪ್ರತಿಭಟನೆ ನಡೆಸುತ್ತಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ನಡೆದಿದೆ.

HASSNA GRAMA PANCHAYATH

ಗುರುಲಿಂಗಪ್ಪ ಕೆಂಕೆರೆ ಗ್ರಾಮ ಪಂಚಾಯತ್ ಮುಂದೆ ಮಲಗಿ ಪ್ರತಿಭಟನೆ ನಡೆಸುತ್ತಿರುವ ವಿಕಲಚೇತನ. ಕೆಲಸ ಮಾಡುವಾಗ ಮರದಿಂದ ಬಿದ್ದು ಗುರುಲಿಂಗಪ್ಪ ಕೈಕಾಲು ಸ್ವಾಧೀನ ಕಳೆದುಕೊಂಡಿದ್ದರು. ಆನಂತರ ದುಡಿಯಲು ಕಷ್ಟವಾಗಿ ಸಂಸಾರ ನಿರ್ವಹಣೆ ದುಸ್ಥರವಾಗಿದೆ. ನಾನು ಬಡವನಾಗಿದ್ದು, ವಾಸಿಸಲು ಮನೆಯಿಲ್ಲ. ಹೀಗಾಗಿ ಒಂದು ನಿವೇಶನವನ್ನು ನೀಡುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೆ. ನಿವೇಶನ ಕೊಡಿ ಎಂದು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಓಗೆ ಮನವಿ ಮಾಡಿದ್ದೆ. ಆದರೆ ಒಂದು ವರ್ಷದಿಂದ ಗ್ರಾಮ ಪಂಚಾಯತ್‍ಗೆ ಅಲೆದರೂ ನಿವೇಶನ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೊಡಗಿನ ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು

HASSANA MAN

ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕೇಳಿದ್ರೆ, ನನ್ನನ್ನೇನು ಕೇಳ್ತಿಯಾ. ನಿವೇಶನ ಇಲ್ಲದಿದ್ರೆ ಗ್ರಾಮ ಪಂಚಾಯತ್ ಮುಂದೆ ಹೋಗಿ ಮಲಗು ಅಂತಾ ಅಂತಾರೆ. ಹೀಗಾಗಿ ನಾನು ಗ್ರಾಮ ಪಂಚಾಯತ್ ಮುಂದೆ ಮಲಗಿ ಪ್ರತಿಭಟನೆ ನಡೆಸುತ್ತಿದ್ದೇನೆ. ನನಗೆ ನಿವೇಶನ ಕೊಡಿ, ಇಲ್ಲದಿದ್ರೆ ಇಲ್ಲೇ ಮಲಗಲು ಬಿಡಿ ಎಂದು ಗುರುಲಿಂಗಪ್ಪ ಅಸಹಾಯಕತೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಬಸವ ಜಯಂತಿ ಮೆರವಣಿಗೆಯಲ್ಲಿ ಕುಡುಕರ ಹಾಡು – ಸಾರ್ವಜನಿಕರಿಂದ ಟೀಕೆ

 

Share This Article
Leave a Comment

Leave a Reply

Your email address will not be published. Required fields are marked *