ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರಚಾರ- ಕೊಹ್ಲಿ ನೋಡಲು ಮುಗಿಬಿದ್ದ ಜನ!

Public TV
1 Min Read
pune kohli

ಪುಣೆ: ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಸ್ಟಾರ್ ಪ್ರಚಾರಕರನ್ನು ಕರೆ ತರುವುದು ಸಾಮಾನ್ಯ. ಆದ್ರೆ ಪುಣೆಯ ಪಂಚಾಯತ್ ಚುನಾವಣೆಯ ಅಭ್ಯರ್ಥಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನೇ ತನ್ನ ಪ್ರಚಾರಕ್ಕೆ ಕರೆ ತರುವುದಾಗಿ ಹೇಳಿ ಜ್ಯೂನಿಯರ್ ಕೊಹ್ಲಿಯನ್ನು ಕರೆತಂದು ಸುದ್ದಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಯ ಚುನಾಣೆಯಲ್ಲಿ ಪುಣೆಯ ರಾಮಲಿಂಗ ಗ್ರಾಮ ಪಂಚಾಯತ್ ಗೆ ಸ್ಪರ್ಧೆ ನಡೆಸುತ್ತಿರುವ ಶಿರೂರ್ ನ ವಿಠ್ಠಲ್ ಗಣಪತ್ ಕೊಹ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿ ಜಾಹೀರಾತು ನೀಡಿದ್ದರು. ಅಷ್ಟೇ ಅಲ್ಲದೇ ಅಲ್ಲದೇ ಮೇ 25 ರಂದು ನಡೆಯುವ ಪ್ರಚಾರ ಸಭೆಗೆ ಕೊಹ್ಲಿ ಅವರನ್ನೇ ಕರೆತರುವುದಾಗಿ ತಮ್ಮ ವ್ಯಾಪ್ತಿಯ ಜನರಿಗೆ ಮಾಹಿತಿ ನೀಡಿದ್ದರು.

pune kohli 1

ಅಭ್ಯರ್ಥಿಯ ಮಾತಿನಂತೆ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಆದರೆ ವಿಠ್ಠಲ್ ಗಣಪತಿ ಕೊಹ್ಲಿಯಂತೆ ವೇಷಧರಿಸಿದ್ದ ಜೂನಿಯರ್ ನಟನನ್ನು ಕರೆತಂದು ಪ್ರಚಾರ ನಡೆಸಿದ್ದಾರೆ.

ಸದ್ಯ ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿ ನಡೆಸಿರುವ ಪ್ರಯತ್ನವನ್ನು ಅಲೆಕ್ಸಿಸ್ ರೂನೇ ಎಂಬವರು ಫೋಟೋ ಸಮೇತ ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ಸದ್ಯ ಪ್ರಚಾರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿ ಕೈಗೊಂಡ ಕ್ರಮದ ಬಗ್ಗೆ ಹಲವರು ತಮ್ಮ ಪ್ರತಿಕ್ರಿಯೆ ನೀಡಿ ಮರುಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *