ಬೆಂಗಳೂರು: ಹೊಸ ವಾಹನ ಖರೀದಿ ಮಾಡಿದವರಿಗೆ ಸಾರಿಗೆ ಇಲಾಖೆ (Department of Transport) ಟೆನ್ಶ್ಯನ್ ಕೊಟ್ಟಿದೆ. ಹೊಸ ವಾಹನದ ಡಿಎಲ್, ಆರ್‌ಸಿಗಾಗಿ ಜನರು ಅಲೆದಾಡುತ್ತಿದ್ದು, ಸ್ಮಾರ್ಟ್‌ಕಾರ್ಡ್‌ಗೆ (Smart Card) ಗ್ರಹಣ ಹಿಡಿದಿದೆ. ತಾಂತ್ರಿಕ ದೋಷದ (Technical Issue) ನೆಪಕ್ಕೆ ಇದೀಗ ಜನ ಹೈರಾಣಾಗಿದ್ದಾರೆ.
ಹೊಸ ವಾಹನ (New Vehicle) ಖರೀದಿ ಮಾಡಿದವರಿಗೆ ಇದೀಗ ಹೊಸ ಪೀಕಲಾಟ ಶುರುವಾಗಿದೆ. ಸಾರಿಗೆ ಇಲಾಖೆ ಎಡವಟ್ಟಿನ ಎಫೆಕ್ಟ್‌ನಿಂದ ಜನ ಪರದಾಡುವಂತಾಗಿದೆ. ಯಾಕೆಂದರೆ ಹೊಸ ವಾಹನ ಖರೀದಿದಾರರಿಗೆ ಕೊಡುವ ಆರ್‌ಸಿ ಸ್ಮಾರ್ಟ್‌ಕಾರ್ಡ್ ಪ್ರಿಂಟ್ ಆಗಲು ಸಾಫ್ಟ್‌ವೇರ್ ಸಮಸ್ಯೆ ಎದುರಾಗಿದೆ. ಇದನ್ನೂ ಓದಿ: ಸರ್ಕಾರಿ ಅಂಗನವಾಡಿಗಳ ಕರೆಂಟ್ ಬಿಲ್ ಕಟ್ಟಲು ದುಡ್ಡಿಲ್ಲ – ಫ್ಯೂಸ್ ಕಿತ್ತ ಬೆಸ್ಕಾಂ
ಕಳೆದ ಹತ್ತು ದಿನದಿಂದ ಈ ಸಾಫ್ಟ್‌ವೇರ್ ಸಮಸ್ಯೆ ಬಗೆಹರಿದಿಲ್ಲ. ಇದರ ಎಫೆಕ್ಟ್‌ನಿಂದಾಗಿ ಹೊಸ ವಾಹನ ಖರೀದಿದಾರರು ವಾಹನ ರಸ್ತೆಗಿಳಿಸಲು ಹಿಂದೇಟು ಹಾಕುವಂತಾಗಿದೆ. ಈ ಸ್ಮಾರ್ಟ್‌ಕಾರ್ಡ್‌ಗೆ ಗುತ್ತಿಗೆ ಕೊಟ್ಟರೂ ಇದುವರೆಗೂ ಸರಿಯಾಗಿಲ್ಲ. ಇದರ ಮಾಹಿತಿ ಇಲ್ಲದೇ ಜನ ಆರ್‌ಟಿಓ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಇದನ್ನೂ ಓದಿ: ಪಾಲಾರ್ ಬಾಂಬ್ ಸ್ಫೋಟ ಕೇಸ್ ಆರೋಪಿ, ಕಾಡುಗಳ್ಳ ವೀರಪ್ಪನ್ ಸಹಚರ ಅನಾರೋಗ್ಯದಿಂದ ನಿಧನ
ಬೆಂಗಳೂರಿನ ನಾನಾ ಆರ್‌ಟಿಓ ಕಚೇರಿಯಲ್ಲಿ ಜನರ ರಷ್ ಕಾಣಿಸುತ್ತಿದೆ. ಸಾರಿಗೆ ಇಲಾಖೆಯಲ್ಲಿ ಪ್ರತಿ ಬಾರಿಯೂ ಈ ರೀತಿಯ ಸಮಸ್ಯೆ ಉದ್ಭವವಾಗುತ್ತೆ ಎಂದು ಸಾರ್ವಜನಿಕರು ಕೂಡ ಕಿಡಿಕಾರಿದ್ದಾರೆ. ನಾಳೆ ಸರಿಯಾಗುತ್ತೆ, ನಾಡಿದ್ದು ಸರಿಯಾಗುತ್ತೆ ಎಂದು ಅಧಿಕಾರಿಗಳು ಕೂಡ ಜನರನ್ನು ಕಚೇರಿಯಿಂದ ಸಾಗಹಾಕುತ್ತಿದ್ದಾರೆ. ಹೊಸ ಗಾಡಿ ತೆಗೆದುಕೊಂಡವರು ವಾಹನವನ್ನು ರಸ್ತೆಗಿಳಿಸಲು ಪೊಲೀಸರ ದಂಡದ ಭೀತಿಯಿಂದ ಸೈಲೆಂಟ್ ಆಗುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಮೈಸೂರು ಏರ್ಪೋರ್ಟ್‌ಗೆ ಟಿಪ್ಪು ಹೆಸರಿಡಲು ಚಿಂತನೆ – ಟಿಪ್ಪು ಹೆಸರು ಶೌಚಾಲಯಕ್ಕೆ ಇಡಲಿ ಎಂದ ಯತ್ನಾಳ್