– ಬಾಡಿಗೆ ಮನೆ ಕೇಳೋ ನೆಪದಲ್ಲಿ ದರೋಡೆಗೆ ಪ್ಲಾನ್, ಕೊಲೆಗೆ ಯತ್ನ
ಬೆಂಗಳೂರು: ದಿನ ನಿತ್ಯದ ಕರ್ಚಿಗೆ ಹಣವಿಲ್ಲವೆಂದು ಇಬ್ಬರು ಗ್ರಾಜುಯೇಟ್ ವಿದ್ಯಾರ್ಥಿಗಳು ಯೂಟ್ಯೂಬ್ ನೋಡಿ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಹೊಸೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮನೆ ಬಾಡಿಗೆ ಕೇಳುವ ನೆಪದಲ್ಲಿ ಎಂಜಿನಿಯರ್ ಸುವೇತ ಮತ್ತು ಯತೀಶ್ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರು 2012 ರಲ್ಲಿ ಬೆಂಗಳೂರಲ್ಲಿ ಒಟ್ಟಿಗೆ ಓದಿದ್ದ ಸ್ನೇಹಿತರಾಗಿದ್ದು, ಮಾರ್ಚ್ 7 ರಂದು ಹೊಸೂರಿನ ಮುನೇಶ್ವರ ನಗರದಲ್ಲಿ ಟು-ಲೆಟ್ ಬೋರ್ಡ್ ನೋಡಿ ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದರು. ಮನೆ ನೋಡಿ 2 ಸಾವಿರ ಅಡ್ವಾನ್ಸ್ ನೀಡಿ ಅನಂತರ ನೀರು ಕೇಳುವ ನೆಪದಲ್ಲಿ ಅಡುಗೆ ಮನೆಗೆ ಹೋಗಿ ಕಳ್ಳತನಕ್ಕೆ ಯತ್ನಿಸಿ, ಕೊಲೆಗೆ ಸಂಚು ರೂಪಿಸಿದ್ದರು.
Advertisement
Advertisement
ಹೊಸೂರಿನ ಲಕ್ಷಿ ಮತ್ತು ಸುರೇಶ್ ದಂಪತಿ ಮನೆಯಲ್ಲಿ ಈ ಘಟನೆ ನಡೆದಿದ್ದು ಲಕ್ಷೀಯನ್ನ ಬಟ್ಟೆಯಿಂದ ಬಾಯಿ ಮುಚ್ಚಿ ಕಳ್ಳತನಕ್ಕೆ ಯತ್ನಿಸಿದ್ದರು. ನಂತರ ಸಿಕ್ಕಿಬಿದ್ದಾಗ ತನಿಖೆ ವೇಳೆ ಸತ್ಯ ಬಾಯಿ ಬಿಟ್ಟಿದ್ದಾರೆ.
Advertisement
Advertisement
ಹೇಗಿರುತ್ತೆ ಇವರ ಪ್ಲಾನ್?: ನೋಡೋಕೆ ವಿದ್ಯಾವಂತರಂತೆ, ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಳ್ಳೋ ಚಂದದ ಹುಡುಗ -ಹುಡುಗಿ ತಾವು ಹೊಸದಾಗಿ ಮದುವೆಯಾದ ದಂಪತಿ ಅಂತಾ ಹೇಳಿಕೊಂಡು ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆ ಹೊಕ್ಕುತ್ತಾರೆ. ಫಾರ್ ರೆಂಟ್ ಅನ್ನುವ ಕೊಂಚ ಹೈ-ಫೈ ಆಗಿ ಕಾಣೋ ಮನೆಗೆ ಎಂಟ್ರಿ ಕೊಡ್ತಾರೆ. ಪಕ್ಕದ ಮನೆಯಲ್ಲಿ ಯಾರಿದ್ದಾರೆ ಅಂತಾ ಸೂಕ್ಷ್ಮವಾಗಿ ಅವಲೋಕನ ಮಾಡ್ತಾರೆ. ಬಾಡಿಗೆ, ಮನೆ ಬಗ್ಗೆ ವಿಚಾರಿಸಿಕೊಳ್ತಾರೆ. ಒಂಟಿ ಹೆಂಗಸು ಇದ್ದರು ಅಂದ್ರೆ ಮುಗೀತು. ಆಗ ಹುಡುಗಿ ಕೈಯಲ್ಲಿರುವ ಬ್ಯಾಗ್ ಓಪನ್ ಆಗುತ್ತೆ. ಅದರೊಳಗೆ ಸುತ್ತಿಗೆ, ಚಾಕು, ವೈಯರ್ ಇರುತ್ತೆ. ಕೂಡಲೇ ಆ ಸುತ್ತಿಗೆ ಎತ್ತಿ ಮನೆ ಮಾಲೀಕರ ತಲೆಗೆ ಹೊಡೆದೇ ಬಿಡ್ತಾರೆ, ಚಾಕುವಿನಿಂದ ಚುಚ್ತಾರೆ ಅಥವಾ ವೈರ್ ಕತ್ತಿಗೆ ಹಾಕಿ ಹಿಡಿದು ಎಳೆಯುತ್ತಾರೆ. ನಂತರ ಮನೆಯೊಳಗೆ ನಗದು, ಆಭರಣ ದೋಚಿ ಪರಾರಿಯಾಗ್ತಾರೆ.
ಸಿಕ್ಕಿಬಿದ್ರು ಖದೀಮರು: ಆದ್ರೇ ಮೊನ್ನೆ ಈ ಜೋಡಿಯ ಅದೃಷ್ಟ ಕೆಟ್ಟಿತ್ತು ಅನಿಸುತ್ತೆ. ಈ ಇಬ್ಬರೂ ಹೊಸೂರು ರಸ್ತೆಯ ಮನೆಯೊಳಗೆ ಬಾಡಿಗೆ ಕೇಳಿಕೊಂಡು ಹೋಗಿದ್ರು. ಒಂಟಿ ಮಹಿಳೆ ಇರೋದನ್ನು ನೋಡಿ ಇನ್ನೇನು ಆಕೆಯ ಕೈಯನ್ನು ಹಿಡಿದು ಸುತ್ತಿಗೆ ಹಿಡಿದು ತಲೆಗೆ ಹೊಡೆಯಬೇಕೆನ್ನುವಷ್ಟರಲ್ಲಿ ಆಕೆ ಕಿರುಚಿಕೊಂಡಿದ್ರು. ಆಗ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದು, ಈ ಜೋಡಿ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದ್ರೆ ಅಷ್ಟರಲ್ಲಿ ರಸ್ತೆಯ ಜನ ಓಡಿ ಬಂದು ಇವರಿಬ್ಬರನ್ನು ಹಿಡಿದುಕೊಂಡಿದ್ದಾರೆ. ಬ್ಯಾಗ್ ಓಪನ್ ಮಾಡಿದಾಗ ಚಾಕು, ವೈರ್, ಸುತ್ತಿಗೆ ಇರೋದು ಗೊತ್ತಾಗಿದೆ. ಕೂಡಲೇ ಜನರು ಹೊಸೂರು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಇಬ್ಬರನ್ನೂ ಸ್ಟೇಷನ್ ಗೆ ಎಳೆದೊಯ್ದಿದ್ದಾರೆ.