ಪಾಟ್ನಾ: ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದು ಸಾಬೀತಾಗಿದೆ. ಸೈಕಲ್ ಮೇಲೆ ಬಟ್ಟೆ ಮಾರುವ ಬಡ ವ್ಯಾಪಾರಿಯ ಪುತ್ರನೋರ್ವ ಇದೀಗ ಯುಪಿಎಸ್‍ಸಿ( UNION PUBLIC SERVICE COMMISSION) ಪಾಸ್ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ.
ಸೈಕಲ್‍ನಲ್ಲಿ ಬಟ್ಟೆಯ ಮೂಟೆ ಹೊತ್ತುಕೊಂಡು, ಊರೂರು ತಿರುಗಿ ಬಟ್ಟೆ ಮಾರಿ ಬದುಕುತ್ತಿರುವ ಬಿಹಾರದ ವ್ಯಾಪಾರಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಈ ವ್ಯಾಪಾರಿಯ ಮಗ ಯುಪಿಎಸ್‍ಸಿ ಪರೀಕ್ಷೆಯಲ್ಲಿ 45ನೇ ರ್‍ಯಾಂಕ್ ಪಡೆದಿದ್ದಾರೆ . 2018ರಲ್ಲಿ ದೆಹಲಿ ಐಐಟಿ ಪದವಿ ಪಡೆದಿರುವ ಅನಿಲ್ ಬೋಸಕ್ ತಮ್ಮ 3ನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ರ್‍ಯಾಂಕ್ ಪಡೆದಿದ್ದಾರೆ . ಇದನ್ನೂ ಓದಿ: ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್
Advertisement
Advertisement
ತಮ್ಮ ಪುತ್ರನ ಸಾಧನೆ ಕುರಿತು ಮಾತನಾಡಿರುವ ಬಿನೋದ್ ಬೋಸಕ್, ನಾನೇನೂ ಕಲಿತಿಲ್ಲ. ಆದರೆ ಈ ಪರೀಕ್ಷೆ ನನ್ನ ಮಗನ ಕನಸಾಗಿತ್ತು. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತೇಜನ ಕೊಟ್ಟರೆ ಅವರೂ ಈ ರೀತಿಯ ಸಾಧನೆ ಮಾಡುತ್ತಾರೆ ಎಂದಿದ್ದಾರೆ.
Advertisement
Advertisement
ಐಐಟಿ ಮುಗಿಸಿ ಕೆಲಸಕ್ಕೆ ಸೇರಬಹುದೆಂದು ನಾವು ಅಂದುಕೊಂಡಿದ್ದೇವು. ಆದರೆ ಆತ ಯುಪಿಎಸ್‍ಸಿಗೆ ತಯಾರಿ ನಡೆಸುವುದಾಗಿ ಹೇಳಿದ. ಅವನ ಕನಸಿಗೆ ನಾವು ಅಡ್ಡಿಯಾಗಲಿಲ್ಲ. ಆತನ ಶಿಕ್ಷಕರು ಅವನಿಗೆ ಆರ್ಥಿಕವಾಗಿ ಸಹಾಯ ಮಾಡಿದರು. ಎಲ್ಲರ ಬೆಂಬಲ ಹಾಗೂ ಆತನ ಶ್ರಮದಿಂದ ಯುಪಿಎಸ್‍ಸಿ ಪಾಸ್ ಆಗಿದ್ದಾನೆ. ಇಡೀ ಊರಿನ ಜನ ಮನೆಗೆ ಬಂದು ಶುಭಾಶಯ ಕೋರುತ್ತಿರುವುದು ನೋಡಿದರೆ ನನಗೆ ಖುಷಿಯಾಗುತ್ತಿದೆ ಎಂದು ಮಗನ ಸಾಧನೆ ಬಗ್ಗೆ ಹೆಮ್ಮೆಯಿಂದ ಬಿನೋದ್ ಬೋಸಕ್ ಹೇಳಿಕೊಂಡಿದ್ದಾರೆ.