ಗಣೇಶ ಮೋದಕ ಪ್ರಿಯನಾದರೂ, ನಾದಪ್ರಿಯನಂತೆ ಭಕ್ತರು ಗುಣಗಾನ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಸಿನಿಮಾ ರಂಗದಲ್ಲಿ ಗಣಪನಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಎಷ್ಟೋ ಥಿಯೇಟರ್‌ಗಳಲ್ಲಿ ‘ನಮೋ ಗಣೇಶ..’ ಹಾಡಿನ ಮೂಲಕವೇ ಚಿತ್ರಗಳನ್ನು ಶುರು ಮಾಡುವ ಪರಿಪಾಠವೂ ಇದೆ. ‘ಗೌರಿ ಗಣೇಶ’ (Gowri Ganesh Festival) ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗಣಪನ ಹಬ್ಬ ಬಂತಂದ್ರೆ ಕೆಲವು ಸಿನಿಮಾ ಹಾಡುಗಳು ನೆನಪಾಗುತ್ತೆ. ಎಷ್ಟೇ ಹೊಸ ಹೊಸ ಹಾಡುಗಳು (Kannada Songs) ಬಂದ್ರು ಈ ಹಾಡುಗಳನ್ನ ಮಾತ್ರ ಮರೆಯಲಾಗದು. ಇದನ್ನೂ ಓದಿ:ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ‘ಜಿಗ್ರಾ’ ನಟಿ ಆಲಿಯಾ ಭಟ್
Advertisement
ಬೀದಿ ಬೀದಿಯಲ್ಲಿ, ಗಲ್ಲಿ ಗಲ್ಲಿಯಲ್ಲೂ ಈ ಹಾಡುಗಳನ್ನ ಕೇಳುತ್ತಿರುತ್ತಾರೆ. ಸಾಮಾನ್ಯ ದಿನಗಳಿಗಿಂತ ಗಣೇಶ ಹಬ್ಬಗಳಲ್ಲೇ ಈ ಹಾಡುಗಳನ್ನು ಹೆಚ್ಚಿಗೆ ನೆನಪಿಸಿಕೊಳ್ಳುತ್ತಾರೆ ಭಕ್ತಗಣ. ಹಾಗಾಗಿ ಗಣೇಶ ಹಬ್ಬದಲ್ಲಿ ಈ ಹಾಡುಗಳು ಟ್ರೆಂಡಿಂಗ್ ಆಗಿ ಬಿಡುತ್ತದೆ. ಹಾಗಿದ್ರೆ, ಗಣೇಶ ಚತುರ್ಥಿಯ ದಿನದಂದು ಚಾಲ್ತಿಯಲ್ಲಿರುವ ಸಿನಿಮಾ ಹಾಡುಗಳ ಲಿಸ್ಟ್ ಇಲ್ಲಿದೆ.
Advertisement
Advertisement
‘ಜೈ ಗಣೇಶʼ ಹಾಡು
Advertisement
ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಕುಟುಂಬ’ (Kutumba) ಸಿನಿಮಾದಲ್ಲಿ ಗಣೇಶನ ಬಗ್ಗೆ ಹಾಡೊಂದಿದೆ. ಗಣೇಶ ಹಬ್ಬಕ್ಕೆ ಥಟ್ ಅಂತ ನೆನಪಾಗೋದೇ ಈ ಹಾಡು. ಕಾಡಿನಲ್ಲಿ ಮೀಸೆಯಿಟ್ಟೆ, ಮೀಸೆಯಲ್ಲಿ ದ್ವೇಷವಿಟ್ಟೆ. ನಾಡಿನಲ್ಲಿ ರೋಷವಿಟ್ಟೆ ಕಿಲಾಡಿ ಜೈ ಗಣೇಶ ಎಂಬ ಹಾಡು ಪದೇ ಪದೇ ಕೇಳಬೇಕು ಎನಿಸುತ್ತದೆ. ಇಂದಿಗೂ ಈ ಹಾಡನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಆರ್ಕೆಸ್ಟ್ರಾಗಳಲ್ಲಂತೂ ಈ ಹಾಡು ಸಖತ್ ಫೇಮಸ್.
‘ಗಣ ಗಣ ಗಣೇಶ’ ಹಾಡು
ರಮ್ಯಾ ಕೃಷ್ಣ, ಅನುಪ್ರಭಾಕರ್ ನಟನೆಯ ‘ಶ್ರೀಕಾಳಿಕಾಂಬ’ (Shreekalikamba) ಚಿತ್ರದಲ್ಲೂ ಕೂಡ ಗಣೇಶನ ಬಗ್ಗೆ ವಿಶೇಷವಾದ ಹಾಡಿದೆ. ‘ಗಣೆ ಗಣೆ ಗಣೆ ಗಣೇಶ ಹೊಟ್ಟೆ, ಗಣೇಶ ಹೀರೋ’ ಎಂದು ಮೂಷಿಕವಾಹನನ ಬಗ್ಗೆ ಹಾಡು ಕೇಳಿರಬಹುದು. ಈ ಹಾಡು ನೆನಪಾಗುತ್ತೆ.
‘ನೀ ನಮ್ಮ ಗೆಲುವಾಗಿ ಬಾ’ ಹಾಡು
‘ಶಬರಿಮಲೈ ಸ್ವಾಮಿ ಅಯ್ಯಪ್ಪ’ ಚಿತ್ರದಲ್ಲಿ ಗಣೇಶನ ಬಗ್ಗೆ ಒಂದು ಭಕ್ತಿಗೀತೆ ಇದೆ. ಗಣೇಶನ ಬಗ್ಗೆ ಹಾಡುಗಳು ಅಂದರೆ ಈ ಹಾಡು ಕೂಡ ಥಟ್ ಅಂತ ನೆನಪಾಗುತ್ತದೆ. ನೀ ನಮ್ಮ ಗೆಲುವಾಗಿ ಬಾ ಗಜಮುಖನೇ ನೀ ನಮ್ಮ ಗೆಲುವಾಗಿ ಬಾ ಎಂಬ ಹಾಡು ಕೇಳಲು ಬಹಳ ಇಂಪಾಗಿದೆ.
‘ಗಣಪತಿ ಬಪ್ಪಾ ಮೋರಿಯಾ’ ಹಾಡು
ಡಾ ವಿಷ್ಣುವರ್ಧನ್, ರಮೇಶ್ ಅರವಿಂದ್, ಪ್ರೇಮಾ ಅಭಿನಯದ ‘ಏಕದಂತ’ ಸಿನಿಮಾದಲ್ಲಿ ಗಣೇಶ ಮಹಿಮೆಯನ್ನ ಹೇಳುವ ಹಾಡಿದೆ. ‘ನಗುವ ನಮ್ಮೇಜಮಾನ, ನಗಿಸೋ ನಮ್ಮ ಜನನಾ….ಕಾಪಾಡೋ ಕಾಪಾಡೋ…ಗಣಪತಿ ಬಪ್ಪಾ ಮೋರಿಯಾ, ಹರಿಸೋ ನಮ್ಮ ಏರಿಯಾನ ಎಂದು ಹಾಡು ಕೇಳಿರಬಹುದು.
‘ಮಹಾ ಗಣಪತಿ’ ಹಾಡು
ಶಿವರಾಜ್‌ಕುಮಾರ್, ದಾಮಿನಿ ನಟನೆಯ ‘ಅಸುರ’ ಮಹಾ ಗಣಪತಿ ಸಾಂಗ್ ಇಂದಿಗೂ ಸಿನಿಮಾ ಪ್ರಿಯರ ಅಚ್ಚುಮೆಚ್ಚಿನ ಗೀತೆಯಾಗಿದೆ. ಈ ಹಾಡಿನಲ್ಲಿ ರಾಘವ್ ಲಾರೆನ್ಸ್ ಹೆಜ್ಜೆ ಹಾಕಿದ್ದರು ಎಂಬುದು ವಿಶೇಷ.