ಬ್ಯಾಂಡ್ ಬಾರಿಸಿಕೊಂಡು, ಮನೆಮನೆಗೆ ತೆರಳಿ ಮಕ್ಕಳನ್ನು ಸಾರೋಟಿನಲ್ಲಿ ಕರೆತಂದ ಸರ್ಕಾರಿ ಶಾಲೆ ಶಿಕ್ಷಕರು

Public TV
1 Min Read
CNG SCHOOL F

ಚಾಮರಾಜನಗರ: ಸುದೀರ್ಘ ಬೇಸಿಗೆ ರಜೆ ಕಳೆದರೂ ಇನ್ನೂ ಕೂಡ ರಜೆಯ ಮೂಡ್‍ನಲ್ಲೇ ಇರುವ ಮಕ್ಕಳನ್ನು ಆಕರ್ಷಿಸಿ ಶಾಲೆಗೆ ಕರೆತರಲು ಶಿಕ್ಷಕರುಗಳು ವಿಭಿನ್ನವಾದ ಪ್ರಯತ್ನವೊಂದನ್ನು ಮಾಡಿದ್ದಾರೆ. ಮನೆ ಮನೆಗೆ ತೆರಳಿ ಮಕ್ಕಳನ್ನು ಸಾರೋಟಿನಲ್ಲಿ ಶಾಲೆಗೆ ಕರೆತರುವ ಮೂಲಕ ವಿನೂತನವಾಗಿ ಶಾಲೆಗೆ ಸ್ವಾಗತ ಮಾಡಿಕೊಂಡಿದ್ದಾರೆ.

CNG SCHOOL 5

ಚಾಮರಾಜನಗರ ತಾಲೂಕಿನ ಚೆನ್ನಿಪುರಮೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳನ್ನು ಈ ರೀತಿಯಾಗಿ ಶಾಲೆಗೆ ವಿಶೇಷವಾಗಿ ಬರಮಾಡಿಕೊಂಡರು. ಶಿಕ್ಷಕರ ಈ ನೂತನವಾದ ಸ್ವಾಗತದಿಂದ ಮಕ್ಕಳು ಫುಲ್ ಖುಷಿಯಾಗಿ ಶಾಲೆಯತ್ತ ಆಗಮಿಸಿದ್ರು. ಶಿಕ್ಷಕರು ಬ್ಯಾಂಡ್ ಬಾರಿಸಿಕೊಂಡು ಮನೆ ಮನೆಗೆ ತೆರಳಿ ಮಕ್ಕಳನ್ನು ಸಾರೋಟಿನಲ್ಲಿ ಕೂರಿಸಿಕೊಂಡು ಶಾಲೆಗೆ ಕರೆತಂದು ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಣೆ ಮಾಡಿ ಸಿಹಿ ಹಂಚಿದರು.

CNG SCHOOL 8

ಇದಲ್ಲದೆ ಹೊಸದಾಗಿ ಶಾಲೆಗೆ ದಾಖಲಾಗುವ ಮಕ್ಕಳನ್ನು ಸಹ ಸಾರೋಟಿನಲ್ಲಿ ಕರೆತರಲಾಯಿತು. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕೆಂದು ಪೋಷಕರಲ್ಲಿ ಜಾಗೃತಿ ಮೂಡಿಸಿದರು.

CNG SCHOOL 6

ಪೋಷಕರಲ್ಲಿರುವ ಖಾಸಗಿ ಶಾಲೆಗಳ ವ್ಯಾಮೋಹದ ನಡುವೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಇಲ್ಲಿನ ಶಿಕ್ಷಕರು ನಿರ್ಮಾಣ ಮಾಡಿರುವ ಪೂರಕವಾದ ವಾತಾವರಣ ನೋಡಿ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು

CNG SCHOOL 1

CNG SCHOOL 13

CNG SCHOOL 11

 

Share This Article
Leave a Comment

Leave a Reply

Your email address will not be published. Required fields are marked *