ನವದೆಹಲಿ: ಹಂಗೇರಿ-ಅಮೆರಿಕನ್ ಉದ್ಯಮಿ ಜಾರ್ಜ್ ಸೊರೊಸ್ (George Soros) ಅವರ ಸಂಸ್ಥೆಯ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ನಂಟು ಬಹಳ ಗಂಭೀರ ವಿಚಾರ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ಧ. ಭಾರತ ವಿರೋಧಿಗಳ ವಿರುದ್ಧ ದೇಶದ ನಾಗರಿಕರು ಒಗ್ಗಟ್ಟಿನಿಂದ ಇರಬೇಕೆಂದು ಅವರು ಮನವಿ ಮಾಡಿದರು. ಜಾರ್ಜ್ ಸೊರೊಸ್ ವಿಚಾರವನ್ನು ಈಗಾಗಲೇ ನಾವು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದೇವೆ. ಸೊರೊಸ್ ಭಾರತದ ವಿರುದ್ಧ ಕೆಲಸ ಮಾಡುವ ವ್ಯಕ್ತಿ ಎಂದು ದೂರಿದರು.
Advertisement
Advertisement
Delhi: Union Minister Kiren Rijiju says, “The issue currently before the country is a serious one. I believe there are some issues that should not be viewed from a political perspective. The involvement of George Soros and his links, whether it’s Rahul Gandhi’s name or Sonia… pic.twitter.com/YCy6KfxBDf
— IANS (@ians_india) December 9, 2024
Advertisement
ಪ್ರಸ್ತುತ ದೇಶದ ಮುಂದಿರುವ ಸಮಸ್ಯೆ ಬಹಳ ಗಂಭೀರವಾಗಿದೆ. ಕೆಲವು ಸಮಸ್ಯೆಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಜಾರ್ಜ್ ಸೊರೊಸ್ ಅವರ ಒಳಗೊಳ್ಳುವಿಕೆ ಮತ್ತು ಅವರ ಲಿಂಕ್‌ಗಳು ಅದು ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅಗಲಿ ನಾವು ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗಿ ನೋಡುವುದಿಲ್ಲ. ಯಾವುದೇ ಭಾರತೀಯರು ಭಾರತದ ವಿರುದ್ಧ ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿದ್ದರೆ ಅವುಗಳನ್ನು ಪರಿಹರಿಸಬೇಕು ಎಂದರು. ಇದನ್ನೂ ಓದಿ: ಸೊರೊಸ್ ಜೊತೆ ಕೈಜೋಡಿಸಿರುವ ರಾಹುಲ್ ದೇಶದ್ರೋಹಿ: ಸಂಬಿತ್ ಪಾತ್ರ ಕಿಡಿ
Advertisement
ಸೊರೊಸ್ ಸಂಸ್ಥೆಯ ಜೊತೆ ಸೋನಿಯಾ ಗಾಂಧಿ ಅವರಿಗೆ ನಂಟು ಇದೆ ಎಂದು ಬಿಜೆಪಿ ಆರೋಪಿಸಿದ್ದಕ್ಕೆ ಸೋಮವಾರದ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದರು. ಎರಡು ಕಡೆಯಿಂದ ಘೋಷಣೆ ಕೂಗಿದ ಬೆನ್ನಲ್ಲೇ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಸೋನಿಯಾ ಗಾಂಧಿ ಮತ್ತು ಸೊರೊಸ್ ಸಂಸ್ಥೆಯ ಜೊತೆ ನಂಟು ಇದೆ ಎನ್ನುವುದಕ್ಕೆ ಬಿಜೆಪಿ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
Sonia Gandhi’s chairmanship of the Rajiv Gandhi Foundation led to a partnership with the George Soros Foundation, displaying the influence of foreign funding on Indian organisations. pic.twitter.com/rxq16s2oJY
— BJP (@BJP4India) December 8, 2024
ಏನಿದು ಸೋನಿಯಾಗೆ ನಂಟು?
ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜಾರ್ಜ್ ಸೊರೋಸ್ ಫೌಂಡೇಶನ್‌ನಿಂದ ಹಣಕಾಸು ನೆರವು ಪಡೆಯುವ ಹಾಗೂ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗುವುದನ್ನು ಬೆಂಬಲಿಸಿದ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾರೆ.
ಸೊರೋಸ್‌ರಿಂದ ನೆರವು ಪಡೆಯುವ ‘ಫೋರಂ ಆಫ್ ಡಿ ಡೆಮಾಕ್ರಟಿಕ್ ಲೀಡರ್ಸ್ ಇನ್ ಏಷ್ಯಾ ಪೆಸಿಫಿಕ್’ (FDL-AP) ಸಂಸ್ಥೆ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವಾಗಿ ಪರಿಗಣಿಸುತ್ತದೆ. ಸೋನಿಯಾ ಗಾಂಧಿ ಇದರ ಸಹ ಅಧ್ಯಕ್ಷೆಯಾಗಿದ್ದಾರೆ. ಇದು ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶಿ ಕಂಪನಿಗಳ ಪ್ರಭಾವವನ್ನು ತೋರಿಸುತ್ತದೆ. ಇದನ್ನೂ ಓದಿ: ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್ ಪ್ರಸಾದ್
George Soros and Rahul Gandhi have same sentiments regarding the ‘Adani issue’.
Specifically, they’ve both suggested that Adani and Modi are closely linked, and that the Adani issue could topple the Modi government. pic.twitter.com/6GU5pQlCFG
— BJP (@BJP4India) December 8, 2024
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸೊರೋಸ್‌ರನ್ನು ಹಳೆಯ ಮಿತ್ರ ಎಂದು ಕರೆದಿದ್ದ ಪೋಸ್ಟ್ ಅನ್ನು ಹಾಕಿದೆ. ಅದಾನಿ ಕುರಿತು ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು ಜಾರ್ಜ್ ಸೊರೊಸ್ ಅವರ ಒಸಿಸಿಆರ್‌ಪಿ (OCCRP) ನೇರ ಪ್ರಸಾರ ಮಾಡಿದೆ. ಇದು ಅವರ ಅಪಾಯಕಾರಿ ಸಂಬಂಧವನ್ನು ತಿಳಿಸುತ್ತದೆ. ಭಾರತೀಯ ಆರ್ಥಿಕತೆಯನ್ನು ಹಳಿತಪ್ಪಿಸುವ ಅವರ ಪ್ರಯತ್ನಗಳನ್ನು ಇದು ಎತ್ತಿ ತೋರಿಸುತ್ತದೆ.