ಬೆಂಗಳೂರು: ಹಿರಿಯ ನಟಿ ಲೀಲಾವತಿ ನಿರ್ಮಾಣದ ಆಸ್ಪತ್ರೆ ಸಿಬ್ಬಂದಿಗೆ ಸರ್ಕಾರ ಸಂಬಳ ನೀಡದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬೀಗ ಹಾಕುವ ಪರಿಸ್ಥಿತಿ ಎದುರಾಗಿದ್ದು, ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಹಿರಿಯ ನಟಿ ಡಾ. ಲೀಲಾವತಿಯವರು ಎಂಟು ವರ್ಷದ ಹಿಂದೆ ಗ್ರಾಮೀಣ ಪ್ರದೇಶದ ಬಡ ರೈತರ ಉಪಯೋಗಕ್ಕೆಂದು ಸ್ವಂತ ಹಣದಿಂದ ಈ ಆಸ್ಪತ್ರೆಯನ್ನು ನಿರ್ಮಿಸಿದ್ದರು. ಕಾಲಕ್ರಮೇಣ ಆಸ್ಪತ್ರೆಯನ್ನ ನಿರ್ವಹಿಸಲು ಸರ್ಕಾರಿ ಆರೋಗ್ಯ ಇಲಾಖೆಯ ವಶಕ್ಕೆ ನೀಡಿದ್ದರು. ಅಂದಿನಿಂದ ಸರ್ಕಾರವೇ ವೈದ್ಯರಿಗೆ ಸಂಬಳ ನೀಡುತ್ತಿತ್ತು. ಆದರೆ ಸರ್ಕಾರಿ ಅಧಿಕಾರಿಗಳು ವೈದ್ಯರಿಗೆ ಕಳೆದ 2 ತಿಂಗಳಿನಿಂದ ಸಂಬಳ ನೀಡದೇ ಕರ್ತವ್ಯಲೋಪವೆಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
Advertisement
ಈ ಆಸ್ಪತ್ರೆಯನ್ನ ಉನ್ನತ ದರ್ಜೆಗೆ ಏರಿಸುವ ಭರವಸೆಯನ್ನ ಅಧಿಕಾರಿಗಳು ಹಾಗೂ ಸಚಿವರು ನೀಡಿದ್ದರು. ಸರಿಯಾದ ಸಂಬಳ ನೀಡದ ಹಿನ್ನೆಲೆಯಲ್ಲಿ ವೈದ್ಯರು ಕೆಲಸಕ್ಕೆ ಬಾರದೆ ಬೇರೆ ಆಸ್ಪತ್ರೆಗೆ ಹೋಗುವ ಊಹಾಪೋಹಗಳು ಹರಿದಾಡುತ್ತಿದೆ. ವೈದ್ಯರಿಗೆ ಸಂಬಳ ನೀಡಿ ಆಸ್ಪತ್ರೆಯನ್ನು ಉಳಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಘಟನೆಯಿಂದ ನಟಿ ಲೀಲಾವತಿ, ನಟ ವಿನೋದ್ ರಾಜ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
Advertisement