ಬೆಂಗಳೂರು: ರಾಜ್ಯದ ಶಕ್ತಿಸೌಧ ಉದ್ಘಾಟನೆಯಾಗಿದ್ದು ಯಾವಾಗ ನಿಮಗೆ ಗೊತ್ತಾ? ನಿಮಗೆ ಅಲ್ಲ, ಘನ ಸರ್ಕಾರಕ್ಕೂ ಈ ಬಗ್ಗೆ ಗೊತ್ತಿಲ್ಲ. ಹೀಗಂತ ನಾವ್ ಹೇಳ್ತಿಲ್ಲ. ಸ್ವತಃ ಸರ್ಕಾರವೇ ನಮ್ಮ ಬಳಿ ಮಾಹಿತಿ ಇಲ್ಲ ಅಂತಿದೆ.
ಆಶ್ಚರ್ಯ ಎನ್ನಿಸಿದ್ರೂ ನೀವು ನಂಬಲೇಬೇಕು. ಕೆಂಗಲ್ ಹನುಮಂತ್ಯನವರು ಕಟ್ಟಿಸಿದ್ದ ವಿಧಾನಸೌಧ ಯಾವಾಗ ಉದ್ಘಾಟನೆ ಆಗಿದ್ದು? ಉದ್ಘಾಟನೆ ಮಾಡಿದ್ದು ಯಾರು ಅನ್ನೋ ಮಹತ್ವದ ಮಾಹಿತಿನೇ ಸರ್ಕಾರದ ಬಳಿ ಇಲ್ಲ. ಮೊನ್ನೆಯಷ್ಟೆ ಮುಗಿದ ಅಧಿವೇಶನದಲ್ಲಿ ವಿಧಾನಸೌಧದ ಶಂಕುಸ್ಥಾಪನೆಯಾಗಿದ್ದು ಯಾವಾಗ? ಉದ್ಘಾಟನೆಯಾದದ್ದು ಯಾವಾಗ? ಯಾರು ಉದ್ಘಾಟನೆ ಮಾಡಿದ್ದು ಎಂಬ ಬಗ್ಗೆ ಮಾಹಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ರು.
Advertisement
ಇದಕ್ಕೆ ಉತ್ತರ ನೀಡಿರುವ ಲೋಕೋಪಯೋಗಿ ಇಲಾಖೆ, 1951 ಜುಲೈ 13 ರಂದು ಅಂದಿನ ಪ್ರಧಾನಿಗಳಾದ ಪಂಡಿತ್ ಜವಹಾರ್ ಲಾಲ್ ನೆಹರು ವಿಧಾನಸೌಧಕ್ಕೆ ಶಂಕುಸ್ಥಾಪನೆ ಮಾಡಿದ್ರು. ಅಂದು ಕೆಸಿ ರೆಡ್ಡಿ ಮುಖ್ಯಮಂತ್ರಿಯಾಗಿದ್ರು. ಇದನ್ನ ಬಿಟ್ಟು ಬೇರೆ ಮಾಹಿತಿ ಇಲ್ಲ ಎಂದಿದೆ. ಇನ್ನು ಉದ್ಘಾಟನೆ ಆಗಿದ್ದು ಯಾವಾಗ? ಯಾರು ಮಾಡಿದ್ದು ಅಂತಾ ಕೇಳಿದ್ರೆ ಯಾವುದೇ ಮಾಹಿತಿ ಇಲ್ಲ ಅಂತ ಇಲಾಖೆ ಹೇಳಿದೆ.
Advertisement
Advertisement
ನಿಗದಿಗಿಂತ 3 ಪಟ್ಟು ಹಣ ಖರ್ಚು!: ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ ವಿಧಾನಸೌಧ ಕಟ್ಟಲು ಅಂದಾಜು ಮಾಡಲಾದ ವೆಚ್ಚ 50 ಲಕ್ಷ ರೂಪಾಯಿ. ಆದ್ರೆ ಕಟ್ಟಡ ಪೂರ್ಣ ಆಗುವ ವೇಳೆಗೆ ಖರ್ಚಾಗಿದ್ದು 184 ಲಕ್ಷ, ಅಂದ್ರೆ 1 ಕೋಟಿ, 84 ಲಕ್ಷ ರೂಪಾಯಿ. ಅಂದ್ರೆ ಬಹುತೇಕ ನಿಗದಿಪಡಿಸಿದಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಖZರ್ಚಾಗಿದೆ. 1951 ರಲ್ಲಿ ಪ್ರಾರಂಭವಾದ ಕಟ್ಟಡ 5 ವರ್ಷದ ಬಳಿಕ ಅಂದ್ರೆ 1956 ರಲ್ಲಿ ಪೂರ್ಣಗೊಂಡಿದೆ.
Advertisement