– ಆಡಿಯೋ ಹರಿಬಿಟ್ಟು ಅಳಲುತೋಡಿಕೊಂಡ ವ್ಯಕ್ತಿ
ಕಾರವಾರ: ಜ್ವರ ಹಾಗೂ ಶೀತ ಎಂದು ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಬಂದ ವ್ಯಕ್ತಿಗೆ ಡೆಂಗ್ಯೂ (Dengue) ಇದೆ ಎಂದು ಹೇಳಿ ಚಿಕಿತ್ಸೆ ನೀಡಿದ ಪ್ರಸಂಗವೊಂದು ಉತ್ತರಕನ್ನಡ (Uttarakannada) ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಕಾರವಾರದ (Karwar) ಕ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಒಂದೇ ಹೆಸರಿನ ಇಬ್ಬರ ರಕ್ತ ತಪಾಸಣೆ ವೇಳೆ ರಿಪೋರ್ಟ್ ಅದಲು ಬದಲಾಗಿ ಪ್ರಮಾದ ಆಗಿದೆ. ಇದನ್ನೂ ಓದಿ: ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ನಮಗೂ ಬಂದಿಲ್ಲ- ಹೆಚ್‍ಡಿಕೆ ಗರಂ
ಏನಿದು ಘಟನೆ..?: ಅಂಕೋಲಾ ತಾಲೂಕಿನ ಬೇಲಿಕೇರಿಯ ಅರವಿಂದ್ ಎಂಬವರು ಜ್ವರ, ಶೀ ಎಂದು ಆಸ್ಪತ್ರೆಗೆ ಬಂದಿದ್ದಾರೆ. ಹೀಗೆ ವೈದ್ಯರನ್ನು ಭೇಟಿಯಾದಾಗ ಅವರು ರಕ್ತ ಪರೀಕ್ಷೆ ಮಾಡಿದ್ದರು. ಇದನ್ನೂ ಓದಿ: ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಫೈಟ್ – ಲಾಡ್ಜ್‌ನಲ್ಲಿ ತಂಗಿದ್ದ ನಾಲ್ವರು ಸದಸ್ಯರ ಕಿಡ್ನ್ಯಾಪ್
ಇತ್ತ ಇದೇ ಸಂದರ್ಭದಲ್ಲಿ ಅರವಿಂದ್ ಎಂಬ ಇನ್ನೂಬ್ಬ ವ್ಯಕ್ತಿ ಸಹ ರಕ್ತ ತಪಾಸಣೆ ಮಾಡಿಸಿದ್ದರು. ಆದರೆ ರಿಪೋರ್ಟ್ ಕೊಡುವಾಗ ಅದಲು ಬದಲು ಮಾಡಿ ಕೊಟ್ಟಿದ್ದಾರೆ. ಪರಿಣಾಮ ಬೇಲಿಕೇರಿಯ ಅರವಿಂದ್‍ಗೆ ಡೆಂಗ್ಯೂ ಇದೆ ಎಂದು ಹೇಳಿ ವೈದ್ಯರು 5 ದಿನ ಚಿಕಿತ್ಸೆ ನೀಡಿದ್ದರು. 5 ದಿನದ ಬಳಿಕ ಮತ್ತೊಮ್ಮೆ ರಕ್ತ ಪರೀಕ್ಷೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನೊಬ್ಬ ಅರವಿಂದ್ ಕಿಡ್ನಿ ವೈಫಲ್ಯ ಹಾಗೂ ಶುಗರ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವರ ರಿಪೋರ್ಟ್ ಅನ್ನು ಬೇಲಿಕೇರಿಯ ಅರವಿಂದ್‍ಗೆ ನೀಡಿ ಚಿಕಿತ್ಸೆ ಕೊಟ್ಟಿದ್ದರು. ಈ ತಪ್ಪಿನ ಅರಿವಾದರೂ ಮತ್ತೊಮ್ಮೆ ಸಿಟಿ ಸ್ಕ್ಯಾನ್ ಮಾಡಿಸುವಂತೆ ಬೇಲಿಕೇರಿಯ ಅರವಿಂದಗೆ ವೈದ್ಯರು ಸೂಚನೆ ನೀಡಿದ್ದಾರೆ.
ಸದ್ಯ ಬೇಲಿಕೇರಿಯ ಅರವಿಂದ್ ಈ ಸಂಬಂಧ ಆಡಿಯೋ ರಿಲೀಸ್ ಮಾಡಿದ್ದಾರೆ. ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು ನನಗೆ ಏನಾದರೂ ಸಮಸ್ಯೆಯಾಗಿ ಸಾವು ಕಂಡರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಹೇಳಿದ್ದಾರೆ.
Web Stories