ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟರಮಟ್ಟಿಗೆ ದಿವಾಳಿಯಾಗಿದೆ ಅಂದರೆ ಪರಿಶಿಷ್ಟರ (Scheduled) ಅಂತ್ಯಸಂಸ್ಕಾರಕ್ಕೆ (Funeral) ಹಣ ಕೊಡಲೂ ಇವರ ಬಳಿ ದುಡ್ಡಿಲ್ಲ. ಅಂತ್ಯ ಸಂಸ್ಕಾರಕ್ಕಾಗಿ ಕೊಟ್ಟ ಚೆಕ್ ಕೂಡ ಬೌನ್ಸ್ ಆಗಿದೆ. ಇಷ್ಟರ ಮಟ್ಟಿಗೆ ಸಿದ್ದರಾಮಯ್ಯರ (Siddaramaiah) ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಜಿಲ್ಲೆಯು ಬರ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಉಚಿತ ಭಾಗ್ಯಗಳನ್ನು ಕೊಟ್ಟು ಸರ್ಕಾರ ದಿವಾಳಿಯ ಅಂಚಿಗೆ ಸಾಗಿದೆ. ಗೃಹ ಸಚಿವ ಪರಮೇಶ್ವರ್ ಕ್ಷೇತ್ರದಲ್ಲಿ ಪರಿಶಿಷ್ಟರ ಅಂತ್ಯ ಸಂಸ್ಕಾರಕ್ಕೆಂದು ಸರ್ಕಾರದಿಂದ ಕೊಟ್ಟಿದ್ದ ಚೆಕ್ ಕೂಡಾ ಬೌನ್ಸ್ ಆಗಿದ್ದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೆಚ್ಡಿಕೆ ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ, ಈಗ ಫ್ರೀಯಾಗಿದ್ದರೆ ಯಾತ್ರೆ ಮಾಡಲಿ: ಚಲುವರಾಯಸ್ವಾಮಿ ಲೇವಡಿ
Advertisement
Advertisement
ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಕೈಗಾರಿಕೋದ್ಯಮಿಗಳ ಸಮಸ್ಯೆ ಆಲಿಸಿಲ್ಲ, ಬರ ವೀಕ್ಷಣೆ ಮಾಡಿಲ್ಲ. ಅನಗತ್ಯ ಉಚಿತ ಭಾಗ್ಯ ಕೊಟ್ಟು ಸರ್ಕಾರ ದಿವಾಳಿಯಾಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆ, ತೆರಿಗೆ ಜಾಸ್ತಿ ಮಾಡಿ ಸಂಕಷ್ಟ ತಂದಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಅಧಿಕಾರಿ ಹತ್ಯೆಗೆ ಸರ್ಕಾರದ ವೈಫಲ್ಯವೇ ಕಾರಣ: ಹೆಚ್ಡಿಕೆ
Advertisement