ನೆಲಮಂಗಲ: ಬೆಂಗಳೂರು ನಗರ ಸೇರಿದಂತೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಕುಗ್ರಾಮದಲ್ಲಿರುವ ಸಮಸ್ಯೆಯಿಂದ ಯುವಕ-ಯುವತಿಯರ ಮದುವೆ ಮುರಿದು ಬಿದ್ದಿದೆ. ಈ ಗ್ರಾಮಕ್ಕೆ ಹೆಣ್ಣು ಅಥವಾ ಗಂಡು ಕೊಡಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ.
Advertisement
ಹೌದು. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಗೋವಿಂದಪುರ ಅಭಿವೃದ್ಧಿ ಕಾಣದೆ ಕಣ್ಣು ಹಾಯಿಸಿದ ಕಡೆಯೆಲ್ಲಾ ಕೊಳಚೆ ತುಂಬಿದೆ. ಈ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಈ ಕುಗ್ರಾಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸುಮಾರು 150ಕ್ಕೂ ಹೆಚ್ಚು ಮನೆಯಿದ್ದು 800-900 ಜನ ಸಂಖ್ಯೆ ಇದೆ. ಆದರೆ ಈ ಗ್ರಾಮ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯಗಳಿಂದ ಸೊರಗಿದೆ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಹಿಂದೆ-ಮುಂದೆ ನೋಡ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.
Advertisement
Advertisement
2018ರಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದಿಂದ 30 ಲಕ್ಷ, ಅಲ್ಪಸಂಖ್ಯಾತ ನಿಧಿಯಿಂದ 15 ಲಕ್ಷ, ಒಟ್ಟು 45 ಲಕ್ಷ ಹಣ ಗ್ರಾಮದ ಅಭಿವೃದ್ಧಿಗೆ ಅನುದಾನ ಬಂದಿದ್ದರೂ, ಸ್ಥಳೀಯ ರಾಜಕೀಯ ದ್ವೇಷಕ್ಕೆ ಅನುದಾನವೂ ವಾಪಸ್ ಹಾಗಿದೆ. ವೋಟ್ ಕೆಳೋ ಸಂದರ್ಬದಲ್ಲಿ ಮನೆ ಬಾಗಿಲಿಗೆ ಬರೋ ಜನಪ್ರತಿನಿಧಿಗಳು ಸಮಸ್ಯೆ ಅಂದಾಗ ಪತ್ತೆಯೇ ಇರಲ್ಲ ಅಂತ ಇಲ್ಲಿನ ಜನ ಹಿಡಿಶಾಪ ಹಾಕ್ತಿದ್ದಾರೆ. ಇದನ್ನೂ ಓದಿ: ಮದುವೆಯಾದ 3 ದಿನದವರೆಗೆ ಈ ದೇಶದಲ್ಲಿ ವಧು, ವರ ಟಾಯ್ಲೆಟ್‍ಗೆ ಹೋಗುವಂತಿಲ್ಲ!