ಭೋಪಾಲ್: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಹಿಂದೂ ಅನ್ನೋದಕ್ಕೆ ಸಾಕ್ಷಿಗೆ ಅವರ ತಂದೆ, ತಾಯಿಯ ಡಿಎನ್‍ಎ ತಂದು ಕೊಡಿ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ, ಸಚಿವ ಗೋವಿಂದ್ ಸಿಂಗ್ ಕೇಳಿದ್ದಾರೆ.
ಹೆಗ್ಡೆ ಅವರ ತಂದೆ, ತಾಯಿಯವರ ಡಿಎನ್‍ಎ ತಂದು ಕೊಡಲಿ. ಡಿಎನ್‍ಎ ಪರಿಶೀಲನೆ ನಡೆಸಿ ಹೆಗ್ಡೆಯವರ ಜಾತಿ ಯಾವುದು ಎಂದು ಪತ್ತೆ ಮಾಡೋಣ. ಕೆಲವರು ಕೆಳಮಟ್ಟದ ಪದಗಳನ್ನು ಬಳಸುವ ಮೂಲಕ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡಲ್ಲ ಎಂದು ಗೋವಿಂದ್ ಸಿಂಗ್ ಹೇಳಿದ್ದಾರೆ.
Advertisement
Advertisement
ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೂಗ್ತಿ ಮಹಾಸತಿ ದೇವಸ್ಥಾನದಲ್ಲಿ ನಡೆದ ತಾಯ್ನೆಲದ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ, ಭಾರತೀಯ ಯೋಧರ ಶೌರ್ಯದ ಬಗ್ಗೆ ಸಂದೇಹ ಪಡುವ ಬಿಕನಾಸಿ ಪರಿಸ್ಥಿತಿ ಕಾಂಗ್ರೆಸ್‍ನಿಂದ ನಿರ್ಮಾಣವಾಗಿದೆ. ನಮ್ಮ ಪೈಲಟ್‍ಗಳು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಆದರೆ ಮುಸಲ್ಮಾನನ ಮಗ ಗಾಂಧಿ ಹೇಗಾದ ಎನ್ನುವುದಕ್ಕೆ ಸಾಕ್ಷಿ ಕೊಡುತ್ತಾರಾ ಎಂದು ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
Advertisement
ಮುಸಲ್ಮಾನ ಅಪ್ಪ, ಕ್ರಿಶ್ಚಿಯನ್ ತಾಯಿಗೆ ಹುಟ್ಟಿರುವ ಈ ಪರದೇಶಿ ಬ್ರಾಹ್ಮಣ ಹೇಗಾದ ಎನ್ನುವುದಕ್ಕೆ ಡಿಎನ್‍ಎ ಸಾಕ್ಷಿ ಕೊಡುತ್ತಾರಾ? ಮಾಜಿ ಪ್ರಧಾನಿ ರಾಜೀವ್ ಗಾಂಧಿ ಉಗ್ರರ ದಾಳಿಗೆ ಬಲಿಯಾದಾಗ ಅವರ ದೇಹ ಛಿದ್ರ ಛಿದ್ರವಾಗಿತ್ತು. ಮೃತ ದೇಹವನ್ನು ಪತ್ತೆ ಹಚ್ಚಲು, ಡಿಎನ್‍ಎ ಪರೀಕ್ಷೆಗೆ ಮಕ್ಕಳ ರಕ್ತದ ಮಾದರಿ ನೀಡುವಂತೆ ಸೋನಿಯಾ ಗಾಂಧಿ ಕೇಳಲಾಗಿತ್ತು. ಆದರೆ ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ರಕ್ತದ ಮಾದರಿ ಬೇಡ, ಪ್ರಿಯಾಂಕಾ ಗಾಂಧಿ ರಕ್ತವನ್ನು ತೆಗೆದುಕೊಳ್ಳಿ ಎಂದು ಹೇಳಿದ್ದರು. ಅಂತಹವರು ಈಗ ಏರ್ ಸ್ಟ್ರೈಕ್ ಸಾಕ್ಷಿ ಕೇಳುತ್ತಿದ್ದಾರೆ ಎಂದು ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದ್ದರು.
Advertisement
MP Minister Govind Singh on Ananth Hegde's comment on Rahul Gandhi 'Give DNA proof you're a Hindu':Hegde ji ki Maa aur Pitaji ka DNA liya jaaye, jaanch ki jaye ki unki jaat kya hai. Iss tarah ke shabd bol kar kisi ke samman ko thes pahunchana, aise logon ki baat nahi karna chahta pic.twitter.com/x3ow2RMF5C
— ANI (@ANI) March 12, 2019
MP Min Govind Singh:4 1/2 saal mein surgical strike kyun nahi ki? Manmohan Singh sarkar mein 25-30 baar surgical strike hui lekin prachar nahi kiya. Modi ne chunav ke liye prachaar karne ke liye shadyantra karke chunav jeetne ka kaam kar rahe hain. Sena ki chhavi bigaad rahe hain pic.twitter.com/jQ4XmhfLVy
— ANI (@ANI) March 12, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv