ವಿಜಯಪುರ: ಡಿಕೆಶಿ (D.K.Shivakumar) ಹಾಗೂ ಸಿದ್ದರಾಮಯ್ಯನವರಿಗೆ (Siddaramaiah) ಹೇಳಿಕೊಳ್ಳಲು ವಿಷಯವಿಲ್ಲ. ಹಾಗಾಗಿ ಅವರು ಇಂತಹ ಪ್ರಚೋದನೆ ಕೆಲಸ ಮಾಡುತ್ತಿದ್ದಾರೆ. ಇಂತಹದ್ದನ್ನೆಲ್ಲಾ ಅವರು ಬಿಡಬೇಕು ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ (Govind Karjol) ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ (Reservation) ವಿಚಾರದಲ್ಲಿ ಯಡಿಯೂರಪ್ಪನವರ (B.S.Yediyurappa) ಮನೆ ಮೇಲೆ ಕಲ್ಲುತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಇಂತಹ ಯೋಜನೆಗಳನ್ನು ಯಾಕೆ ಮಾಡಲಿಲ್ಲ? ಅವರ ಪ್ರಣಾಳಿಕೆಯಲ್ಲಿ ಇದು ಇತ್ತು. ಅವರೇ ಯಾಕೆ ಮಾಡಲಿಲ್ಲ? ನಾವು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಕೊಟ್ಟಿದ್ದೇವೆ. ನಮ್ಮ ಸರ್ಕಾರದ ಬಾಗಿಲು ಓಪನ್ ಇದೆ. ಯಾರ ಪ್ರಚೋದನೆಗೂ ಒಳಗಾಗದೆ ಸಿಎಂ ಜೊತೆ ಚರ್ಚೆ ಮಾಡಿ ಎಂದರು. ಇದನ್ನೂ ಓದಿ: Karnataka Election 2023- ಮೇ 10 ರಂದು ಮತದಾನ, ಮೇ 13ಕ್ಕೆ ಫಲಿತಾಂಶ
Advertisement
Advertisement
ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದತಿ ಮಾಡುವ ವಿಚಾರದ ಕುರಿತು ಮಾತನಾಡಿದ ಅವರು, ಅದನ್ನು ಜನರೇ ತೀರ್ಮಾನ ಮಾಡುತ್ತಾರೆ. ಅವರು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಅವರು ಎಂದೂ ಅಧಿಕಾರಕ್ಕೆ ಬರುವುದಿಲ್ಲವೆಂದು ಇವತ್ತೇ ಬರೆದುಕೊಡುತ್ತೇನೆ. ಈ ರೀತಿಯಾದ ಗಿಮಿಕ್ ಮಾಡುವುದರಿಂದ ಅಧಿಕಾರಕ್ಕೆ ಬರಲಾಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣ- ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ವಶಕ್ಕೆ
Advertisement
ರಾಹುಲ್ ಗಾಂಧಿ (Rahul Gandhi) ಸಾವರ್ಕರ್ ಅಲ್ಲ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಸಾವರ್ಕರ್ ಅಲ್ಲಾ ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಈ ದೇಶದ ಪ್ರಜೆಗಳು ಲೆಕ್ಕಕ್ಕೆ ಇಟ್ಟಿಲ್ಲ. ಹೀಗಾಗಿ ಅವರು ಏನೇ ಹೇಳಿದರೂ ಅದು ಲೆಕ್ಕಕ್ಕಿಲ್ಲ. ಅದು ಗಾಳಿ ಸುದ್ದಿ ಅಷ್ಟೇ ಎಂದರು. ಇದನ್ನೂ ಓದಿ: ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯ- ಕೋಟ್ಯಂತರ ರೂ. ಸಂಗ್ರಹ
Advertisement
ನಾಳೆಯೇ ಸಿಎಂ ಅವರನ್ನು ಕರೆಸಿ ವಿಜಯಪುರದ ವಿಮಾನ ನಿಲ್ದಾಣ ಟರ್ಮಿನಲ್ ಬಿಲ್ಡಿಂಗ್ ಓಪನ್ ಮಾಡಬೇಕು ಎಂದುಕೊಂಡಿದ್ದೆವು. ವಿಮಾನ ಕಂಪನಿ ಮಾಲೀಕರ ಒಪ್ಪಂದ ಕಾರ್ಯಕ್ಕೂ ಅನುಕೂಲ ಅಗಿತ್ತು. ಸಿಎಂ ಅವರು ಕೂಡಾ ಬರುತ್ತೇನೆ ಎಂದು ಒಪ್ಪಿಕೊಂಡಿದ್ದರು. ಆದರೆ ಇಂದು ನೀತಿ ಸಂಹಿತೆ ಜಾರಿಯಾದರೆ ಉದ್ಘಾಟನೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಂತ್ರಿಕ ಸಹಾಯಕ ವಜಾ