ಬೆಂಗಳೂರು: ಯುಗಾದಿ ಹಬ್ಬಕ್ಕೂ ಮುನ್ನ ಸಿಎಂ, ಸಚಿವರು, ಶಾಸಕರು, ಸಭಾಪತಿ ಹಾಗೂ ಸಭಾಧ್ಯಕ್ಷರಿಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ವೇತನ ಹೆಚ್ಚಳದ ಮಸೂದೆ ಮಂಡನೆಗೆ ರಾಜ್ಯಪಾಲರು (Thawar Chand Gehlot) ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕರ್ನಾಟಕ ಮಂತ್ರಿಗಳ ಸಂಬಳ (Salary) ಮತ್ತು ಭತ್ಯೆಗಳ (Allowance) ತಿದ್ದುಪಡಿ ಮಸೂದೆ ಮತ್ತು ಕರ್ನಾಟಕ ವಿಧಾನಮಂಡಲದವರ ಸಂಬಳ, ಪಿಂಚಣಿ ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆಯ ಕಡತಕ್ಕೆ ಗವರ್ನರ್ ಅಂಕಿತ ಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾವೇರಿ ಆರತಿ ಪ್ರಯುಕ್ತ ಶುಕ್ರವಾರ ಡಿಕೆಶಿಯಿಂದ ತಲಕಾವೇರಿಯಲ್ಲಿ ವಿಶೇಷ ಪೂಜೆ
ಸಂಬಳ ಎಷ್ಟು ಹೆಚ್ಚಳ?
* ಸಿಎಂ – 75,000 ದಿಂದ 1,50,000 ರೂ.
* ಸಚಿವರು – 60,000 ದಿಂದ 1.25 ಲಕ್ಷ ರೂ.
* ಶಾಸಕರು – 40,000 ದಿಂದ 80,000 ರೂ.
* ಸ್ಪೀಕರ್ – 75,000 ದಿಂದ 1.25 ಲಕ್ಷ ರೂ.
* ಸಭಾಪತಿ – 75,000 ದಿಂದ 1.25 ಲಕ್ಷ ರೂ.
* ಸಿಎಂ, ಸಚಿವರ ಆತಿಥ್ಯ ಭತ್ಯೆ – 4.50 ಲಕ್ಷದಿಂದ 5 ಲಕ್ಷ ರೂ.
* ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2.50 ಲಕ್ಷ ರೂ.
* ಪಿಂಚಣಿ – 50,000 ದಿಂದ 75,000 ರೂ.
* ಹೆಚ್ಚುವರಿ ಪಿಂಚಣಿ – 5,000 ರಿಂದ 20,000 ರೂ.
ಇನ್ನು ಸಿಎಂ ಸಿದ್ದರಾಮಯ್ಯ ಕಳೆದ ಎರಡು ವರ್ಷಗಳಲ್ಲಿ ವಿಮಾನ-ಹೆಲಿಕಾಪ್ಟರ್‌ನಲ್ಲಿ ಸಂಚರಿಸಲು ಸರ್ಕಾರ 31 ಕೋಟಿ ರೂ. ಖರ್ಚು ಮಾಡಿದೆ. ಇದಕ್ಕೆ ಬಿಜೆಪಿ ಕಿಡಿಕಾರಿದೆ. ಇದನ್ನೂ ಓದಿ: 900 ಕೋಟಿ ವೆಚ್ಚದಲ್ಲಿ ಮಂಡ್ಯ ವರ್ತುಲ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರದ ಸಮ್ಮತಿ