ಅಧಿಕಾರಿಗಳ ಎಡವಟ್ಟು – ರಾಜ್ಯಪಾಲರ ನಿರ್ಗಮನದ ನಂತರ ತುಂಬಿ ಹರಿದ ಜೋಗ ಜಲಪಾತ

Public TV
1 Min Read
jog falls

ಶಿವಮೊಗ್ಗ: ವಿಶ್ವ ಪ್ರಸಿದ್ಧ ಜೋಗ ಜಲಪಾತ ವೀಕ್ಷಿಸಲು ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್ ಅವರು ಗುರುವಾರ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದರು. ಜೋಗಜಲಪಾತ ವೀಕ್ಷಿಸಲು ರಾಜ್ಯಪಾಲರು ಬಂದಿದ್ದ ವೇಳೆ ಅಧಿಕಾರಿಗಳಿಂದ ಎಡವಟ್ಟಾಗಿದೆ.

Jog Falls Shivamogga 3

ವಿಶ್ವ ಪ್ರಸಿದ್ಧ ಜೋಗ ಜಲಪಾತ ನೋಡಬೇಕೆಂಬ ಆಸೆಯನ್ನು ಬಹುತೇಕ ಮಂದಿ ಹೊಂದಿರುತ್ತಾರೆ. ದೇಶ, ವಿದೇಶದ ಪ್ರವಾಸಿಗರು ಜೋಗ ಜಲಪಾತಕ್ಕೆ ಬಂದು ಇಲ್ಲಿನ ಸೌಂದರ್ಯ ಸವಿದು ಹೋಗುತ್ತಾರೆ. ಇದೇ ರೀತಿ ಜೋಗ ಜಲಪಾತವನ್ನು ನೋಡಬೇಕೆಂಬ ಹಂಬಲವ ಹೊಂದಿದ್ದ ರಾಜ್ಯಪಾಲರು ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಜಲಪಾತವನ್ನು ವೀಕ್ಷಣೆಗಾಗಿಯೇ ಸಿದ್ದಾಪುರ ಭಾಗದಲ್ಲಿ ಬರುವ ಬ್ರಿಟೀಷ್ ಬಂಗ್ಲೋದಲ್ಲಿ ತಂಗಿದ್ದರು. ಇದನ್ನೂ ಓದಿ:  ರಂಗೋಲಿಯಲ್ಲಿ ಪುನೀತ್ ಭಾವಚಿತ್ರ ಬಿಡಿಸಿ ಕಲಾವಿದ ನಮನ

karnataka governor Thawar Chand Gehlot visited Jog falls Shivamogga 1

ಏನಾಗಬೇಕಿತ್ತು?
ರಾಜ್ಯಪಾಲರು ಜೋಗ ವೀಕ್ಷಿಸುವಾಗ ಹೆಚ್ಚಿನ ನೀರು ಇರಬೇಕು ಮತ್ತು ಸುಂದರವಾಗಿಸಬೇಕೆಂದು ಕೆಪಿಸಿ ಅಧಿಕಾರಿಗಳು ಬತ್ತಿ ಹೋಗಿದ್ದ ಜಲಪಾತಕ್ಕೆ ನೀರು ಬಿಟ್ಟಿದ್ದರು. ಆದರೆ ಜಲಾಶಯದಿಂದ ಜಲಪಾತದ ಭಾಗಕ್ಕೆ ನೀರು ಹರಿದುಬರಲು ಎರಡು ಗಂಟೆಗಳಷ್ಟು ಸಮಯ ಬೇಕು. ಈ ನಡುವೆ ರಾಜ್ಯಪಾಲರು ಬೆಳಿಗ್ಗೆ 7-30ರ ವೇಳೆಗೆ ಜೋಗ ಜಲಪಾತ ನೋಡಲು ಬಂದಿದ್ದಾರೆ. ಆ ವೇಳೆಗೆ ಜಲಾಶಯದಿಂದ ಬಿಟ್ಟ ನೀರು ಜಲಪಾತ ತಲುಪದೆ ಕ್ಷೀಣ ಸ್ಥಿತಿಯಲ್ಲಿದ್ದ ಜಲಪಾತವನ್ನು ನೋಡುವುದಕ್ಕೇ ಗೆಹ್ಲೋಟ್ ತೃಪ್ತಿಪಡಬೇಕಾಯಿತು.

jogfalls

ಏನಾಯಿತು?
10 ನಿಮಿಷ ಜಲಪಾತದ ವೀಕ್ಷಣಾ ಪ್ರದೇಶದಲ್ಲಿದ್ದು ರಾಜ್ಯಪಾಲರು ನಿರ್ಗಮಿಸಿದರು, ಆನಂತರ ಸರಿಯಾಗಿ ಎಂಟು ಗಂಟೆಗೆ ಲಿಂಗನಮಕ್ಕಿ ಆಣೆಕಟ್ಟೆಯ ನೀರು ಬಂದು ಜೋಗ ಆಕರ್ಷಕವಾಗಿ ಕಾಣಿಸಿತು. ಆದರೆ ಅಧಿಕಾರಿಗಳ ಎಡವಟ್ಟಿನಿಂದ ಈ ಭರ್ಜರಿ ಜೋಗವನ್ನು ನೋಡಲು ರಾಜ್ಯಪಾಲರಿಗೆ ಆಗಲೇ ಇಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.ಇದನ್ನೂ ಓದಿ: ಬೆಂಗಳೂರಿನ ಶಾಲೆಯಲ್ಲಿ ಕೊರೊನಾ ಸ್ಫೋಟ – 33 ವಿದ್ಯಾಥಿಗಳಿಗೆ ಸೋಂಕು

Share This Article
Leave a Comment

Leave a Reply

Your email address will not be published. Required fields are marked *