BelgaumDistrictsKarnatakaLatestMain Post

ರಂಗೋಲಿಯಲ್ಲಿ ಪುನೀತ್ ಭಾವಚಿತ್ರ ಬಿಡಿಸಿ ಕಲಾವಿದ ನಮನ

ಚಿಕ್ಕೋಡಿ(ಬೆಳಗಾವಿ): ರಾಜರತ್ನ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿ ಒಂದು ತಿಂಗಳು ಆಗುತ್ತಾ ಬಂದರೂ ಜನರ ಮನಸ್ಸಿನಿಂದ ಅವರ ನೆನಪು ಮಾತ್ರ ಅಚ್ಚಳಿಯದೆ ಹಾಗೇ ಉಳಿದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅಭಿಮಾನಿಯೋರ್ವ ರಂಗೋಲಿಯಲ್ಲಿ ಅದ್ಭುತವಾಗಿ ಪುನೀತ್ ಭಾವಚಿತ್ರವನ್ನ ಬಿಡಿಸಿದ್ದಾರೆ. ಈ ಮೂಲಕ ನೆಚ್ಚಿನ ನಟನಿಗೆ ನಮನ ಸಲ್ಲಿಸಿದ್ದಾರೆ.

ರಂಗೋಲಿಯಲ್ಲಿ ಪುನೀತ್ ಭಾವಚಿತ್ರ ಬಿಡಿಸಿ ಕಲಾವಿದ ನಮನ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಸತ್ಯನಾರಾಯಣ ಬಡಿಗೇರ ಎಂಬ ಕಲಾವಿಧ 4 ಅಡಿ ಎತ್ತರದ ಪುನೀತ್ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸಿದ್ದಾರೆ. ಈ ಮೂಲಕ ಕರ್ನಾಟಕ ರತ್ನ ಪುನೀತ್ ಅವರಿಗೆ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ – ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಸ್ಪಷ್ಟನೆ

ರಂಗೋಲಿಯಲ್ಲಿ ಪುನೀತ್ ಭಾವಚಿತ್ರ ಬಿಡಿಸಿ ಕಲಾವಿದ ನಮನ

ಎಲಿಮುನ್ನೋಳಿ ಗ್ರಾಮದ ಲಕ್ಷ್ಮೀ ದೇವಸ್ಥಾನ ಎದುರು ಪುನೀತ್ ಭಾವಚಿತ್ರದ ರಂಗೋಲಿಯನ್ನ ಕಲಾವಿದ ಸತ್ಯನಾರಾಯಣ ಬಿಡಿಸಿದ್ದಾರೆ. ಈ ರಂಗೋಲಿಯನ್ನ ನೋಡಲು ಗ್ರಾಮದ ಜನ ತಂಡೋಪತಂಡವಾಗಿ ಆಗಮಿಸಿ ನಟನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕಲಾವಿದ ಸತ್ಯನಾರಾಯಣ ಅವರ ರಂಗೋಲಿ ಕಲೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Related Articles

Leave a Reply

Your email address will not be published. Required fields are marked *