ಬೆಂಗಳೂರು: ಭಾರೀ ಹೈಡ್ರಾಮಾ ಬಳಿಕ ಕೊನೆಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ವಿಧಾನ ಸೌಧಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್.ಕೆ ಪಾಟೀಲ್ ಸೇರಿದಂತೆ ಇತರ ಸಚಿವರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ನಗುನಗುತ್ತಲೇ ಗಣ್ಯರು ರಾಜ್ಯಪಾಲರನ್ನ ಸ್ವಾಗತಿಸಿದರು. ಬಳಿಕ ರೆಡ್ ಕಾರ್ಪೆಟ್ ಮೂಲಕ ವಿಧಾನ ಸೌಧದೊಳಗೆ ಕರೆದೊಯ್ದರು. ರಾಜ್ಯಪಾಲರು ಪೀಠದ ಬಳಿ ನಿಲ್ಲುತ್ತಿದ್ದಂತೆ, ರಾಷ್ಟ್ರಗೀತೆ ನುಡಿಸಲಾಯಿತು.

