ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವವರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಎಲ್ಲಾ ಖರ್ಚು ಸರ್ಕಾರ ನೋಡಿಕೊಳ್ಳುತ್ತೆ ಎಂದು ಹೇಳಿದ್ದಾರೆ.
ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ (Brookefield Hospital) ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬ್ಲಾಸ್ಟ್ ಆದಾಗ ಲೇಡಿ ಅಲ್ಲೆ ಇದ್ದು, ಅವರಿಗೆ ಗಾಯಗಳಾಗಿದೆ. ಬೆಸ್ಟ್ ಟ್ರೀಟ್ಮೆಂಟ್ ಕೊಡೋಕೆ ಹೇಳಿದ್ದೀನಿ. ಈ ಟ್ರೀಟ್ಮೆಂಟ್ ವೆಚ್ಚ ಸರ್ಕಾರವೇ ಭರಿಸುತ್ತೆ ಎಂದರು.
Advertisement
Advertisement
ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೂರು ಜನ ಇದ್ದಾರೆ. ಅದರಲ್ಲಿ ಒಬ್ಬರಿಗೆ ಜಾಸ್ತಿ ಗಾಯಗಳಾಗಿವೆ. ಇವತ್ತು ಒಬ್ಬರು ಡಿಸ್ಚಾರ್ಜ್ ಆಗುತ್ತಾರೆ. ನಾಳೆ ಅಥವಾ ನಾಡಿದ್ದು ಉಳಿದವರು ಕೂಡ ಡಿಸ್ಚಾರ್ಜ್ ಆಗಬಹುದು. ಈ ಮೂವರಲ್ಲಿ ಒಬ್ಬರು ಅಲ್ಲಿಯ ಉದ್ಯೋಗಿಯಾಗಿದ್ದಾರೆ ಎಂದರು. ಇದನ್ನೂ ಓದಿ: ಮಂಗಳೂರಿನ ಕುಕ್ಕರ್ ಬ್ಲಾಸ್ಟ್‌ಗು ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಇಲ್ಲ: ಸಿಎಂ
Advertisement
Advertisement
ಶಂಕಿತ ಮಾಸ್ಕ್ ಹಾಕಿಕೊಂಡು ಕೆಫೆಯೊಳಗೆ ಬಂದಿದ್ದಾನೆ. ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ ಆತ ಬಸ್ಸಿನಲ್ಲಿ ಬಂದಿರುವ ಸುಳಿವು ಕೂಡ ಸಿಕ್ಕಿದೆ. ಶೀಘ್ರವೇ ಆತನನ್ನು ಪತ್ತೆ ಹಚ್ಚುತ್ತಾರೆ. ಆತ ಯಾರೂ ಅಂತ ಸದ್ಯ ಗೊತ್ತಾಗಿಲ್ಲ. ಯಾವ ಸಂಘನೆಯವನು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತದೆ ಎಂದರು.
ಬಿಜೆಪಿ ಅವರ ಕಾಲದಲ್ಲೂ ಆಗಿದೆ ಅವರು ಫೆಲ್ಯೂರ್ ಇಲ್ಲವಾ..?. ಅವರ ಕಾಲದಲ್ಲೂ ಆಗಿದೆ ಅವರ ಫೇಲ್ಯೂರ್ ಆಗಿದೆ. ಕುಕ್ಕರು ಬ್ಲಾಸ್ಟ್ ಗು ಇದಕ್ಕೂ ಸಂಬಂಧ ಇದೆಯಾ ಪರಿಶೀಲನೆ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು. ಇದನ್ನೂ ಓದಿ: ಮಂಗಳೂರು ಬ್ಲಾಸ್ಟ್‌ಗೂ ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಲಿಂಕ್ ಕಾಣ್ತಿದೆ: ಡಿಕೆಶಿ