– ಬಿಜೆಪಿ ವಿರುದ್ದ ಸಿದ್ದರಾಮಯ್ಯ ಕಿಡಿ
ಮೈಸೂರು: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಗೂ ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬ್ಲಾಸ್ಟ್‍ಗೂ ಸಾಮ್ಯತೆ ಇಲ್ಲ. ಅದು ಕುಕ್ಕರನಲ್ಲಿ ಆದ ಬ್ಲಾಸ್ಟ್. ಆದರೆ ಇಲ್ಲಿ ಯಾವ ಕುಕ್ಕರ್ ನಲ್ಲೂ ಬ್ಲಾಸ್ಟ್ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ ಒಬ್ಬ ವ್ಯಕ್ತಿ ಈ ಸ್ಫೋಟ ನಡೆಸಿದ್ದಾನೆ. ತಿಂಡಿಯ ಟೋಕನ್ ತೆಗೆದುಕೊಂಡು ಹೋಟೆಲ್ ನಲ್ಲಿ ಕುಳಿತು ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿ ನಂತರ ಹೋಗಿದ್ದಾನೆ. ಅವನು ಬಸ್ಸಿನಿಂದ ಇಳಿಯುವುದು ಹೋಟೆಲ್ ಗೆ ಬರುವುದು ಎಲ್ಲಾ ದೃಶ್ಯಾವಳಿಗಳು ಸಿಕ್ಕಿವೆ ಎಂದರು.
Advertisement
Advertisement
ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಒಬ್ಬ ವ್ಯಕ್ತಿಯ ಕೃತ್ಯವಾ? ಅಥವಾ ಸಂಘಟನೆಯ ಕೃತ್ಯವಾ ಎಂಬುದು ಗೊತ್ತಾಗಿಲ್ಲ. ಇದು ಭಯೋತ್ಪಾದಕ ಕೃತ್ಯನಾ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಈ ಕುರಿತು ಎಲ್ಲವೂ ಇನ್ನೂ ತನಿಖೆಯ ಹಂತದಲ್ಲಿದೆ ಎಂದು ಹೇಳಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?
Advertisement
ನಾನು ಕೂಡ ಇಂದು ಘಟನಾ ಸ್ಥಳಕ್ಕೆ ಮತ್ತು ಗಾಯಾಳುಗಳ ಆರೋಗ್ಯ ವಿಚಾರಿಸಲು ಹೋಗುತ್ತೇನೆ. ಒಟ್ಟು 9 ಜನರು ಗಾಯಳುಗಳಾಗಿದ್ದಾರೆ. 9 ಕ್ಕೆ 9 ಮಂದಿಯೂ ಪ್ರಾಣಾಪಾಪಾಯದಿಂದ ಪಾರಾಗಿದ್ದಾರೆ ಎಂದು ಸಿಎಂ ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಲಾಸ್ಟ್ ಪ್ರಕರಣ- ನಾಲ್ವರ ವಶಕ್ಕೆ ಪಡೆದು ವಿಚಾರಣೆ
ಬ್ಲಾಸ್ಟ್ ವಿಚಾರದಲ್ಲಿ ರಾಜಕೀಯ ಮಾಡಬೇಡಿ: ಇದೇ ವೇಳೆ ಅಲ್ಪಸಂಖ್ಯಾತ ತೃಷ್ಟಿಕರಣದಿಂರ ಇಂತಹ ಕೃತ್ಯ ನಡೆದಿದೆ ಎಂಬ ಬಿಜೆಪಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿಯ ಕಾಲದಲ್ಲಿ ಆದ ಬಾಂಬ್ ಬ್ಲಾಸ್ಟ್ ಗಳಿಗೆ ಅವತ್ತು ಏನು ಕಾರಣ. ಅದು ಅಲ್ಪಸಂಖ್ಯಾತರ ತೃಷ್ಟಿಕರಣವಾ?. ಬಿಜೆಪಿ ರಾಜಕೀಯಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದೆ. ಅಲ್ಪಸಂಖ್ಯಾತರ ಪರಕ್ಕೂ ಇದಕ್ಕೂ ಏನು ಸಂಬಂಧ?. ಬಿಜೆಪಿ ಇದನ್ನು ರಾಜಕೀಯ ಮಾಡುತ್ತಿದೆ ಅಷ್ಟೇ. ಈ ವಿಚಾರದಲ್ಲಿ ರಾಜಕೀಯ ಯಾರು ಮಾಡಬಾರದು ಎಂದು ಮನವಿ ಮಾಡಿಕೊಂಡರು.