ಬೆಂಗಳೂರು: 56 ಸಾವಿರ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ ಮಾಡಿದೆ. ಆದಷ್ಟೂ ಬೇಗ ಪ್ರಕ್ರಿಯೆ ಶುರು ಮಾಡೋದಾಗಿ ಸಚಿವ ಬೋಸರಾಜು (N.S.Boseraju) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶೀಲ್ ನಮೋಶಿ ಪ್ರಶ್ನೆ ಕೇಳಿದ್ರು. ರಾಜ್ಯದಲ್ಲಿ 2.84 ಲಕ್ಷ ಹುದ್ದೆ ಖಾಲಿ ಇವೆ. ಯಾಕೆ ಇಷ್ಟು ಹುದ್ದೆ ಖಾಲಿ ಇವೆ. ಭರ್ತಿ ಮಾಡಲು ಸರ್ಕಾರಕ್ಕೆ ಏನು ಸಮಸ್ಯೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗಿದೆ. ಒಳಮೀಸಲಾತಿ ನೆಪದಿಂದ ನೇಮಕಾತಿ ಮಾಡ್ತಿಲ್ಲ. ಕೋರ್ಟ್ ಸಮಸ್ಯೆ ಪರಿಹಾರ ಮಾಡಿದ್ರೆ 3 ವರ್ಷ ಪ್ರಕ್ರಿಯೆ ನಿಲ್ಲುತ್ತಿರಲಿಲ್ಲ. ಯುವಕರಿಗೆ ಈ ಸರ್ಕಾರ ಅನ್ಯಾಯ ಮಾಡ್ತಿದೆ ಅಂತ ಆರೋಪ ಮಾಡಿದರು. ಇದನ್ನೂ ಓದಿ: ಪಿಜಿ ವೈದ್ಯಕೀಯ ಅಂತಿಮ ಸುತ್ತು- 39 ಮಂದಿಗೆ ಸೀಟು ಹಂಚಿಕೆ: ಕೆಇಎ
ಸಿಎಂ ಅವರು 40 ಸಾವಿರ ಹುದ್ದೆ ತುಂಬಿದ್ದೀವಿ ಅಂತ ಧಾರವಾಡದಲ್ಲಿ ಮಾತಾಡಿದ್ದಾರೆ. ಯಾವ ರೀತಿ ನೇಮಕ ಮಾಡಬೇಕು ಅಂತ DPR ಆದೇಶ ಮಾಡಿದೆ. ಪ್ರಿನ್ಸಿಪಲ್ ನೇಮಕಾತಿಯಲ್ಲಿ 371J ಅಡಿ ನೇಮಕಾತಿ ಆಗಿಲ್ಲ. ಕೂಡಲೇ ಅದಕ್ಕೆ ಸ್ಟೇ ಕೊಡಬೇಕು ಅಂತ ಒತ್ತಾಯಿಸಿದರು.
ಇದಕ್ಕೆ ಸಿಎಂ ಪರವಾಗಿ ಸಚಿವ ಬೋಸರಾಜು ಉತ್ತರ ನೀಡಿ, 56432 ಹುದ್ದೆ ನೇಮಕಾತಿಗೆ ನಿರ್ಧಾರ ಮಾಡಲಾಗಿದೆ. ಕ್ಯಾಬಿನೆಟ್ನಲ್ಲಿ ಈಗಾಗಲೇ ನಿರ್ಧಾರ ಆಗಿದೆ. ನಿಯಮದ ಪ್ರಕಾರವೇ 371j ಅಡಿಯೂ ನೇಮಕಾತಿ ಆಗಲಿದೆ. ಸಿಎಸ್, ಅರ್ಥಿಕ ಇಲಾಖೆಗೆ ಸೂಚನೆ ಕೊಡಲಾಗಿದೆ. 371J ಅಡಿ ನೇಮಕಾತಿ ಮಾಡಬೇಕು ಅಂತ ಹೇಳಿದ್ದೇವೆ. ಈ ತಿಂಗಳಲ್ಲಿ ಮತ್ತೊಂದು ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಕ್ರಮ ಮಾಡ್ತೀವಿ. 371J ಅಡಿ ನೇಮಕಾತಿ ಮಾಡಿಲ್ಲ ಅಂದರೆ ಸಿಎಂ ಬಳಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀವಿ. ತಪ್ಪಾಗಿದ್ರೆ ಸರಿ ಮಾಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಅಡುಗೆ ಅನಿಲ ಕೊರತೆ – ಸಂಸದರು ಸಂಸತ್ತಿನಲ್ಲಿ ಮಾತನಾಡಿ ಜನರಿಗೆ ನ್ಯಾಯ ಒದಗಿಸಲಿ: ಡಿಕೆಶಿ

