ಧಾರವಾಡ: ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದ್ರೆ ಅಂತಹ ಸರ್ಕಾರಿ ನೌಕರರೇ (Government Employees) ಸರ್ಕಾರಕ್ಕೆ ಮೋಸ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
Advertisement
ಸರ್ಕಾರ ಬಡವರಿಗಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ. ಆದರೆ ಸರ್ಕಾರಿ ಕೆಲಸವಿದ್ದವರೂ ಬಡವರಿಗೆ ನೀಡುವ ಸೌಲಭ್ಯವನ್ನು ಪಡೆದು ಮೋಸ ಮಾಡಿದ್ದಾರೆ. ಅಂತಹವರಿಗೆ ಬುದ್ಧಿ ಕಲಿಸಲು ಸರ್ಕಾರ ದಂಡದ ಬಿಸಿ ಮುಟ್ಟಿಸಿದೆ. ಕೂಡಲೇ ಎಚ್ಚೆತ್ತ ಆಹಾರ ಇಲಾಖೆ (Food Department), ಸುಳ್ಳು ಮಾಹಿತಿ ನೀಡಿ ಪಡಿತರ (Ration Card) ದುರ್ಬಳಕೆ ಮಾಡಿಕೊಂಡ 339 ಸರ್ಕಾರಿ ನೌಕಕರರಿಂದ 36.73 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದೆ. ಇದನ್ನೂ ಓದಿ: ವ್ಯಕ್ತಿ ಹೊಟ್ಟೆಯಲ್ಲಿತ್ತು 62 ಚಮಚ – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
Advertisement
Advertisement
ಮತ್ತೊಂದು ಕಡೆ ಆದಾಯ ತೆರಿಗೆ ಪಾವತಿಸುತ್ತಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುವವರ ಮೇಲೆ ಕ್ರಮಕ್ಕೆ ಮುಂದಾಗಿದೆ. 1945ರ ಕಾಯ್ದೆಯ ಅನ್ವಯ ಆದಾಯ ತೆರಿಗೆ ಪಾವತಿಸುವವರ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಿದೆ. ಜೊತೆಗೆ ಸ್ವಂತ ಕಾರು ಇದ್ದವರ ಬಗ್ಗೆ ಆರ್‌ಟಿಒನಿಂದ ಮಾಹಿತಿ ಪಡೆದು ಅಂತಹ ಕಾರ್ಡ್‌ಗಳನ್ನು ಅಮಾನ್ಯ ಮಾಡಲು ಮುಂದಾಗಿದ್ದಾರೆ. ಸದ್ಯ ಅಧಿಕಾರಿಗಳು, 4 ಅಂತಸ್ತಿನ ಮನೆ ಇದ್ದವರು ಹಾಗೂ 10 ರಿಂದ 12 ಎಕರೆ ನೀರಾವರಿ ಜಮೀನು ಇದ್ದವರು ಕೂಡಾ ಆಹಾರ ಇಲಾಖೆ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಇಂಥವರನ್ನ ಮಟ್ಟಹಾಕುವಂತೆಯೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.