ಲಕ್ನೋ: ಹೊಟ್ಟೆ ನೋವೆಂದು ಬಂದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು 62 ಸ್ಟೀಲ್ ಚಮಚಗಳನ್ನು (Steel Spoon) ಹೊರತೆಗೆದಿರುವ ಘಟನೆ ಉತ್ತರಪ್ರದೇಶದ (UttarPradesh) ಮುಜಾಫರ್ ನಗರದಲ್ಲಿ ನಡೆದಿದೆ.
UP | 62 spoons have been taken out from the stomach of 32-year-old patient, Vijay in Muzaffarnagar. We asked him if he ate those spoons & he agreed. Operation lasted for around 2 hours, he is currently in ICU. Patient has been eating spoons for 1 year: Dr Rakesh Khurrana (27.09) pic.twitter.com/tmqnfWJ2lY
— ANI UP/Uttarakhand (@ANINewsUP) September 28, 2022
- Advertisement 2
ಬೋಪಾಡಾ ಗ್ರಾಮದಲ್ಲಿ ವಾಸಿಸುತ್ತಿದ್ದ ವಿಜಯ್ (32) ತೀವ್ರ ಹೊಟ್ಟೆ ನೋವಿನಿಂದ ಮುಜಾಫರ್ ನಗರದ ಆಸ್ಪತ್ರೆಗೆ (Hospital) ದಾಖಲಾಗಿದ್ದರು. ವೈದ್ಯರು ತಪಾಸಣೆ ನಡೆಸಿದ ಬಳಿಕ ಹೊಟ್ಟೆಯಲ್ಲಿ ಚಮಚಗಳಿರುವುದು ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ. ನಂತರ ಸುಮಾರು 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ರಾಕೇಶ್ ಖುರಾನ, 62 ಸ್ಟೀಲ್ ಸ್ಪೂನ್ಗಳನ್ನ ಹೊರತೆಗೆದಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಮತ್ತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ : ಬಿ.ವೈ. ವಿಜಯೇಂದ್ರ
- Advertisement 3
- Advertisement 4
ಇದೇ ರೀತಿಯ ಘಟನೆಯಲ್ಲಿ ರಾಜಸ್ಥಾನದ ಜೋಧ್ಪುರದಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಖಿನ್ನತೆಗೆ ಒಳಗಾಗಿ 1 ರೂಪಾಯಿಯ 63 ನಾಣ್ಯಗಳನ್ನು ನುಂಗಿದ್ದಾರೆ. ಇದರಿಂದ ಹೊಟ್ಟೆಯಲ್ಲಿ ಬೃಹತ್ ಗೆಡ್ಡೆಯಂತಾಗಿದ್ದು, ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ಮೂಲಕ ನಾಣ್ಯಗಳನ್ನು ಹೊರತೆಗೆಯಲಾಗಿದೆ.