ಬೆಂಗಳೂರು: ಕಾಂಗ್ರೆಸ್‌ನ (Congress) ಮಹತ್ವದ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯಕ್ಕೆ (Annabhagya) ವಿಘ್ನ ಎದುರಾಗಿದೆ. ಸರ್ಕಾರ ಬಿಪಿಎಲ್ ಕಾರ್ಡ್‌ದಾರರಿಗೆ (BPL Card Holders) ಶಾಕ್ ನೀಡಿದೆ. ಜನರಿಗೆ ಕಳೆದ ಎರಡು ತಿಂಗಳ ಅಕ್ಕಿ ಹಣ ಸಿಕ್ಕಿಲ್ಲ. ಹೀಗಾಗಿ ಜನ ನ್ಯಾಯಬೆಲೆ ಅಂಗಡಿಯವರ ಜೊತೆ ಜಗಳ ಮಾಡುತ್ತಿದ್ದಾರೆ. ನಮಗೆ ದುಡ್ಡು ಕೊಡದಿದ್ರೂ ಪರವಾಗಿಲ್ಲ, ಆಹಾರ ಪದಾರ್ಥನಾದ್ರೂ ಕೊಡಿ ಎನ್ನುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡಾ ಒಂದು. ಬಿಪಿಎಲ್ ಕುಟುಂಬಗಳಿಗೆ ಅನುಕೂಲವಾಗಲೆಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಅನ್ನಭಾಗ್ಯ ವಿಚಾರದಲ್ಲಿ ಕರ್ನಾಟಕದ ಪಾಲಿನ ಉಚಿತ 5 ಕೆಜಿ ಅಕ್ಕಿ ನೀಡುವ ವಿಚಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿತ್ತು. ಸದ್ಯ ಸರ್ಕಾರ ಬಿಪಿಎಲ್ ಕಾರ್ಡ್ದಾರ ಕುಟುಂಬಗಳ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ಪ್ರತಿ ಕೆಜಿ ಅಕ್ಕಿಗೆ ತಲಾ 34 ರೂ.ನಂತೆ ಒಟ್ಟು 5 ಕೆಜಿ ಅಕ್ಕಿಗೆ 170 ರೂ. ನೀಡಲಾಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ಯಾವುದೇ ಹಣ ಪಾವತಿ ಆಗಿಲ್ಲ. ಈ ಬಗ್ಗೆ ಜನರಿಂದ ಹಾಗೂ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಂಗಳೂರು | ಬಿಎಂಟಿಸಿ ಚಾಲಕನ ಮೇಲೆ ಬೈಕ್ ಸವಾರನಿಂದ ಹಲ್ಲೆ
Advertisement
Advertisement
ಕಳೆದ ಎರಡು ದಿನದ ಹಿಂದೆ ಅಗಸ್ಟ್ ತಿಂಗಳ ಡಿಬಿಟಿ ಅಥವಾ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ಹಣ ಬಂದಿದೆ. ಆದರೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಎರಡು ತಿಂಗಳ ಹಣವನ್ನು ಆಹಾರ ಹಾಗೂ ನಾಗರೀಕ ಸರಬರಾಜು ಇಲಾಖೆ ಕೊಟ್ಟಿಲ್ಲ. ಹೀಗಾಗಿ ಅಕ್ಕಿಯೂ ಇಲ್ಲದೇ ಹಣವೂ ಇಲ್ಲದೇ ಬಡವರ್ಗದ ಜನ ಪರದಾಡುತ್ತಿದ್ದಾರೆ. ಹೀಗಾಗಿ ಪಡಿತರ ವಿತರಕರ ಜೊತೆ ಪ್ರತಿನಿತ್ಯ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಇದನ್ನೂ ಓದಿ: ಮೈಸೂರಿನ ಸರ್ಕಾರಿ ಶಾಲೆ ಜಾಗ ವಕ್ಫ್ ಆಸ್ತಿ – ಅಭಿನಂದನೆಗಳು ಸರ್ ಎಂದು ಸಿಎಂಗೆ ಪ್ರತಾಪ್ ಸಿಂಹ ಟಾಂಗ್
Advertisement
Advertisement
ಈ ಬಗ್ಗೆ ಮಾತನಾಡಿದ ಕೃಷ್ಣಪ್ಪ, ಜನರ ಸಮೀಕ್ಷೆಯಂತೆ 95% ಜನ ಹಣದ ಬದಲಾಗಿ, ಆಹಾರ ಪದಾರ್ಥಗಳಾಗಿ ಸಕ್ಕರೆ, ಬೇಳೆ, ಅಡುಗೆ ಎಣ್ಣೆ, ಉಪ್ಪು ಕೊಡಿ ಎಂದಿದ್ದಾರೆ. ಕೇಂದ್ರದಿಂದ ಸರ್ಕಾರ ಅಕ್ಕಿ ಖರೀದಿಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರೇಯಸಿ ತಾಯಿಗಾಗಿ ಚೈನ್ ಕಳ್ಳತನ – ಡ್ಯಾನ್ಸ್ ಮಾಸ್ಟರ್ ಅರೆಸ್ಟ್