Bengaluru CityDistrictsKarnatakaLatestMain Post

ಟಿಸೊಲ್ ಸರ್ಟಿಫಿಕೇಟ್ ಕಾರ್ಯಕ್ರಮ ಪೂರ್ಣಗೊಳಿಸಿದ ಸರ್ಕಾರಿ ಶಾಲಾ ಶಿಕ್ಷಕರು

ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳ 45 ಇಂಗ್ಲಿಷ್ ಶಿಕ್ಷಕರು, ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಅಮೇರಿಕ ರಾಯಭಾರ ಕಚೇರಿ ವತಿಯಿಂದ ಚೆನ್ನೈನಲ್ಲಿರುವ ಅಮೇರಿಕ ದೂತಾವಾಸ ಕಚೇರಿಯು ನೀಡುವ ಟೀಚಿಂಗ್ ಇಂಗ್ಲಿಷ್ ಟು ಸ್ಪೀಕರ್ಸ್ ಆಫ್ ಅದರ್ ಲಾಂಗ್ವೇಜಸ್(ಟೆಸೊಲ್ ಕೋರ್ ಸರ್ಟಿಫಿಕೇಟ್ ಪ್ರೋಗ್ರಾಮ್)(ಟಿಸಿಸಿಪಿ) ಅನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇದು ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ ಮತ್ತು ವಿಶ್ವದ ಅತ್ಯುತ್ತಮ ಇಂಗ್ಲಿಷ್ ಭಾಷೆಯ ಬೋಧನೆಯ ಸಂಸ್ಥೆಗಳಲ್ಲಿ ಒಂದಾದ ಟಿಇಎಸ್‍ಒಎಲ್ ಇಂಟರ್‌ ನ್ಯಾಷನಲ್ ನಡುವಿನ ಮೊಟ್ಟ ಮೊದಲ ಸಹಯೋಗವಾಗಿದೆ. ಈ ಕಾರ್ಯಕ್ರಮದ ಪದವೀಧರರು ಈ ಕೋಸ್ರ್ನಿಂದ ಕಲಿತಿದ್ದನ್ನು ಅವರ ತರಗತಿಗಳಲ್ಲಿ ಅನುಷ್ಠಾನಗೊಳಿಸುವುದಲ್ಲದೆ, ರಾಜ್ಯಾದ್ಯಂತ ಇರುವ ಇತರೆ ಮಾಧ್ಯಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ, ಬೋಧನೆ ನೀಡುವ ಮೂಲಕ ವೃತ್ತಿಪರ ಅಭಿವೃದ್ಧಿ ತರುತ್ತಾರೆ.

ಟಿಇಎಸ್‍ಒಎಲ್ ಕೋರ್ ಸರ್ಟಿಫಿಕೇಟ್ ಪ್ರೋಗ್ರಾಮ್ 140-ಗಂಟೆಯ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸಂಶೋಧನೆ ಆಧಾರಿತ ಕಾರ್ಯಕ್ರಮವಾಗಿದ್ದು, ಇಂಗ್ಲಿಷ್ ಭಾಷಾ ಬೋಧನೆಯ ತಜ್ಞರು ಬೋಧಿಸುತ್ತಾರೆ. `ಫೌಂಡೇಷನ್ ಆಫ್ ಟೆಸೊಲ್’ ಆರು ವಾರಗಳ ವರ್ಚುಯಲ್ ಕೋರ್ಸ್ ಪೂರೈಸಿದ ನಂತರ ಅಭ್ಯರ್ಥಿಗಳು, ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಸೌಥ್ ಇಂಡಿಯಾದಲ್ಲಿ ನಡೆದ ಎರಡನೇ ಹಂತದ ಎರಡು ವಾರಗಳ ಮುಖತಃ ಕಾರ್ಯಾಗಾರ `ಟೀಚಿಂಗ್ ಅಂಡ್ ಅಸೆಸಿಂಗ್ ಅಡಾಲಸೆಂಟ್ ಟೀಚರ್ಸ್’ ದಲ್ಲಿ ಭಾಗಿಯಾಗಿದ್ದರು. ಕಲೆ ಮತ್ತು ಕರಕುಶಲ ಕಲೆ, ಸಂಗೀತ ಮತ್ತು ಚುಟುಕು ನಾಟಕಗಳಂತಹ ಉಲ್ಲಾಸದಾಯಕ ಚಟುವಟಿಕೆಗಳು ಮತ್ತು ಕಲಿಕಾ ತಂತ್ರಗಳನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿತರು. ಈ ಸಾಧನಗಳು ಕರ್ನಾಟಕದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪ್ರಾವೀಣ್ಯತೆ ಮತ್ತು ಭಾರತದ ಹೊಸ ಶೈಕ್ಷಣಿಕ ನೀತಿ ಕಡ್ಡಾಯಗೊಳಿಸಿರುವ 21ನೇ ಶತಮಾನದ ಕೌಶಲ್ಯಗಳನ್ನು ನೀಡುವ ಮೂಲಕ ಶಿಕ್ಷಕರಿಗೆ ವಿದ್ಯಾರ್ಥಿ ಕೇಂದ್ರಿತ ತರಗತಿಗಳನ್ನು ಸೃಷ್ಟಿಸಲು ನೆರವಾಗುತ್ತವೆ.

ಕರ್ನಾಟಕದ ಇಂಗ್ಲಿಷ್ ಶಿಕ್ಷಕರಲ್ಲಿ ಹೂಡಿಕೆ ಮಾಡುವುದು ಮತ್ತು ಅವರಿಗೆ ಅವರ ತರಗತಿಗಳನ್ನು ಪರಿವರ್ತಿಸಲು ಅಗತ್ಯವಾದ ಸಾಧನಗಳನ್ನು ಒದಗಿಸುವುದು ಇದರ ತರಬೇತಿಯ ಗುರಿ ಎಂದು ಚೆನ್ನೈನಲ್ಲಿರುವ ಅಮೇರಿಕ ದೂತಾವಾಸದ ಕಲ್ಚರಲ್ ಅಫೇರ್ಸ್ ಆಫೀಸರ್ ಸ್ಕಾಟ್ ಹಾರ್ಟ್ ಮನ್ನ್ ಹೇಳಿದರು. ಮಾಜಿ ಇಂಗ್ಲಿಷ್ ಶಿಕ್ಷಕ ಹಾಗೂ ಶಿಕ್ಷಕ ತರಬೇತುದಾರನಾಗಿ ನಾನು ಸಬಲೀಕರಣಗೊಂಡ ಮತ್ತು ಸ್ಫೂರ್ತಿ ಪಡೆದ ಶಿಕ್ಷಕರು ಹೇಗೆ ಅವರ ವಿದ್ಯಾರ್ಥಿಗಳ ಜೀವನಗಳನ್ನು ಬದಲಿಸಬಲ್ಲರು ಹಾಗೂ ಅವರಿಗೆ ವಿಶ್ವಾಸ ಹಾಗೂ ಅವರ ಕನಸುಗಳನ್ನು ಬೆನ್ನುಹತ್ತಲು ಅಗತ್ಯವಾದ ಕೌಶಲ್ಯಗಳನ್ನು ನೀಡಬಲ್ಲರು ಎನ್ನುವುದರ ಅರಿವು ನನಗಿದೆ ಎಂದರು. ಇದನ್ನೂ ಓದಿ: ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಪಡೆದ ಶಿಕ್ಷಕರಿಗೆ ಅವರು ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ಶಿಕ್ಷಕರಿಗೆ ಗಹನ ಮತ್ತು ಸಂವಾದಾತ್ಮಕ ತರಬೇತಿ ನೀಡಿದ ಅಮೆರಿಕ ರಾಯಭಾರ ಕಚೇರಿ ಮತ್ತು ಟಿಸೊಲ್‍ಗೆ ಆಭಾರಿಯಾಗಿದೆ. ತರಬೇತಿಯಲ್ಲಿ ಭಾಗವಹಿಸಿದ ಬಹುತೇಕ ಶಿಕ್ಷಕರು ಅತ್ಯುತ್ತಮ ಸಾಧನೆ ಮಾಡಿರುವುದು ಖುಷಿ ತಂದಿದೆ. ಇವರೆಲ್ಲಾ ಇಂಗ್ಲಿಷ್ ಭಾಷೆಯ ಸುಗಮಕಾರರ ರಾಯಭಾರಿಗಳಾಗಿ ಮತ್ತು ತರಬೇತಿಯಲ್ಲಿನ ಕಲಿಕೆಯನ್ನು ರಾಜ್ಯದ ಪ್ರತಿ ತರಗತಿಗೆ ತಲುಪುವಂತೆ ಮಾಡುವ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದರು.

ಟಿಸೊಲ್ ಇಂಟನ್ರ್ಯಾಷನಲ್ ಟ್ರೈನರ್ ಹೀಡಿ ಫಾಸ್ಟ್ ಪ್ರಕಾರ, ಕರ್ನಾಟಕದ ಶಾಲಾ ಶಿಕ್ಷಕರೊಂದಿಗೆ ಕೆಲಸ ಮಾಡುವುದು ಆನಂದದ ಹಾಗೂ ಶ್ರೀಮಂತಗೊಳಿಸುವ ವೃತ್ತಿಪರ ಅನುಭವವಾಗಿದೆ. ಅವರು ಅತ್ಯಂತ ಕ್ರಿಯಾಶೀಲ, ಸೃಜನಶೀಲ ಮತ್ತು ಸಹಯೋಗದ ವೃತ್ತಿಪರರು. ಇದು ಅದ್ಭುತವಾದ ಸಾಮೂಹಿಕ ಮತ್ತು ಸಾಂಸ್ಕೃತಿಕ ವಿನಿಮಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಮ್ಮಾರ್ ಪ್ರಶಾಂತ್, ಟೆಸೊಲ್ ತರಬೇತಿಯು ನಮ್ಮ ತರಗತಿಗಳನ್ನು ಪರಿವರ್ತಿಸಲು ನೆರವಾಗುತ್ತದೆ ಇದರಿಂದ ಅವು ಹೆಚ್ಚು ಆವಿಷ್ಕಾರಕ ಮತ್ತು ವಿದ್ಯಾರ್ಥಿ-ಸ್ನೇಹಿಯಾಗುತ್ತವೆ. ಅವರ ಜೊತೆಯಲ್ಲಿ ಭಾಗವಹಿಸಿದ ಸೋಫಿಯಾ ವಿನೋದಿನಿ, ಟಿಸಿಸಿಪಿ ನನ್ನ ಜ್ಞಾನವನ್ನು ಮತ್ತು ಬೋಧನೆಯ ರೂಢಿಗಳನ್ನು ನನ್ನ ನಿರೀಕ್ಷೆಗಳನ್ನು ಮೀರಿ ಹೆಚ್ಚಿಸಿದೆ ಎಂದು ಹೇಳಿದರು.

Leave a Reply

Your email address will not be published.

Back to top button