LatestLeading NewsMain PostNational
ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಎಲೆಕ್ಷನ್- ಒಬಿಸಿ ಕೋಟಾಕ್ಕೆ ಸುಪ್ರೀಂ ಸಮ್ಮತಿ

ಭೋಪಾಲ್: ಹಿಂದುಳಿದ ವರ್ಗ (OBC)ಗಳಿಗೆ ಮೀಸಲಾತಿಯೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ಅನುಮತಿ ನೀಡಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸುವಂತೆಯೂ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗವು ತನ್ನ ವರದಿಯನ್ನು ಮಂಡಿಸಿದ್ದು, ಅದರಲ್ಲಿ ‘ತ್ರಿವಳಿ ಪರೀಕ್ಷೆ’ ಅನುಸರಿಸಲಾಗಿದೆ ಎಂದು ಹೇಳಿದೆ.
ನಿಖರ ಅಂಕಿ ಅಂಶಗಳ ಆಧಾರದ ಮೇಲೆ ಪರಿಶೀಲನೆ ನಡೆಸಬೇಕು. ಆ ಬಳಿಕವೇ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗದ ಜನರಿಗೆ ಶೇ. 27ರಷ್ಟು ಮೀಸಲಾತಿ ನೀಡಬೇಕು ಎಂದು ಕೋರ್ಟ್ ಹೇಳಿತ್ತು. ಇದನ್ನೂ ಓದಿ: ಮೋದಿ ಎಂದಿಗೂ ನಾನೇ ನೀಡಿದ್ದು ಎಂದು ಹೇಳಿರಲಿಲ್ಲ: ಸಿದ್ದುಗೆ ಟಾಂಗ್ ನೀಡಿದ ಸಿಟಿ ರವಿ
ಮಧ್ಯಪ್ರದೇಶದಲ್ಲಿ 2 ವರ್ಷಗಳಿಂದ 23,000 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆ ಸ್ಥಾನಗಳು ಖಾಲಿ ಇದ್ದು ಚುನಾವಣೆಗಾಗಿ ಕಾಯುತ್ತಿವೆ.