ಕೋಲಾರ: ಅದು ಊರ ಮಧ್ಯದಲ್ಲಿರುವ ಸರ್ಕಾರಿ ಶಾಲೆ (Government School), ನೂರಾರು ಮಕ್ಕಳು ಆ ಶಾಲೆಯಲ್ಲಿ ಬಂದು ನಿತ್ಯ ಪಾಠ ಕಲಿಯುತ್ತಾರೆ. ಆದರೆ ಅದೇ ಊರಿನ ಜನರು ಆ ಶಾಲೆಯನ್ನ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದ್ದಾರೆ. ಇದ್ರ ಪರಿಣಾಮ ತಿಪ್ಪೆಯಂತ ಸ್ಥಳದಲ್ಲಿ ಮಕ್ಕಳು ಪಾಠ ಕಲಿಯುವ ಸ್ಥಿತಿ ಎದುರಾಗಿದೆ.
ಒಂದೆಡೆ ಕಸದ (Garbage) ರಾಶಿ. ಕಟ್ಟಡದ ತ್ಯಾಜ್ಯ, ಕಿತ್ತು ಹಾಕಿರುವ ಕಾಂಕ್ರೀಟ್ ರಸ್ತೆಯ ತ್ಯಾಜ್ಯ, ಇನ್ನೊಂದಡೆ ಶಾಲಾ ಕಟ್ಟಡದ ಎದುರಲ್ಲೇ ಬೆಳೆದು ನಿಂತ ಬೇಲಿ, ಬೀಳುವ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಕೋಲಾರ ತಾಲ್ಲೂಕು ಕೋಡಿಕಣ್ಣೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ. ಈ ಶಾಲೆಗೆ ಮೀಸಲಾದ ಎರಡು ಎಕರೆ ಜಾಗದಲ್ಲಿ ಶಾಲಾ ಕಟ್ಟಡವೂ ಇದೆ. ಜೊತೆಗೆ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಆಟವಾಡಲು ಇರಬೇಕಿದ್ದ ಮೈದಾನದ ಜಾಗದಲ್ಲಿ ಮಾತ್ರ ರಾಶಿ ರಾಶಿ ಕಸವಿದೆ. ಒಟ್ಟು 110 ಮಕ್ಕಳು ಓದುವ ಶಾಲೆ ಮುಂದೆ ಗ್ರಾಮಸ್ಥರು ಕಸ ಎಸೆಯುತ್ತಿದ್ದಾರೆ.
ಎರಡು ಎಕರೆ ಸರ್ಕಾರಿ ಶಾಲೆಯ ಆವರಣದಲ್ಲಿ ಅಂಗನವಾಡಿಯಿಂದ ಹಿಡಿದು 8ನೇ ತರಗತಿವರೆಗೆ ಮಕ್ಕಳು ವ್ಯಾಸಂಗ ಮಾಡ್ತಾರೆ. ಈ ಶಾಲೆಗೆ ಬರುವ ಮಕ್ಕಳ ಆಟ, ಪಾಠ, ಉದ್ಯಾನವನಕ್ಕೆ ಈ ಜಾಗ ಸಾಲದು ಎನ್ನುವಂತಿದೆ. ಹೀಗಿರುವಾಗ ಇದೇ ಶಾಲೆ ಆವರಣದಲ್ಲಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಓವರ್ ಹೆಡ್ ಟ್ಯಾಂಕ್ ಇದ್ದು ಅದು ಕೂಡಾ ಈಗಲೋ ಆಗಲೋ ಬೀಳುವ ಹಂತದಲ್ಲಿದೆ. ಇದನ್ನೂ ಓದಿ: ಬೆಳಗಾವಿ | ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ – ಚಲಾವಣೆ ಇಲ್ಲದ 400 ಕೋಟಿ ದರೋಡೆ
ಇದೇ ಶಾಲೆಯ ಆವರಣದಲ್ಲೇ ಜಲ ಜೀವನ್ ಮಿಷನ್ ಯೋಜನೆ ಅಡಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ. ಟ್ಯಾಂಕ್ ನಿರ್ಮಾಣ ಕಾಮಗಾರಿಗೆಂದು ತಂದಿದ್ದ ವಸ್ತುಗಳು ಎಲ್ಲವನ್ನೂ ಅಲ್ಲೇ ಬಿಸಾಡಿದ್ದಾರೆ. ಶಾಲಾ ಕೊಠಡಿಗಳು ಕೂಡ ಕೆಲವು ಸುಸ್ಥಿತಿಯಲ್ಲಿವೆ. ಹೀಗೆ ಗ್ರಾಮದ ಮಕ್ಕಳ ಭವಿಷ್ಯವನ್ನ ರೂಪಿಸುವ ಜ್ಞಾನ ಕೇಂದ್ರವಾಗಿದ್ದ ಸರ್ಕಾರಿ ಶಾಲೆ ಗ್ರಾಮದ ಕಸದ ತೊಟ್ಟಿಯಾಗಿ, ತಿಪ್ಪೆಯಾಗಿ ಮಾರ್ಪಟ್ಟಿದೆ.
ಇನ್ನು ಶಾಲೆಯ ಶಿಕ್ಷಕರು ಕೂಡಾ ಸಂಜೆ ಶಾಲೆಯಿಂದ ಮನೆಗೆ ಹೋದರೆ ಮುಗಿದೇ ಹೋಯಿತು. ಈ ಶಾಲೆಯಲ್ಲಿ ಏನಾಗುತ್ತೆ ಅನ್ನೋದರ ಕಡೆ ಗಮನ ಹರಿಸೋದಿಲ್ಲ. ಇನ್ನು ಶಾಲೆಯ ದುಸ್ಥಿತಿಯ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಆದರೂ ಯಾರೊಬ್ಬರು ತಲೆ ಕೆಡಿಸಿಕೊಂಡಿಲ್ಲ ಅನ್ನೋದು ಶಾಲೆಯ ಮುಖ್ಯಶಿಕ್ಷಕರ ಮಾತು. ಇದನ್ನೂ ಓದಿ: Union Budget 2026: ರಕ್ಷಣೆಯಿಂದ ಆಟೋಮೊಬೈಲ್‌ವರೆಗೆ; ಯಾವ್ಯಾವ ವಲಯಕ್ಕೆ ನಿರೀಕ್ಷೆ ಏನು?





