ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ (Elephant) ದಾಂಧಲೆ ಮುಂದುವರಿದಿದೆ. ಗ್ರಾಮದೊಳಗೆ ಹಿಂಡು ಹಿಂಡಾಗಿ ಗಜಪಡೆ ಓಡಾಡಿದ್ದು, ಸರ್ಕಾರಿ ಶಾಲೆಯ ಗೇಟ್‌ಅನ್ನೇ (School Gate) ಮುರಿದು ಹಾಕಿವೆ.
ಹಾಸನ (Hassan) ಜಿಲ್ಲೆ, ಸಕಲೇಶಪುರ ತಾಲೂಕಿನ ನಿಡನೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡನ್ನು ಕಂಡು ಗ್ರಾಮಸ್ಥರು ಮನೆಯೊಳಗೆ ಓಡಿ ಹೋಗಿದ್ದಾರೆ. ಆನೆಗಳು ಹಿಂಡು ಹಿಂಡಾಗಿ ಅಲೆದಾಡುತ್ತಾ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಕಾಡಾನೆಗಳ ಸಂಚಾರದಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಗಜಪಡೆಯನ್ನು ಸ್ಥಳಾಂತರಿಸುವಂತೆ ಕಾಡಂಚಿನ ಜನರು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಕಳೆದ 4 ದಿನಗಳಿಂದ ಸಕಲೇಶಪುರ ತಾಲೂಕಿನ, ಕೌಡಳ್ಳಿ ಗ್ರಾಮದ ಬಳಿ 6 ಕಾಡಾನೆಗಳು ಬೀಡುಬಿಟ್ಟಿವೆ. ಹಗಲು ವೇಳೆಯೇ ಗ್ರಾಮದೊಳಗೆ ಆನೆಗಳು ಬರುತ್ತಿದ್ದು, ಕೌಡಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಗೇಟ್ ಮುರಿದು ಹಾಕಿವೆ. ನಿನ್ನೆ ರಜಾ ದಿನವಾಗಿದ್ದರಿಂದ ಅನಾಹುತವೊಂದು ತಪ್ಪಿದಂತಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ
ಕಾಡಾನೆ ಹಾವಳಿಯಿಂದ ಭಯದಲ್ಲೇ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳುತ್ತಿದ್ದಾರೆ. ಕಾಡಾನೆಗಳ ಉಪಟಳದಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ನೀಡುವಂತೆ ಜನರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್