ನವದೆಹಲಿ: ಪ್ರತಿ ಜಿಲ್ಲೆಯಲ್ಲಿ 3 ಸ್ಕ್ರ್ಯಾಪಿಂಗ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ತಿಳಿಸಿದ್ದಾರೆ.
ಆಟೋಮೋಟಿವ್ ಕಾಂಪೋನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ACMA) ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಮೂರು ನೋಂದಾಯಿತ ಸ್ಕ್ರ್ಯಾಪಿಂಗ್ ಮಾಡುವ ಯೋಜನೆಯನ್ನು ಘೋಷಿಸಿದರು. ಇದನ್ನೂ ಓದಿ: ಕಾವೇರಿದ ಭಾರತ Vs ಪಾಕ್ T20 ವಿಶ್ವಕಪ್ ಫೈಟ್ – ಟಿಕೆಟ್ ಸೋಲ್ಡ್ ಔಟ್
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಗುಜುರಿ ನೀತಿಯನ್ನು(Vehicle Scrappage Policy) ಜಾರಿ ಮಾಡಿದ್ದರು. ಹೊಸ ನೀತಿಯ ಅಡಿಯಲ್ಲಿ ಹಳೆಯ ವಾಹನಗಳನ್ನು ಗುಜುರಿಗೆ ಹಾಕಿದ ಬಳಿಕ ಖರೀದಿಸಿ ಹೊಸ ವಾಹನಗಳಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಸ್ತೆ ತೆರಿಗೆಯಲ್ಲಿ ಶೇ. 25 ರಷ್ಟು ತೆರಿಗೆ ರಿಯಾಯಿತಿಯನ್ನು ನೀಡಲಾಗುತ್ತದೆ.
Advertisement
ವಾಹನ ಗುಜುರಿ ನೀತಿ 2022ರ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಖಾಸಗಿ ವಾಹನಗಳಿಗೆ 20 ವರ್ಷ, ವಾಣಿಜ್ಯ ಬಳಕೆಯ ವಾಹನಗಳಿಗೆ 15 ವರ್ಷ ಮಿತಿಯನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು
Advertisement
15 ವರ್ಷಕ್ಕಿಂತ ಹೆಚ್ಚಿನ ವರ್ಷದ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಇವುಗಳನ್ನು ಗುಜುರಿಗೆ ಹಾಕಿದರೆ ವಾಯ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗಲಿದೆ. ಹಳೇ ವಾಹನಗಳು ಗುಜುರಿ ಸೇರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಆಟೋಮೊಬೈಲ್(Automobile) ಕ್ಷೇತ್ರಕ್ಕೆ ಉತ್ತೇಜನ ನೀಡಿದಂತಾಗುತ್ತದೆ.