ಬೆಂಗಳೂರು: ಮದ್ಯಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದ್ದು, ಮದ್ಯ ಖರೀದಿಗೆ ಇನ್ಮುಂದೆ ಆಧಾರ್ ಕಾರ್ಡ್ ಕಡ್ಡಾಯ ಮಾಡಬೇಕು ಎಂದು ಹೇಳಲಾಗುತ್ತಿದೆ.
ಬಾರ್ ನಲ್ಲಿ ಎಣ್ಣೆ ತೆಗೆದುಕೊಳ್ಳಬೇಕು ಎಂದರೆ ಕಡ್ಡಾಯವಾಗಿ ಅಧಾರ್ ಕಾರ್ಡ್ ತೋರಿಸಬೇಕು. ಮದ್ಯ ತಗೊಂಡು ಹೋಗಿ ಕುಡಿದು ಎಲ್ಲಾದ್ರಲ್ಲಿ ಖಾಲಿ ಬಾಟಲ್ ಎಸೆದರೆ, ಆ ಬಾಟಲ್ ಮೇಲಿರುವ ಬಾರ್ ಕೋಡ್ ಆಧಾರದ ಮೇಲೆ ಇದು ಯಾವ ಬಾರಿನಲ್ಲಿ ಮಾರಾಟವಾಗಿದೆ, ಆ ಬಾರಲ್ಲಿ ಮದ್ಯ ತಗೊಂಡು ಹೀಗೆ ಬಿಸಾಕಿದ ವ್ಯಕ್ತಿ ಯಾರು ಎನ್ನುವುದನ್ನು ಆಧಾರ್ ಕಾರ್ಡ್ ಅಧಾರದ ಮೇಲೆ ಕಂಡು ಹಿಡಿದು ಬಾರ್ ನವನಿಗೂ, ಕುಡಿದವನಿಗೂ ಇಬ್ಬರಿಗೂ ಫೈನ್ ಹಾಕುತ್ತಾರೆ.
Advertisement
Advertisement
ಮಂಗಳೂರಿನ ರಾಷ್ಟ್ರೀಯ ಪರಿಸರ ಒಕ್ಕೂಟ ಎನ್ನುವ ಎನ್‍ಜಿಓ ಈ ರೀತಿಯ ಮನವಿ ಇರುವ ಪತ್ರವನ್ನು ಮಂಡ್ಯದ ಮಳವಳ್ಳಿ ಅಬಕಾರಿ ಇಲಾಖೆ ಬರೆದಿದೆ. ಅಬಕಾರಿ ಇಲಾಖೆಯಿಂದ ಸರ್ಕಾರ ಸಾಕಷ್ಟು ದುಡ್ಡು ಮಾಡುತ್ತೆ, ಕುಡುಕರ ಕ್ಷೇಮಾಭಿವೃದ್ಧಿಗೆ ಹಣ ಮೀಸಲಿಡಬೇಕು. ಕುಡಿದು ಅನಾರೋಗ್ಯಕ್ಕೆ ತುತ್ತಾದರೆ ಸರ್ಕಾರ ಉಚಿತ ಚಿಕಿತ್ಸೆ ಕೊಡಿಸೋದರ ಜೊತೆಗೆ ಅವರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಬೇಕು ಎಂದು ಪತ್ರ ಬರೆದಿದೆ.
Advertisement
ಈ ಪತ್ರಕ್ಕೆ ಪ್ರತಿಕ್ರಿಯಿಸಿದ, ರಾಜ್ಯ ಅಬಕಾರಿ ಇಲಾಖೆಯ ಆಯುಕ್ತ ಯಶವಂತ್ ಈ ರೀತಿಯ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ, ಇದೆಲ್ಲಾ ಮಾಡುವುದ್ದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.