ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ (Bengaluru Traffic Problem) ನಿವಾರಣೆಗೆ ಸರ್ಕಾರ ಸುರಂಗ ಮಾರ್ಗದ ಮೊರೆ ಹೋಗಿದೆ. 50 ಕೋಟಿ ರೂ. ವೆಚ್ಚದಲ್ಲಿ 6 ಕಡೆ ಸುರಂಗ ಮಾರ್ಗ ಮಾಡಲು ಮುಂದಾಗಿದೆ. ಈ ಸುರಂಗ ಮಾರ್ಗ ನಿರ್ಮಾಣಕ್ಕೆ ಕನಿಷ್ಠ 5 ವರ್ಷ ಸಮಯ ಬೇಕಾಗಲಿದೆ. ಈ ನಡುವೆ ಸುರಂಗ ಮಾರ್ಗ ನಿರ್ಮಾಣದ ಹೊಣೆ BBMP ಗಾ? ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕಾ? (BDA) ಅನ್ನೋ ಪ್ರಶ್ನೆ ಎದ್ದಿದೆ.
Advertisement
ಬ್ರ‍್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಜನರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕರಿಂದ ಹಲವಾರು ಸಲಹೆಗಳು ಬರ್ತಿವೆ, ಅದರಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಒಂದು. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಜೋರಾಗಿದ್ದು ಕಿರಿ-ಕಿರಿಗೆ ಪೊಲೀಸರು ಹೈರಾಣಾಗಿದ್ದಾರೆ. ಹಾಗಾಗಿ ಸರ್ಕಾರ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸುರಂಗ ಮಾರ್ಗದ (Subway Road) ಮೊರೆಹೋಗಿದೆ. 50 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ರಸ್ತೆಗಳ ನಿರ್ಮಾಣಕ್ಕೆ ಪ್ಲ್ಯಾನ್ ಮಾಡುತ್ತಿದೆ. ಇದನ್ನೂ ಓದಿ: ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ
Advertisement
Advertisement
ಸುರಂಗ ರಸ್ತೆ ಮಾರ್ಗಗಳ ನಿರ್ಮಾಣ ಬಗ್ಗೆ ಬೇರೆ ದೇಶಗಳ ತಾಂತ್ರಿಕ ತಜ್ಞರಿಂದಲೂ ಸಲಹೆ ಮತ್ತು ಸುರಂಗ ನಿರ್ಮಾಣ ಸಲಹಾ ಸಂಸ್ಥೆ ಅಧಿಕಾರಿಗಳಿಂದಲೂ ಸರ್ಕಾರ ಸಲಹೆ ಪಡೆದಿದೆ. 2 ಹಂತಗಳಲ್ಲಿ ಸುರಂಗ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ದು, 22 ಸಾವಿರ ಕೋಟಿ ವೆಚ್ಚದಲ್ಲಿ 50 ಕಿಮೀ ರಸ್ತೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಸುರಂಗ ಮಾರ್ಗವನ್ನ 4 ಅಥವಾ 6 ಪಥದಲ್ಲಿ ನಿರ್ಮಾಣ ಮಾಡಲು ಚಿಂತನೆ ನಡೆದಿದೆ. ಸರ್ಕಾರದ ನಿರ್ಧಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಟನಲ್ ನಿರ್ಮಾಣ ಮಾಡೋಕೆ ಹೋಗಿ ಬೆಂಗಳೂರನ್ನ ಸಮಾಧಿ ಮಾಡಬೇಡಿ. ವೈಜ್ಞಾನಿಕವಾಗಿ ಕೆಲಸ ಮಾಡಿ ಅಂತಾ ಸಲಹೆ ನೀಡಿದ್ದಾರೆ.
Advertisement
ಅಂದುಕೊಂಡಂತೆ ಈ ಕೆಳಕಂಡ ಮಾರ್ಗಗಳಲ್ಲಿ ರಸ್ತೆ ನಿರ್ಮಾಣ ಮಾಡಬೇಕಿದ್ರೆ ಸುಮಾರು 5 ವರ್ಷ ಸಮಯ ತೆಗೆದುಕೊಳ್ಳಲಿದೆ. ಬೆಂಗಳೂರು ಕೇಂದ್ರದ ಸುತ್ತಲೂ ಹೊರ ವಲಯಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಚಿಂತನೆ ಮಾಡಲಾಗ್ತಿದೆ. ಇದನ್ನೂ ಓದಿ: JDS ಪರ ಪ್ರಚಾರ ಮಾಡಿದ್ದಕ್ಕೆ ಮಗನ ವರ್ಗಾವಣೆ- ಆತ್ಮಹತ್ಯೆಗೆ ಯತ್ನಿಸಿದ ಜಗದೀಶ್ ತಂದೆ ಬೇಸರ
ಎಲ್ಲೆಲ್ಲಿ ಬರಲಿದೆ ಸುರಂಗ ರಸ್ತೆ?
* ಉತ್ತರದಿಂದ ದಕ್ಷಿಣ ಕಾರಿಡಾರ್ – ಒಟ್ಟು 27 ಕಿ.ಮೀ
ಬಳ್ಳಾರಿ ರಸ್ತೆಯಿಂದ ಹೊಸೂರು ರೋಡ್
ಯಲಹಂಕ – ಮೇಖ್ರಿ ಸರ್ಕಲ್ ಮಾರ್ಗವಾಗಿ ಕೇಂದ್ರೀಯ ರೇಷ್ಮೆಮಂಡಳಿ
* ಪೂರ್ವದಿಂದ ಪಶ್ಚಿಮ ಕಾರಿಡಾರ್ 1 – ಒಟ್ಟು 29 ಕಿ.ಮೀ
ಕೆ.ಆರ್ ಪುರದಿಂದ ಗೊರಗುಂಟೆ ಪಾಳ್ಯ
ಹಳೇ ಮದ್ರಾಸ್ ರಸ್ತೆ – ಐಟಿಪಿಎಲ್ – ವರ್ತುಲ ರಸ್ತೆ
ರಾಮಮೂರ್ತಿ ನಗರ ಕಡೆಯಿಂದ ಹೊರಗುಂಟೆ ಪಾಳ್ಯ
* ಪೂರ್ವದಿಂದ ಪಶ್ಚಿಮ ಕಾರಿಡಾರ್ 2 – ಒಟ್ಟು 28.90 ಕಿ.ಮೀ
ಹಳೇ ಏರ್‌ಪೋರ್ಟ್ ರಸ್ತೆಯಿಂದ ಮೈಸೂರು ರಸ್ತೆ
ವರ್ತೂರು ಕೋಡಿಯಿಂದ ಜ್ಞಾನಭಾರತಿವರೆಗೆ
* ಸಂಪರ್ಕ ಕಾರಿಡಾರ್ 1 – ಒಟ್ಟು 4.5 ಕಿ.ಮೀ
ಸೇಂಟ್ ಜಾನ್ ಆಸ್ಪತ್ರೆ ಜಂಕ್ಷನ್‌ನಿಂದ ಅಗರ ವರೆಗೆ
* ಸಂಪರ್ಕ ಕಾರಿಡಾರ್ 2 – ಒಟ್ಟು 2.8 ಕಿ.ಮೀ
* ಸಂಪರ್ಕ ಕಾರಿಡಾರ್ 3 – ಒಟ್ಟು 6.45 ಕಿ.ಮೀ
ವೀಲರ್ಸ್ ರಸ್ತೆ ಜಂಕ್ಷನ್‌ನಿಂದ ಹೊರವರ್ತುಲದ ಕಲ್ಯಾಣನಗರಕ್ಕೆ
Web Stories