ಬೆಳಗಾವಿ: ಇ-ಖಾತೆ ನೀಡುವಲ್ಲಿ ವಿಳಂಬವಾಗಲು ಒಂದು ಸಾಫ್ಟ್‌ವೇರ್ ಕಾರಣವಾಗಿತ್ತು ಎಂಬ ಅಂಶವನ್ನು ರಾಜ್ಯ ಸರ್ಕಾರ ಹೇಳಿದೆ.
Advertisement
ಶಾಸಕ ರಾಜೇಶ್ ನಾಯಕ್, ಇ-ಸ್ವತ್ತು ತಂತ್ರಾಂಶದಲ್ಲಿ ಕಳೆದ ಒಂದು ತಿಂಗಳಿನಿಂದ ಸರ್ವರ್ ಸಮಸ್ಯೆ ಇದ್ದು, ಗ್ರಾಮೀಣ ಪ್ರದೇಶದ ಖಾತೆದಾರರಿಗೆ ಇ-ಖಾತೆ ನೀಡುವಲ್ಲಿ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಮತ್ತು ಸರ್ವರ್ ಸಮಸ್ಯೆಗೆ ಸರ್ಕಾರ ಕಂಡುಕೊಂಡ ಪರಿಹಾರ ಕ್ರಮ ಏನು ಎಂದು ಚುಕ್ಕೆ ಗುರುತಿನ ಪ್ರಶ್ನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪ್ರಶ್ನೆ ಕೇಳಿದ್ದರು. ಇದನ್ನೂ ಓದಿ: ಕಲಾಪಕ್ಕೆ ಅಡ್ಡಿ- ವಿಧಾನ ಪರಿಷತ್‌ನ 15 ಕಾಂಗ್ರೆಸ್ ಸದಸ್ಯರು ಅಮಾನತು
Advertisement
Advertisement
ಇದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ, ಈ ವಿಚಾರ ಗಮನಕ್ಕೆ ಬಂದಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಗಳಲ್ಲಿರುವ ಇ-ಸ್ವತ್ತು ತಂತ್ರಾಂಶದ ಸರ್ವರ್ ಗಳಿಗೆ ಒಂದು ಸಾಫ್ಟ್‍ವೇರ್ ಅಳವಡಿಸಿದ್ದರಿಂದ ಕಳೆದ ಒಂದು ತಿಂಗಳಿನಿಂದ ಈ ಸಮಸ್ಯೆಯಾಗಿದೆ. ಈ ಸಾಫ್ಟ್‌ವೇರ್ ಗಳನ್ನು ಈಗ ಡಿಸೇಬಲ್ ಮಾಡಿದ್ದು, ಸಮಸ್ಯೆ ಬಗೆಹರಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಫ್ರೀ ಹ್ಯಾಂಡ್, ಮಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಭಂಗ ಬಂದ್ರೆ ಕ್ರಮ: ಆರಗ ಜ್ಞಾನೇಂದ್ರ
Advertisement
ಸರ್ವರ್ ಸ್ಟೋರೇಜ್ ದ್ವಿಗುಣ:
ಜೊತೆಗೆ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿರುವ ಇ-ಸ್ವತ್ತು ತಂತ್ರಾಂಶಕ್ಕೆ ಸಂಬಂಧಿಸಿದ 4 ಸರ್ವರ್ ಗಳ ಸ್ಟೋರೇಜ್ ಸಾಮರ್ಥ್ಯ ದ್ವಿಗುಣಗೊಳಿಸಲಾಗಿದೆ. ಈ ರೀತಿಯ ಸಮಸ್ಯೆ ಮತ್ತೊಮ್ಮೆ ಉಂಟಾಗದಂತೆ ಇಲಾಖೆಯಿಂದ ಕ್ರಮಕೈಗೊಂಡಿರುವುದಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ವೆಸ್ಟ್ ಬಾಡಿ ಯಾರು ಅಂತ ಇಡೀ ರಾಜ್ಯಕ್ಕೆ ತಿಳಿದಿದೆ: ಜಾರಕಿಹೊಳಿಗೆ ತಿವಿದ ಸಿದ್ದರಾಮಯ್ಯ
ಆದರೆ ರಾಜ್ಯ ಸರ್ಕಾರ ಈ ಸಮಸ್ಯೆಗೆ ಕಾರಣವಾದ ಸಾಫ್ಟ್‌ವೇರ್ ಯಾವುದು ಎಂದು ಲಿಖಿತ ಉತ್ತರದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ.