ಬೆಳಗಾವಿ: ವೇಸ್ಟ್ ಬಾಡಿ ಯಾರು ಅಂತ ಇಡೀ ರಾಜ್ಯಕ್ಕೆ ತಿಳಿದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದರು.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವೇಸ್ಟ್ ಬಾಡಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ವೇಸ್ಟ್ ಬಾಡಿ, ಯಾರು ಉಪಯೋಗ ಆಗುವ ಬಾಡಿ ಎಂದು ರಾಜ್ಯದ ಜನತೆಗೆ ತಿಳಿದಿದೆ. ಅದರ ಬಗ್ಗೆ ಹೇಳುವುದೆನಿಲ್ಲ. ಸಂಸ್ಕೃತಿ, ರಾಜಕೀಯ ಕಲ್ಚರ್ ಇಲ್ಲದೇ ಇರುವವರು ಈ ರೀತಿ ಮಾತುಗಳನ್ನು ಆಡುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ ವಾಗ್ದಾಳಿ
40 ಪರ್ಸೆಂಟ್ ಕಮಿಷನ್ ಆರೋಪದ ವಿಚಾರವಾಗಿ ಸದನದಲ್ಲಿ ದಾಖಲೆ ಬಿಡುಗಡೆ ಮಾಡಲಿ ಎಂಬ ಪ್ರಶ್ನೆಗೆ ಅಸೆಂಬ್ಲಿಯಲ್ಲಿ ನೋಡಿ ಎಂದು ಹೇಳುವ ಮುಖಾಂತರ ಸಿದ್ದರಾಮಯ್ಯ ದಾಖಲೆ ಬಿಡುಗಡೆಯ ಸುಳಿವು ಬಿಟ್ಟುಕೊಟ್ಟರು. ಇದನ್ನೂ ಓದಿ: ತಿರುಪತಿ ತಿಮ್ಮಪ್ಪ ಮೂರು ತರ ಕಾಣೋ ರೀತಿಯಲ್ಲಿ ಜಾರಕಿಹೊಳಿ ಮಾತಾಡ್ತಾರೆ: ಸತೀಶ್