ಆನ್‌ಲೈನ್ ಬೆಟ್ಟಿಂಗ್‌, ಗ್ಯಾಂಬ್ಲಿಂಗ್‌ ಅಂಕುಶಕ್ಕೆ ಮುಂದಾದ ಸರ್ಕಾರ – ಹೊಸ ತಿದ್ದುಪಡಿ ಮಸೂದೆ ಮಂಡನೆಗೆ ತಯಾರಿ

Public TV
1 Min Read
online gambling

– ನಿಯಮ ಉಲ್ಲಂಘಿಸಿದ್ರೆ 3 ವರ್ಷ ಜೈಲು, 5 ಲಕ್ಷ ರೂ. ದಂಡ

ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ (Online Betting) ಹಾಗೂ ಗ್ಯಾಂಬ್ಲಿಂಗ್‌ಗೆ (Gambling) ಅಂಕುಶ ಹಾಕಲು ಸರ್ಕಾರ ಮುಂದಾಗಿದೆ. ಸರ್ಕಾರದಿಂದ ಹೊಸ ತಿದ್ದುಪಡಿ ಮಸೂದೆ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ಧಪಡಿಸಲಾಗಿದೆ.

Gambling and Betting Ads

ಮುಂಬರುವ ಅಧಿವೇಶನದಲ್ಲಿ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪ್ರಸ್ತಾಪಿತ ಕಾನೂನು ಪ್ರಕಾರ ಗೇಮ್ ಆಫ್ ಚಾನ್ಸ್ ಅಂದ್ರೆ ಯಾವುದೇ ಆಟ, ಸ್ಪರ್ಧೆಯ ಫಲಿತಾಂಶಗಳು ಅದೃಷ್ಟದಿಂದ ಅವಲಂಬಿತವಾಗಿರುವ, ಅನಿಶ್ಚಿತತೆಗಳಿಂದ ಕೂಡಿರುವ ಆನ್‌ಲೈನ್ ಗ್ಯಾಂಬ್ಲಿಂಗ್‌, ಬೆಟ್ಟಿಂಗ್ ಅಥವಾ ಪಂತ ಕಟ್ಟುವ ಚಟುವಟಿಕೆಗಳು ನಿಷಿದ್ಧ. ಪಂಥ ಕಟ್ಟುವುದು, ಹಣ ಇಡುವುದು, ಟೋಕನ್, ವರ್ಚುವಲ್ ಕರೆನ್ಸಿ ಅಥವಾ ಇ-ಫಂಡುಗಳನ್ನು ಇಟ್ಟು ಅಂತರ್ಜಾಲ, ಮೊಬೈಲ್ ಆಪ್ ಅಥವಾ ಇತರೆ ಡಿಜಿಟಲ್ ವೇದಿಕೆಗಳ ಮೂಲಕ ಆಡುವ ಆಟಗಳ ನಿಷೇಧ. ನೋಂದಾಯಿತವಲ್ಲದ ವೇದಿಕೆಗಳ ಮೂಲಕ ಇಂಥ ಆನ್ ಲೈನ್ ಬೆಟ್ಟಿಂಗ್, ಗ್ಯಾಮ್ಲಿಂಗ್ ಸೇವೆ ಕೊಡುವುದು ಸಹ ನಿಷೇಧಿಸಲು ಅವಕಾಶ ಇದೆ. ಇದನ್ನೂ ಓದಿ: ಕೆಡಿ ಟೀಸರ್ ಡೇಟ್ ಘೋಷಣೆ – ಪ್ರಚಾರದ ವೈಖರಿಯಲ್ಲಿದೆ ಮಿಸ್ಟರಿ!

Gambling and Betting Ads 1

ಮಸೂದೆಯಲ್ಲಿ ಕರ್ನಾಟಕ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರ ರಚನೆಗೆ ಅವಕಾಶ ಇದೆ. ಈ ಪ್ರಾಧಿಕಾರ ಹೊಸ ಕಾನೂನಿನಂತೆ ನಿಯಮಗಳ ಜಾರಿ, ಅನುಪಾಲನೆ, ಆನ್ ಲೈನ್ ಗೇಮಿಂಗ್ ಹಾಗೂ ಗ್ಯಾಂಬ್ಲಿಂಗ್‌ ನಿಯಂತ್ರಣದ ಮೇಲೆ ನಿಗಾ ಇಡಲಿದೆ. ಇದನ್ನೂ ಓದಿ: Heart Attack | ರಾಜ್ಯದಲ್ಲಿಂದು ಐವರು ಬಲಿ – ವಿದ್ಯಾರ್ಥಿಗಳ ಹೃದಯ ತಪಾಸಣೆಗೆ ರಾಜಣ್ಣ ಸೂಚನೆ

ಈ ಪ್ರಾಧಿಕಾರಕ್ಕೆ ಕಾನೂನು, ಸಾರ್ವಜನಿಕ ಆಡಳಿತ, ತಂತ್ರಜ್ಞಾನದ ಅನುಭವ ಹೊಂದಿರುವವರನ್ನು ರಾಜ್ಯ ಸರ್ಕಾರ ಅಧ್ಯಕ್ಷರಾಗಿ ನೇಮಿಸಲು ಅವಕಾಶ ಇದೆ. ಜೊತೆಗೆ ಮೂವರು ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಇನ್ನೂ ಹೊಸ ಮಸೂದೆ ಪ್ರಕಾರ ನಿಯಮ ಉಲ್ಲಂಘಿಸಿದ್ರೆ 3 ವರ್ಷ ಜೈಲು, 5 ಲಕ್ಷ ದಂಡದ ಶಿಕ್ಷೆ ಗೊಳಪಡಿಸಬಹುದಾಗಿದೆ. ಇದನ್ನೂ ಓದಿ: ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?

Share This Article