ರಾಯಚೂರು: ತನ್ನ ಬೊಕ್ಕಸ ತುಂಬಿಸಿಕೊಳ್ಳುವ ದೃಷ್ಟಿಯಿಂದ ಸರ್ಕಾರ ಮದ್ಯದಂಗಡಿ ತೆರೆದಿರುವುದು ಸರಿಯಲ್ಲ ಎಂದು ರಾಯಚೂರಿನ ಚಿಕ್ಕಸೂಗುರಿನ ಚೌಕಿಮಠದ ಸಿದ್ದಲಿಂಗ ಮಹಾಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಮದ್ಯಪಾನ ನಿಷೇಧಕ್ಕೆ ಕೆಲ ಸಂಘ ಸಂಸ್ಥೆಗಳು ನಿರಂತರ ಹೋರಾಟ ನಡೆಸಿದ್ದರೂ ಸಾಧ್ಯವಾಗದ್ದನ್ನ ಕೊರೊನಾ ವೈರಸ್ ಮಾಡಿತ್ತು. ಲಾಕ್‍ಡೌನ್ ವೇಳೆ ಶೇ. 90ರಷ್ಟು ಜನ ಸಂಪೂರ್ಣವಾಗಿ ಮದ್ಯಪಾನ ತ್ಯಜಿಸಿದ್ದರು. ಇನ್ನಷ್ಟು ದಿನ ಮುಂದುವರೆದಿದ್ದರೆ ಉಳಿದ ಜನರು ಮದ್ಯಪಾನ ಬಿಡುತ್ತಿದ್ದರು. ಆದ್ರೆ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಆಸೆಗೆ ಮದ್ಯದಂಗಡಿಗಳನ್ನ ತೆರೆದಿದೆ ಎಂದು ಕಿಡಿಕಾರಿದರು.
Advertisement
Advertisement
ಕೂಲಿಕಾರರನ್ನ ಅವರ ಊರುಗಳಿಗೆ ಕರೆದುಕೊಂಡು ಬರಲಾಗುತ್ತಿದೆ. ಆದರೆ ಯಾರೂ ನಿಯಮಗಳನ್ನ ಪಾಲಿಸುತ್ತಿಲ್ಲ. ಸ್ವತಃ ಮಂತ್ರಿಗಳೇ ಕ್ವಾರಂಟೈನ್‍ಗೆ ಹೋಗುತ್ತಿರುವಾಗ ಸರ್ಕಾರ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.
Advertisement
Advertisement
ಮಠ ಹಾಗೂ ಮಠಾಧೀಶರನ್ನ ಸರ್ಕಾರ ನಿರ್ಲಕ್ಷಿಸದೇ ನಮ್ಮ ಸಲಹೆಗಳನ್ನ ಪರಿಗಣಿಸಬೇಕು. ಉತ್ತರ ಕರ್ನಾಟಕದ ಮಠಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಶ್ರೀಮಂತ ಮಠಗಳಿಗೆ ಸರ್ಕಾರಗಳು 10 ಕೋಟಿ, 20 ಕೋಟಿ ರೂ. ಅನುದಾನ ನೀಡಿದೆ. ಅಂತೆಯೆ ನಮ್ಮ ಮಠಗಳಿಗೂ ಅನುದಾನ ನೀಡಬೇಕು ಎಂದು ಸ್ವಾಮಿಜಿ ಮನವಿ ಮಾಡಿದರು.