ಬೆಂಗಳೂರು: ತಮಿಳುನಾಡಿಗೆ (Tamil Nadu) ಕಾವೇರಿ ಬಿಟ್ಟು ಕರ್ನಾಟಕದ (Karnataka) ಜನರು, ರೈತರ ಮೇಲೆ ರಾಜ್ಯ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾವೇರಿ (Cauvery) ವಿಚಾರವಾಗಿ ನಡೆದ ಸರ್ವ ಪಕ್ಷ ಸಭೆಗೆ ಕುಮಾರಸ್ವಾಮಿ ಗೈರಾಗಿದ್ದರು. ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದುದರಿಂದ ನಾನು ಸಭೆಗೆ ಹಾಜರಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ಸರ್ಕಾರದ ನಡೆ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಈ ಸರ್ಕಾರಕ್ಕೆ ರಾಜ್ಯದ ಜನರ ಹಿತ ಕಾಪಾಡಬೇಕು ಅನ್ನೋ ಕನಿಷ್ಠ ತಾಕತ್ತು ಇಲ್ಲ, ಧಮ್ಮು ಇಲ್ಲ. ಬಾಯಲ್ಲಿ ತಾಕತ್ತು ಧಮ್ಮಿನ ಬಗ್ಗೆ ಹೇಳ್ತಾರೆ. ರಾಜ್ಯದ ಜನರ ಬಗ್ಗೆ ಕನಿಷ್ಠ ಕಮಿಟ್‌ಮೆಂಟ್ ಇಲ್ಲ ಈ ಸರ್ಕಾರಕ್ಕೆ ಎಂದು ಕಿಡಿಕಾರಿದರು.
Advertisement
Advertisement
ಮುಂದಿನ ದಿನ ಕುಡಿಯೋಕೆ ನೀರು ಬೆಂಗಳೂರಿಗೆ ಎಲ್ಲಿಂದ ತಂದು ಕೊಡ್ತಾರೆ? ತಮಿಳುನಾಡಿನಲ್ಲಿ ಟ್ರಿಬ್ಯುನಲ್‌ನಲ್ಲಿ ಎಷ್ಟು ಎಕರೆ ಬೆಳೆ ಬೆಳೆಯಲು ಅನುಮತಿ ಕೊಟ್ಟಿದೆ? ಆದರೆ ಅವರು ಎಷ್ಟು ಹೆಚ್ಚುವರಿ ಮಾಡಿದ್ದಾರೆ? ನಮಗೆ ತಮಿಳುನಾಡಿನವರು ತೊಂದರೆ ಕೊಡ್ತಿದ್ದಾರೆ. ಇದನ್ನು ಟ್ರಿಬ್ಯುನಲ್ ಮುಂದೆ ಮನದಟ್ಟು ಮಾಡಿಕೊಡಬೇಕು ಎಂದರು. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕೊಡ್ತಿಲ್ಲ: ಅರವಿಂದ ಬೆಲ್ಲದ್
Advertisement
ನಾನು 2018 ರಲ್ಲಿ ಸಿಎಂ ಆಗಿದ್ದಾಗ ಬೋರ್ಡ್‌ಗೆ ವಿರೋಧ ಮಾಡಿದ್ದೆ. ಪ್ರೊಟೆಸ್ಟ್ ಮಾಡಿದ್ವಿ. ನಮ್ಮ ಪ್ರತಿಭಟನೆ ಧಿಕ್ಕರಿಸಿ ನಮ್ಮ ರಾಜ್ಯದ ಪ್ರತಿನಿಧಿ ನೇಮಕ ಮಾಡಿದ್ರು. ಬಳಿಕ ನಮ್ಮನ್ನು ಸೇರಿಸಿದ್ರು. ಇವತ್ತು ಸುಪ್ರೀಂಕೋರ್ಟ್ ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಹಂಚಿಕೆ ಮಾಡಿಕೊಳ್ಳಬೇಕು ಅಂತ ಇದೆ. ಇದರ ಬಗ್ಗೆ ತೀರ್ಮಾನ ಮಾಡದೇ ಕರ್ನಾಟಕದ ರೈತರು ಜನರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ರಾಷ್ಟ್ರೀಯ ಪಕ್ಷವಾಗಿ ನೀವೇನು ಮಾಡ್ತಿದ್ದೀರಾ ಅಂತ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ಇದೇ ವೇಳೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಕಾವೇರಿ ನೀರಿನ ಸಮಸ್ಯೆಗೆ ಮಣ್ಣಿನ ಮಕ್ಕಳು ಕಾರಣ ಅಂತ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಇವತ್ತು ಕಾವೇರಿ ಸ್ಥಿತಿಗೆ ವೀರಪ್ಪ ಮೊಯ್ಲಿ ಕಾರಣ ಅಂತ ವಾಗ್ದಾಳಿ ನಡೆಸಿದರು. ಸರ್ಕಾರದವರು ವೀರಪ್ಪ ಮೊಯ್ಲಿಯಿಂದಾನೇ ಸಲಹೆ ಪಡೆಯಲಿ ಅಂತ ಕಿಡಿಕಾರಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ: ಸರ್ವಪಕ್ಷ ಸಭೆಯಲ್ಲಿ ಒಮ್ಮತದ ನಿರ್ಣಯ
Web Stories