ಬೆಂಗಳೂರು: ಸರ್ಕಾರಿ ಹುದ್ದೆಯ ಕನಸು ಕಾಣುತ್ತಿರೋರಿಗೆ ಹೊಸ ವರ್ಷದಲ್ಲಿ ಮೈತ್ರಿ ಸರ್ಕಾರದಿಂದ ಶಾಕಿಂಗ್ ಸುದ್ದಿ ಕಾದಿದೆ. ಯಾಕಂದ್ರೆ ದೋಸ್ತಿ ಸರ್ಕಾರದಲ್ಲಿ ಅಗತ್ಯ ನೌಕರರ ಕೊರತೆಯಿದ್ರೂ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗ್ತಿಲ್ಲ.
ಕುಮಾರಸ್ವಾಮಿ ಸರ್ಕಾರದ ವೆಚ್ಚ ಕಡಿತ ಪಾಲಿಸಿಯಿಂದಾಗಿ ಸರ್ಕಾರಿ ಹುದ್ದೆಗಳ ಭರ್ತಿಗೆ ಅಡ್ಡಿಯಾಗಿದೆ. ಅಲ್ಲದೆ ಸರ್ಕಾರದಲ್ಲಿ 1/3ರಷ್ಟು ನೌಕರರ ಕೊರತೆಯಿದ್ರೂ ಕೇವಲ ಹೈದರಾಬಾದ್ ಕರ್ನಾಟಕ ಉದ್ಯೋಗ ಮೀಸಲು 371(ಜೆ)ರಡಿ ಸ್ಥಳೀಯ ವೃಂದದ ಖಾಲಿ ಹುದ್ದೆಗಳ ಭರ್ತಿಗಷ್ಟೇ ಅನುಮತಿ ನೀಡಿದೆ.
ಒಟ್ಟು ಸರ್ಕಾರಿ ಹುದ್ದೆಗಳ ಪ್ರಮಾಣ 7,79,439 ಆಗಿದ್ದು ಈಗ ಒಟ್ಟು 5,09,867 ಸರ್ಕಾರಿ ನೌಕರರು ಉದ್ಯೋಗದಲ್ಲಿದ್ದಾರೆ. ಆದ್ರೆ ಒಟ್ಟು 2,69,572 ಹುದ್ದೆಗಳು ಇನ್ನೂ ಖಾಲಿಯಿವೆ. ಶಿಕ್ಷಣ ಇಲಾಖೆಯಲ್ಲಿ 47,779, ಆರೋಗ್ಯ ಇಲಾಖೆಯಲ್ಲಿ 32,840 ಹಾಗೂ ಒಳಾಡಳಿತ ಇಲಾಖೆಯಲ್ಲಿ 32,366 ಹುದ್ದೆಗಳು ಖಾಲಿಯಿವೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv