ದಾವಣಗೆರೆ: ಸರ್ಕಾರ ಟೇಕಾಫ್ ಆಗಲು ವಿಮಾನವಲ್ಲ. ನಮ್ಮ ಸರ್ಕಾರ ನೆಲಮಟ್ಟಕ್ಕಿಳಿಯುತ್ತದೆ, ಜನರಿಗೆ ಅಗತ್ಯ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುತ್ತದೆ. ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಹೇಳಿಕೆಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
Advertisement
ದಾವಣಗೆರೆಯಲ್ಲಿ ಮಾತನಾಡಿದ ಅವರು, 2013-18ರಲ್ಲಿ ಸಿದ್ದರಾಮಯ್ಯ ಸಿಎಂ ಅಗಿದ್ದು ಬಿಜೆಪಿ ತಪ್ಪಿನಿಂದ, ಬಿಜೆಪಿ, ಬಿಎಸ್‍ಆರ್, ಕೆಜೆಪಿ, ಮೂರು ಗುಂಪಾಗಿತ್ತು. ನಮ್ಮ ತಪ್ಪಿನಿಂದ ಅವರು ಅಧಿಕಾರಕ್ಕೆ ಬಂದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು, ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ತೆರಳಿ ಮಂಡಿಯೂರಿ ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ರು. ಅಂದೂ ಸಿದ್ದರಾಮಯ್ಯನವರಿಗೆ ಭ್ರಮನಿರಸನವಾಗಿತ್ತು ಜೆಡಿಎಸ್, ಕಾಂಗ್ರೆಸ್ ಒಳಜಗಳದಲ್ಲಿ ಸಿಎಂ ಆಗೋ ಕನಸು ಕಾಣುತ್ತಿದ್ದರು. ಕಾಂಗ್ರೆಸ್, ಜೆಡಿಎಸ್ ಶಾಸಕರು ಬೇಸತ್ತು ರಾಜೀನಾಮೆ ನೀಡಿ ಬಿಜೆಪಿಗೆ ಬಂದುದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸರ್ಕಾರ ಟೇಕಾಫ್ ಆಗಿಲ್ಲ – ಶಾಸಕರಲ್ಲಿ ಅಸಮಾಧಾನ ಇರೋದು ನಿಜ: ಸತೀಶ್ ಜಾರಕಿಹೊಳಿ
Advertisement
Advertisement
2 ವರ್ಷ ಸಿಎಂ ಆಗಿದ್ದ ಬಿಎಸ್‍ವೈ ಸ್ವಯಂ ಪ್ರೇರಿತರಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ರು, ನಂತರ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾರೆ, ಸರ್ಕಾರ ಟೇಕಾಫ್ ಆಗಲು ವಿಮಾನವಲ್ಲ, ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದು, ಇನ್ನೂ 18 ತಿಂಗಳು ಬೊಮ್ಮಾಯಿ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
Advertisement
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ಸಿನಲ್ಲಿ ಮೂರ್ನಾಲ್ಕು ಜನ ಸಿಎಂ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್ಸಿನಲ್ಲಿ ಎ ಯಿಂದ ಝಡ್ ವರೆಗೂ ಸಿಎಂ ಅಭ್ಯರ್ಥಿಗಳಿದ್ದಾರೆ. ಆದರೆ ಬಿಜೆಪಿಯಲ್ಲಿ ಒಗ್ಗಟ್ಟಾಗಿ ಒಬ್ಬ ಸಿಎಂ ಆಯ್ಕೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ನಮ್ಮ ಸರ್ಕಾರ ಬುಲೆಟ್ ಟ್ರೈನ್ ಇದ್ದಂಗೆ, ಅದೇ ರೀತಿ ಕೆಲಸ ಮಾಡುತ್ತಿದ್ದೇವೆ: ಶ್ರೀ ರಾಮುಲು
ಆನಂದ್ ಸಿಂಗ್ ಖಾತೆ ಖ್ಯಾತೆ ಯಾವುದು ಇಲ್ಲ, ಆನಂದ್ ಸಿಂಗ್ ಬಗ್ಗೆ ಸಿಎಂ ಅವರೊಂದಿಗೆ ನಾನೂ ರಾಜೂಗೌಡ, ಶಂಕರ ಮುನೇನಕೊಪ್ಪ ಮಾತನಾಡಿದ್ದೇವೆ, ಸಿಎಂ ಅವರು ವರಿಷ್ಠರೊಂದಿಗೆ ಚರ್ಚಿಸಿ ಒಂದು ನಿರ್ಣಯಕ್ಕೆ ಬರುತ್ತಾರೆ. ಸದ್ಯದಲ್ಲಿ ತೀರ್ಮಾನವಾಗುತ್ತದೆ. ಎಲ್ಲವೂ ಸರಿಯಾಗುತ್ತದೆ. ನಾನು ಸಚಿವ ಸ್ಥಾನದ ಬಗ್ಗೆ ಯಾವುದೇ ನಿರೀಕ್ಷೆ ಮಾಡುವುದಿಲ್ಲ ಎಂದರು.