ಬೆಳಗಾವಿ: ಸರ್ಕಾರಿ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನಿಗದಿಪಡಿಸಿದ ಮೆನು ಚಾರ್ಟ್ ಪ್ರಕಾರವೇ ಆಹಾರ ಪದ್ಧತಿ ಅಳವಡಿಸಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದ್ದಾರೆ.
Advertisement
ವಿಧಾನಸಭೆ ಸದಸ್ಯ ನಾಗೇಂದ್ರ ಎಲ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ. ಸರ್ಕಾರ ನೀಡಿದ ಆಹಾರದ ಮೆನು ಇಂತಿದೆ. ಇದನ್ನೂ ಓದಿ: ಸರ್ಕಾರಿ ನೌಕರರು ಬೇಕಾಬಿಟ್ಟಿ ಸಾಮಾಜಿಕ ಜಾಲತಾಣ ಬಳಕೆ ಮಾಡಿದರೆ ಹುಷಾರ್!
Advertisement
Advertisement
ಬೆಳಗ್ಗೆ ತಿಂಡಿ:
ಪ್ರತಿದಿನ ಒಂದರಂತೆ ಇಡ್ಲಿ ಸಾಂಬಾರ್, ಚಿತ್ರಾನ್ನ, ದೋಸೆ, ಟೊಮ್ಯಾಟೊ ಬಾತ್, ಪೂರಿ ಮತ್ತು ಸಾಗು, ಚಪಾತಿ ಮತ್ತು ಪಲ್ಯ. ಕಾಫಿ/ಟೀ.
Advertisement
ಪ್ರತಿ ತಿಂಗಳ 8 ಮತ್ತು 23ರಂದು ಬೆಳಗ್ಗಿನ ತಿಂಡಿಗೆ ಬ್ರೆಡ್ ಆಮ್ಲೆಟ್.
ಮಧ್ಯಾಹ್ನ ಊಟ:
ಮುದ್ದೆ, ಅನ್ನ ಮತ್ತು ಪ್ರತಿ ದಿನಕ್ಕೆ ಒಂದು ಬಗೆಯ ಬಸ್ಸಾರು/ಪಲ್ಯ, ಸೊಪ್ಪು ಸಾರು/ಮಿಶ್ರ ತರಕಾರಿ ಸಾಂಬಾರ್, ಮಜ್ಜಿಗೆ ಮತ್ತು ಉಪ್ಪಿನಕಾಯಿ. ಇದನ್ನೂ ಓದಿ: ಶ್ರೀನಿವಾಸ್ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್
ರಾತ್ರಿ ಊಟ:
ಮುದ್ದೆ, ಅನ್ನ ಮತ್ತು ಪ್ರತಿ ದಿನಕ್ಕೆ ಒಂದು ಬಗೆಯ ಬೇಳೆ/ಕಾಳು/ಮೊಳಕೆ ಕಾಳು/ತರಕಾರಿ ಮಿಶ್ರಿತ ಸಾಂಬಾರ್, ಮಜ್ಜಿಗೆ ಮತ್ತು ಉಪ್ಪಿನಕಾಯಿ. ಇದನ್ನೂ ಓದಿ: ವೇಸ್ಟ್ ಬಾಡಿ ಯಾರು ಅಂತ ಇಡೀ ರಾಜ್ಯಕ್ಕೆ ತಿಳಿದಿದೆ: ಜಾರಕಿಹೊಳಿಗೆ ತಿವಿದ ಸಿದ್ದರಾಮಯ್ಯ
ವಾರಕ್ಕೆ ಮೂರು ಬಾರಿ ಬಾಳೆಹಣ್ಣು, ವಾರಕ್ಕೆ ಮೂರು ಬಾರಿ ಮೊಟ್ಟೆ. ಪ್ರತಿ ವಾರದ ಶುಕ್ರವಾರ ಒಂದೊಂದು ಬಗೆಯ ಸಿಹಿ ಊಟ (ಜಾಮೂನು, ಗೋದಿ ಪಾಯಸ, ಹುಗ್ಗಿ ಇತ್ಯಾದಿ). ಪ್ರತಿ ತಿಂಗಳ 1 ಮತ್ತು 15ರಂದು ರಾತ್ರಿ ಊಟಕ್ಕೆ ಚಿಕನ್.
ಲಘು ಉಪಹಾರ:
ಸಂಜೆ 5ರಿಂದ 5.30ರೊಳಗೆ ಪ್ರತಿದಿನ ಒಂದು ಬಗೆಯ ತಿಂಡಿ. ಅವಲಕ್ಕಿ, ಖಾರಾಪುರಿ, ದೋಸೆ, ಬಜ್ಜಿ, ಮಂಡಕ್ಕಿ ಒಗ್ಗರಣೆ, ಖಾರಾಬಾತ್/ಉಪ್ಪಿಟ್ಟು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಬೂಸ್ಟ್ ಅಥವಾ ಹಾರ್ಲಿಕ್ಸ್. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಕಾಫಿ/ಟೀ ಮತ್ತು ಬಿಸ್ಕೆಟ್/ರಸ್ಕ್.