ಕೋಲಾರ: ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಗು (Infant) ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆ ಕೆಜಿಎಫ್ (KGF) ತಾಲೂಕು ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಂದು ಈ ಘಟನೆ ನಡೆದಿದ್ದು, ಕೆಜಿಎಫ್ ತಾಲೂಕು ಕೋಡಿಹಳ್ಳಿ ಗ್ರಾಮದ ರೂಪ ಎಂಬವರ ಮಗು ಸಾವನ್ನಪ್ಪಿದೆ. ಶುಕ್ರವಾರ ಹೆರಿಗೆಗೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ವೇಳೆ ವೈದ್ಯರ ನಿರ್ಲ್ಯಕ್ಷ ಆರೋಪ ಕೇಳಿಬಂದಿದೆ. ನಾರ್ಮಲ್ ಡೆಲಿವರಿ ಮಾಡಿಸುವುದಾಗಿ ಹೇಳಿ ಕರೆಸಿಕೊಂಡು ನಿರ್ಲ್ಯಕ್ಷದಿಂದ ಮಗುವನ್ನ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: Raichur | ಮಕ್ಕಳ ಮೇಲೆ ಹರಿದ ಕೆಕೆಆರ್‌ಟಿಸಿ ಬಸ್ – ಓರ್ವ ಸಾವು, ಇನ್ನೋರ್ವ ಗಂಭೀರ
ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ನಾಗಮಣಿ ಹಾಗೂ ನರ್ಸ್ ರಿತಿಕಾ ವಿರುದ್ಧ ಈ ಆರೋಪ ಮಾಡಲಾಗುತ್ತಿದ್ದು, ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಾಯಿಸಿ ಕೊನೆಗೆ ಬೇರೆ ಆಸ್ಪತ್ರೆಗೆ ಕಳಿಸಿದ್ದಾರೆ. ಅಷ್ಟೊತ್ತಿಗೆ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಇನ್ನೂ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಸ್ಪತ್ರೆ ಎದುರು ಅಂಬೇಡ್ಕರ್ ಯುವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೆ ರೂಪ ಪತಿ ಬಾಬು ವೈದ್ಯಾಧಿಕಾರಿ ಸುನಿಲ್‌ಗೆ ದೂರು ನೀಡಿದ್ದು, ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ನಾಳೆ ಕರ್ನಾಟಕಕ್ಕೆ ಮೊದಲ ಭೇಟಿ
ಸದ್ಯ ಮಗುವಿನ ಸಂಬಂಧಿಕರು ಹಾಗೂ ಪೋಷಕರು ಆಸ್ಪತ್ರೆ ಎದುರು ಕಣ್ಣೀರಾಕಿದ್ದು, ಕೆಲಕಾಲ ಮೃತ ಮಗುವಿನ ಸಮೇತ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ರಸ್ತೆಗುಂಡಿ, ಕಸ ಚಳುವಳಿ – ಗುಂಡಿಗೆ ವೈಟ್ ಸ್ಪ್ರೇ ಹಾಕಿ, ಪ್ಲೇಕಾರ್ಡ್ ಪ್ರದರ್ಶಿಸಿ ಪ್ರತಿಭಟನೆ

