ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿ (BJP) ನೀರಿನಲ್ಲೂ ರಾಜಕೀಯ ಮಾಡ್ತಿದೆ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ನೀರಿನ ಸಮಸ್ಯೆ ವಿಚಾರಕ್ಕೆ ವಿಧಾನಸೌಧದಲ್ಲಿ (Vidhana Soudha) ಮಾತನಾಡಿದ ಅವರು, 30-40 ವರ್ಷಗಳಿಂದ ಇಂತಹ ಬರ ಬಂದಿರಲಿಲ್ಲ. ಕಾವೇರಿ ನೀರು ಎಲ್ಲಿ ಒದಗಿಸಬೇಕೋ ಅಲ್ಲಿಗೆ ಒದಗಿಸಿಕೊಡ್ತೀವಿ. ನೀರಿನ ಟ್ಯಾಂಕರ್ ಮೂಲಕ ನೀರು ಕೊಡುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಅವರು ರಾಜಕೀಯ ಮಾಡ್ತಿದ್ದಾರೆ. ರಾಜಕೀಯ ಮಾಡೋರು ಮಾಡಲಿ. ನಾವೇನು ಮಾಡಲು ಆಗಲ್ಲ ಅಂತ ಕಿಡಿಕಾರಿದರು.
Advertisement
ನೀರಿನಲ್ಲಿ ದಂಧೆ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕಿದ್ದೇವೆ ದಂಧೆ ತಡೆಗೆ ಅಧಿಕಾರಿಗಳ ನೇಮಕ ಮಾಡಿದ್ದೇವೆ. ನೀರಿನ ಟ್ಯಾಂಕರ್ ಗೆ ದರ ನಿಗದಿ ಮಾಡಿದ್ದೇವೆ. ಕೆಲವು ಸ್ಲಂಗಳಿಗೆ ಉಚಿತ ನೀರು ಕೊಡ್ತಿದ್ದೇವೆ. ಅಪಾರ್ಟ್ ಮೆಂಟ್ ಗಳಲ್ಲಿ ಮಿತ ನೀರು ಬಳಕೆಗೆ ಸಭೆ ಮಾಡಿದ್ದೇವೆ. ಕಾವೇರಿ 5 ನೇ ಹಂತ ಯೋಜನೆಯಲ್ಲಿ ಮೇ ವೇಳೆ ನೀರು ಕೊಡುವ ಕೆಲಸ ಮಾಡ್ತೀವಿ ಎಂದರು.
Advertisement
Advertisement
ನೀರಿನ ಮಾಫಿಯಾ ನಿಲ್ಲಿಸಿದ್ದೇವೆ. ಖಾಸಗಿ ಬೋರ್ ವೆಲ್ ಅಧೀನ ಪಡಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಈಗಾಗಲೇ 1,500 ಟ್ಯಾಂಕರ್ ಗಳು ರಿಜಿಸ್ಟರ್ ಆಗಿವೆ. ಉಳಿದವರಿಗೆ ಸಮಯ ಕೊಡ್ತೀವಿ.ಕಡ್ಡಾಯವಾಗಿ ಎಲ್ಲರೂ ರಿಜಿಸ್ಟರ್ ಆಗಬೇಕು. ಎಲ್ಲಾ ಟ್ಯಾಂಕರ್ ಮೇಲೆ ರಿಜಿಸ್ಟರ್ ಆಗಿರೋ ಬಗ್ಗೆ ಬೋರ್ಡ್ ಹಾಕಿಸ್ತೀವಿ. ಬೆಂಗಳೂರು, ಮಾಗಡಿ, ದೊಡ್ಡಬಳ್ಳಾಪುರ, ನೆಲಮಂಗಲ್ಲಿ ಇರೋ ನೀರಿನ ಮೂಲಗಳನ್ನು ಹುಡುಕಿದ್ದೇವೆ. ಅಗತ್ಯ ಇದ್ದರೆ ಅಲ್ಲಿಂದ ನೀರು ತರುವ ಕೆಲಸ ಮಾಡ್ತೀವಿ ಎಂದರು.
Advertisement
ತಮಿಳುನಾಡಿಗೆ ನೀರು ಬಿಟ್ಟಿಲ್ಲ: ತಮಿಳುನಾಡಿಗೆ ನೀರು ಬಿಟ್ಟ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಮಿಳುನಾಡಿಗೆ ನೀರು ಬಿಟ್ಟಿಲ್ಲ, ನೀರು ಬಿಡೋದು ಇಲ್ಲ. ನಾವು ತಮಿಳುನಾಡಿಗೆ ನೀರು ಬಿಡೋದಿಲ್ಲ. ಶಿವನ ಸಮುದ್ರದದ ಭಾಗದಲ್ಲಿ ನೀರು ತುಂಬಲು ನೀರು ಬಿಟ್ಟಿದ್ದಾರೆ. ತಮಿಳುನಾಡಿಗೆ ನೀರು ಬಿಡೋಕೆ ನಾವು ಮೂರ್ಖರಅಲ್ಲ. ಅಂತಹ ಸರ್ಕಾರ ನಮ್ಮದು ಅಲ್ಲ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಗೆಳೆಯನಿಗೆ ಮದ್ವೆಯಾಗಲು ಹೆಣ್ಣು ಸಿಗ್ತಿಲ್ಲ- ನೀರಿನ ಸಮಸ್ಯೆ ಬಗೆಹರಿಸುವಂತೆ ರಾಗಾಗೆ ಮನವಿ
ಬೆಂಗಳೂರಿನ 14 ಸಾವಿರ ಬೋರ್ ವೆಲ್ ಗಳಲ್ಲಿ 7 ಸಾವಿರ ಬೋರ್ ವೆಲ್ ಗಳು ಬತ್ತಿ ಹೋಗಿವೆ. ಹೀಗಾಗಿ ರಿ ಬೋರ್ ವ್ಯವಸ್ಥೆ ಮಾಡುತ್ತಿದ್ದೇವೆ. ಹೊಸ ಬೋರ್ ಹಾಕಬೇಕಾದ್ರೆ ಅನುಮತಿ ಪಡೆಯಬೇಕು ಅಂತ ನಿಯಮ ಮಾಡಲಾಗಿದೆ ಅಂದರು. ಕೈಗಾರಿಕೆಗಳಿಗೂ ನೀರು ಕೊಡ್ತೀವಿ. ನೀರು ಇಲ್ಲ ಅನ್ನೋರಿಗೆ ಟ್ಯಾಂಕರ್ ಗಳ ಮೂಲಕ ನೀರು ಕೊಡ್ತಿದ್ದೇವೆ. ಕೆಲವರು ಮಾತ್ರ ಟ್ವಿಟರ್ ನಲ್ಲಿ ನೀರು ಇಲ್ಲ ಅಂತಿದ್ದಾರೆ ಪಾಪ. ಅಂತಹ ದೊಡ್ಡ ಹಾಹಾಕಾರ ಇಲ್ಲ. ಬಿಜೆಪಿ ಅವರು, ಮಾಧ್ಯಮಗಳು ಹಾಹಾಕಾರ ಇದೆ ಅಂತ ಹೇಳ್ತಿರೋದು. ಅಂತಹ ಹಾಹಾಕಾರ ನೀರಿಗೆ ಬೆಂಗಳೂರಿನಲ್ಲಿ ಇಲ್ಲ ಎಂದರು.
ಮೇಕೆದಾಟು ಬಗ್ಗೆ ಬಿಜೆಪಿ ಅವರು ಮಾತಾಡ್ತಾರೆ. ಮಾತಾಡೋದು ಬಿಟ್ಟು ಕೇಂದ್ರದಿಂದ ಅನುಮತಿ ಕೊಡಿಸಲಿ. ಬಿಜೆಪಿ ಅವರು ಪ್ರೊಟೆಸ್ಟ್ ಮಾಡಲಿ. ಇಲ್ಲಿ ಮಾಡೋದು ಅಲ್ಲ ದೆಹಲಿಯಲ್ಲಿ ಬಿಜೆಪಿ ಅವರು ಪ್ರತಿಭಟನೆ ಮಾಡಲಿ. ಮಹದಾಯಿ ಅನುಮತಿ ಕೊಡೋಕೆ ಹೇಳಿ. ನಮಗೆ ಬದ್ದತೆ ಇದೆ. ಜಲ ಸಂಪನ್ಮೂಲ ಇಲಾಖೆಯನ್ನ ಫ್ಯಾಷನ್ ಆಗಿ ತೆಗೆದುಕೊಂಡಿದ್ದೇನೆ. ಬೆಂಗಳೂರಿಗೆ ನೀರು ಕೊಡಲು ಏನು ಬೇಕು ಅದನ್ನ ಮಾಡೋ ಕೆಲಸ ಮಾಡ್ತೀವಿ ಅಂತ ಬಿಜೆಪಿಗೆ ತಿರುಗೇಟು ಕೊಟ್ರು.