ಬೆಂಗಳೂರು: ಕೆರೆಗಳ (Lake) ಪುನರುಜ್ಜೀವನದ ಜೊತೆಯಲ್ಲೇ ಅಂತರ್ಜಲ (Groundwater) ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಜ್ಯದ ಜಲ ಸುಸ್ಥಿರತೆಗೆ ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ಎಸ್ ಬೋಸರಾಜು (NS Boseraju) ತಿಳಿಸಿದರು.
ಇಂದು ವಿಶ್ವ ಜಲ ದಿನದ ಅಂಗವಾಗಿ 𝗪𝗵𝗲𝗿𝗲 𝗪𝗮𝘁𝗲𝗿 𝗙𝗹𝗼𝘄𝘀 – 𝗘𝗾𝘂𝗮𝗹𝗶𝘁𝘆 𝗚𝗿𝗼𝘄𝘀 ಎಂಬ ವಿಷಯದಡಿ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಇಂಡಿಯಾ ಕರ್ನಾಟಕ ರಾಜ್ಯ ಘಟಕ, ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಡಾನ್ ಬಾಸ್ಕೊ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ ತಾಂತ್ರಿಕ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಗ್ಯಾಸ್ ಅಭಾವದ ಮಧ್ಯೆ ಬೀದರ್‌ನ ಸರ್ಕಾರಿ ಶಾಲೆಯ 6 ಸಿಲಿಂಡರ್ ಕಳ್ಳತನ

ಕರ್ನಾಟಕ ಸರ್ಕಾರ ಕೆಸಿ ವ್ಯಾಲಿ, ಹೆಚ್‌ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ಯೋಜನೆಗಳ ಮೂಲಕ ಜಲ ಸುಸ್ಥಿರತೆಯಲ್ಲಿ ವಿನೂತನ ಹೆಜ್ಜೆ ಇಡುತ್ತಿದೆ. ಈಗಾಗಲೇ ಕೆಸಿ ವ್ಯಾಲಿ ಯೋಜನೆ ಅಡಿಯಲ್ಲಿ 143 ಕೆರೆಗಳು ಹಾಗೂ ಹೆಚ್‌ಎನ್ ವ್ಯಾಲಿ ಅಡಿಯಲ್ಲಿ 65 ಕೆರೆಗಳಿಗೆ ಮರುಜೀವ ನೀಡಲಾಗಿದ್ದು, ಬಯಲು ಸೀಮೆಯ ಒಟ್ಟು 700 ಕೆರೆಗಳನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಲಾಗಿದೆ. ಈ ಯಶಸ್ಸಿನ ಪ್ರೇರಣೆಯಿಂದ, ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸಲು 1,081 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾದ ವೃಷಭಾವತಿ ವ್ಯಾಲಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಈಗ 41 ದೇಶಗಳಿಂದ ಇಂಧನ ಅಮದು, ಗಲ್ಫ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮಗೆ ಮುಖ್ಯ: ಮೋದಿ

ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ 472 ಏತ ನೀರಾವರಿ (𝗟𝗶𝗳𝘁 𝗜𝗿𝗿𝗶𝗴𝗮𝘁𝗶𝗼𝗻) ಯೋಜನೆಗಳ ಮೂಲಕ 1,318 ಕೆರೆಗಳನ್ನು ತುಂಬಿಸಲಾಗುತ್ತಿದೆ. ಜೊತೆಗೆ, 8,000ಕ್ಕೂ ಹೆಚ್ಚು ಚೆಕ್ ಡ್ಯಾಂಗಳು, ಬ್ರಿಡ್ಜ್-ಕಂ-ಬ್ಯಾರೇಜ್‌ಗಳು ಮತ್ತು ವೆಂಟೆಡ್ ಡ್ಯಾಂಗಳ ನಿರ್ಮಾಣದ ಮೂಲಕ ರಾಜ್ಯವು ಸುಸ್ಥಿರ ಜಲ ಸಂಗ್ರಹಣಾ ವ್ಯವಸ್ಥೆಗಳನ್ನು ಸೃಷ್ಟಿಸುತ್ತಿದೆ. ಈ ಎಲ್ಲಾ ಯೋಜನೆಗಳಿಂದಾಗಿ ನಮ್ಮ ರಾಜ್ಯದ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡಿದೆ ಎಂದು ಹೇಳಿದರು. ಇದನ್ನೂ ಓದಿ: ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್ 2’; 800 ಕೋಟಿ ಕ್ಲಬ್ ಸೇರುವತ್ತ ಓಟ
ಡೇಟಾ ಅನಾಲಿಟಿಕ್ಸ್, ರಿಯಲ್-ಟೈಮ್ ಮಾನಿಟರಿಂಗ್ ಮತ್ತು ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ರಾಜ್ಯವು ಅಂತರ್ಜಲ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿದೆ. ಇದರಿಂದ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿದೆ. ಇದಲ್ಲದೆ, ಕೋಲಾರದ ಎಸ್. ಅಗ್ರಹಾರದಲ್ಲಿ 100𝗠𝗪 ಸಾಮರ್ಥ್ಯದ ತೇಲುವ ಸೌರ ಯೋಜನೆಯನ್ನು (𝗙𝗹𝗼𝗮𝘁𝗶𝗻𝗴 𝗦𝗼𝗹𝗮𝗿 𝗣𝗿𝗼𝗷𝗲𝗰𝘁) ಪ್ರಸ್ತಾಪಿಸಲಾಗಿದ್ದು, ನವೀಕರಿಸಬಹುದಾದ ವಿದ್ಯುತ್ ಶಕ್ತಿಯನ್ನು ಇಲ್ಲಿ ಉತ್ಪಾದಿಸಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ – ರಿಕ್ಕಿ ರೈಗೆ ನೋಟಿಸ್

ನಮ್ಮ ದೇಶ ಹಾಗೂ ರಾಜ್ಯದ ಅಭಿವೃದ್ದಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಹಿರಿದಾಗಿದೆ. ಅವರ ತಾಂತ್ರಿಕ ಪರಿಣಿತಿಯಿಂದ ರಾಜ್ಯದಲ್ಲಿ ನೀರಿನ ಸದ್ಬಳಕೆ ಸಾಧ್ಯವಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ: ದೇಶದಲ್ಲಿ ಪರಿಸ್ಥಿತಿ ನಿಭಾಯಿಸಲು ಮೋದಿ ನೇತೃತ್ವದ ಸಭೆ – ಹಿರಿಯ ಸಚಿವರ ತಂಡ ರಚನೆ
ಈ ವಿಚಾರಸಂಕಿರಣದಲ್ಲಿ ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಶ್ರೀ ಕೆ. ಜಯಪ್ರಕಾಶ್, 𝗜𝗘𝗜, 𝗞𝗦𝗖 ಅಧ್ಯಕ್ಷರಾದ ಡಾ. ಹೆಚ್.ಕೆ. ರಾಮರಾಜು, 𝗜𝗪𝗪𝗔 ಮತ್ತು 𝗜𝗪𝗘𝗞 ಅಧ್ಯಕ್ಷರಾದ ಇಂಜಿನಿಯರ್ ಬಿ. ಶ್ರೀನಿವಾಸ ರೆಡ್ಡಿ, 𝗜𝗜𝗦𝗰 ಪ್ರಾಧ್ಯಾಪಕರಾದ ಡಾ. ಲಕ್ಷ್ಮೀನಾರಾಯಣ ರಾವ್, 𝗗𝗦𝗜 ಕಾರ್ಯದರ್ಶಿ ಶ್ರೀ ಗಾಳಿಸ್ವಾಮಿ, 𝗗𝗕𝗜𝗧 ಉಪಾಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಮಂಜುನಾಥ್, 𝗗𝗕𝗜𝗧 ಪ್ರಾಂಶುಪಾಲರಾದ ಡಾ. ಬಿ.ಎಸ್. ನಾಗಭೂಷಣ ಮತ್ತು 𝗜𝗘𝗜 ಕೌನ್ಸಿಲ್ ಸದಸ್ಯರಾದ ಇಂಜಿನಿಯರ್ ಎಂ. ನಾಗರಾಜ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: LPG ಬಿಕ್ಕಟ್ಟು: 14 ಕೆಜಿ ಬದಲಿಗೆ 10 ಕೆಜಿ ಎಲ್‌ಪಿಜಿ ಪೂರೈಕೆಗೆ ಕೇಂದ್ರ ಚಿಂತನೆ

