ನವದೆಹಲಿ: ಗೂಗಲ್ (Google) ಕಂಪನಿ ತನ್ನ ಸುರಕ್ಷತಾ ನಿಯಮಗಳನ್ನು ಅಪ್‌ಡೇಟ್ ಮಾಡಿದ್ದು, ಜಿ-ಮೇಲ್ ಖಾತೆ ಹೊಂದಿದ್ದು, ಸಕ್ರಿಯರಾಗಿಲ್ಲದವರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ.
ಹೌದು, 2 ವರ್ಷ ಬಳಸದೇ ಇರುವ ಜಿ-ಮೇಲ್ ಖಾತೆಗಳನ್ನು (Gmail Accounts) ಡಿಸೆಂಬರ್‌ನಲ್ಲಿ ಬಂದ್ ಮಾಡಲಾಗುವುದು ಎಂದು ತಿಳಿಸಿದೆ. ಹೀಗಾಗಿ ಒಮ್ಮೆ ಲಾಗಿನ್ ಆಗಿ ಖಾತೆ ಉಳಿಸಿಕೊಳ್ಳಿ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಇದನ್ನೂ ಓದಿ: PublicTV Explainer: ‘ಸೋಷಿಯಲ್’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?
Advertisement
Advertisement
ಗೂಗಲ್ ಕಂಪನಿಯು ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಲ್ಲಿ ಅಪ್‌ಡೇಟ್ ಮಾಡಿತ್ತು. ಆಗಲೇ ಅದರ ಉಪಾಧ್ಯಕ್ಷೆ ರೂತ್ ಕ್ರಿಚೇಲ್, ಮುಂಬರುವ ಡಿಸೆಂಬರ್‌ನಲ್ಲಿ ಕಳೆದ 2 ವರ್ಷಗಳಿಂದ ಒಮ್ಮೆಯೂ ಲಾಗಿನ್ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡಲು ಆರಂಭಿಸುತ್ತೇವೆ ಎಂದು ತಿಳಿಸಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ.
Advertisement
ನಿಯಮದ ಪ್ರಕಾರ, ವೈಯಕ್ತಿಕ ಗೂಗಲ್ ಖಾತೆಗಳು (ಜಿ-ಮೇಲ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್, ಗೂಗಲ್ ಫೋಟೋಸ್ ಇತ್ಯಾದಿ) ಮಾತ್ರ ಡಿಲೀಟ್ ಆಗಲಿವೆ. ಸಾಂಸ್ಥಿಕ ಅಂದರೆ ಕಂಪನಿಗಳು ಅಥವಾ ಶಾಲೆ ಇತ್ಯಾದಿ ಸಂಸ್ಥೆಗಳು ಹೊಂದಿರುವ ಗೂಗಲ್ ಖಾತೆಗಳು ಡಿಲೀಟ್ ಆಗುವುದಿಲ್ಲ. ಇದನ್ನೂ ಓದಿ: ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಸಾಧಕನ ಹೆಸರನ್ನು ಮಗನಿಗಿಟ್ಟ ಮಸ್ಕ್
Advertisement
ಮರೆತ, ಬಳಸದ ಖಾತೆಗಳು ಗೂಗಲ್ ಅಥವಾ ಖಾತೆದಾರರಿಗೆ ಅಪಾಯ ತರಬಹುದು ಎಂಬ ಕಾರಣಕ್ಕೆ ಡಿಲೀಟ್ ಮಾಡಲು ಗೂಗಲ್ ಮುಂದಾಗಿದೆ. ಜಿ-ಮೇಲ್ ಅಕೌಂಟ್‌ಗಳು ಡಿಲೀಟ್ ಆಗಬಾರದು ಎನ್ನುವವರು ಕಳೆದ 2 ವರ್ಷಗಳಿಂದ ಖಾತೆ ಬಳಸದಿದ್ದರೆ ಲಾಗಿನ್ ಆಗಬೇಕಿದೆ.