ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ದಾಳಿ ಬಳಿಕ ಅಂದ್ರೆ ಫೆಬ್ರವರಿ 14ರಿಂದ 16ರವರೆಗೆ ಎಂಎಫ್‍ಎನ್ ಪದ ಮತ್ತು ಪ್ರಧಾನಿ ಮೋದಿ ಭಾಷಣ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿದೆ. ಈ ವಾರದ ಗೂಗಲ್ ಟ್ರೆಂಡ್‍ನಲ್ಲಿ ದಾಳಿಯ ಬಗ್ಗೆ ಪ್ರಧಾನಿ ಮೋದಿ ನೀಡಿರುವ ಉತ್ತರವನ್ನು ಜನ ಅತಿ ಹೆಚ್ಚು ಹುಡುಕಿದ್ದಾರೆ. ಅದರಂತೆಯೇ ಎಂಎಫ್‍ಎನ್ (Most favoured nation) ಎಂದರೇನು ಎಂಬುದನ್ನು ಸರ್ಚ್ ಮಾಡಿದ್ದಾರೆ.
ಫೆ.11ರಿಂದ 16ರ ನಡುವೆ ಪ್ರತಿಬಾರಿಯಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿಂತ ಮೋದಿ ಅತಿ ಹೆಚ್ಚು ಬಾರಿ ಸರ್ಚ್ ಗೆ ಒಳಪಟ್ಟಿದ್ದಾರೆ. ಅದರಲ್ಲಿಯೂ ಪುಲ್ವಾಮಾ ದಾಳಿ ಬಳಿಕ ಪ್ರಧಾನಿಗಳು ನೀಡಿದ ಉತ್ತರವೇನು ಎಂಬುದನ್ನು ನೆಟ್ಟಿಗರು ಸರ್ಚ್ ಮಾಡಿದ್ದಾರೆ. ದಾಳಿಯ ಬಳಿಕ, ಪಾಕ್ ಉಗ್ರರು ಮತ್ತು ಅವರ ವಕ್ತಾರರು ದೊಡ್ಡ ತಪ್ಪು ಮಾಡಿದ್ದಾರೆ. ಶೀಘ್ರದಲ್ಲಿ ಅವರ ತಪ್ಪಿಗೆ ದೊಡ್ಡ ಬೆಲೆಯನ್ನು ತೆರೆಬೇಕಾಗುತ್ತದೆ. ಘಟನೆ ಹಿಂದಿರುವ ಯಾವುದೇ ಶಕ್ತಿ ಅಥವಾ ವ್ಯಕ್ತಿ ಇದ್ರೂ, ಅವರಿಗೆ ತಕ್ಕ ಶಿಕ್ಷೆ ನೀಡುವಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ದೇಶದ ಜನರಿಗೆ ಮಾತು ಕೊಡುತ್ತಿದ್ದೇನೆ ಎಂದು ಹೇಳಿದ್ದರು. ಗುರುವಾರ ರಾತ್ರಿ 8.30ರ ಬಳಿಕ ಈ ಸಂಭಾಷಣೆಯನ್ನು ನೆಟ್ಟಿಗರು ಹುಡುಕಾಡಲು ಆರಂಭಿಸಿದ್ದಾರೆ.
Advertisement
Advertisement
ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಕೂಡ ನೀಡಿರುವ ಹೇಳಿಕೆಯನ್ನು ನೆಟ್ಟಿಗರು ಹುಡುಕಿದ್ದಾರೆ. ಇದು ಕೇವಲ ಸೈನಿಕರ ಮೇಲಿನ ದಾಳಿಯಲ್ಲ. ಭಾರತೀಯರ ಆತ್ಮದ ಮೇಲೆ ನಡೆದ ದಾಳಿಯಾಗಿದೆ. ಭಯೋತ್ಪಾದನೆಯಿಂದ ದೇಶವನ್ನು ವಿಭಜಿಸಿ, ಹಂಚುವ ಕುತಂತ್ರ ನಡೆದಿದೆ. ಯಾವುದೇ ಶಕ್ತಿ ನಮ್ಮ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ. ಭಾರತದ ಸುರಕ್ಷತೆಗಾಗಿ ಸರ್ಕಾರ ಕೈಗೊಳ್ಳುವ ಪ್ರತಿ ನಿರ್ಧಾರಗಳಿಗೆ ವಿಪಕ್ಷವಾದ ನಾವು ಜೊತೆಯಲ್ಲಿರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
Advertisement
ರಾಹುಲ್ ಗಾಂಧಿ ಅವರ ಈ ಹೇಳಿಕೆ ಜೊತೆಗೆ ವಯಸ್ಸು ಮತ್ತು ಬಯೋಡೇಟಾ ಸಹ ಹೆಚ್ಚು ಬಾರಿ ಸರ್ಚ್ ಅಗಿದೆ. ಇವೆಲ್ಲದರ ಜೊತೆಗೆ ಎಂಎಫ್‍ಎನ್ ಎಂದರೇನು ಎಂಬುವುದು ಅತಿ ಹೆಚ್ಚು ಬಾರಿ ಸರ್ಚ್ ಆಗಿದೆ
Advertisement
ಅತ್ಯಾಪ್ತ ರಾಷ್ಟ್ರ (ಎಂಎಫ್‍ಎನ್):
ಗುರುವಾರ ದಾಳಿ ನಡೆದಿದ್ದು 40 ಮಂದಿ ಸೈನಿಕರು ಹುತಾತ್ಮರಾಗಿದ್ದರು ಇದರ ಮರುದಿನವೇ ಅಂದರೆ ಶುಕ್ರವಾರ ಭಾರತ ಸರ್ಕಾರ ಪಾಕಿಸ್ತಾನವನ್ನು ಅತ್ಯಾಪ್ತ ರಾಷ್ಟ್ರದ ಪಟ್ಟಿಯಿಂದ ಕೈ ಬಿಟ್ಟಿತು. 1996ರಿಂದಲೂ ಪಾಕಿಸ್ತಾನಕ್ಕೆ ಅತ್ಯಾಪ್ತ ರಾಷ್ಟ್ರದ ಸ್ಥಾನವನ್ನು ಭಾರತ ನೀಡಿದೆ. ಅತ್ಯಾಪ್ತ ಎಂದು ಘೋಷಿಸಿಕೊಂಡ ದೇಶಕ್ಕೆ ವ್ಯಾಪಾರ ವಹಿವಾಟುಗಳಲ್ಲಿ ಮೊದಲ ಆದ್ಯತೆ ನೀಡುವುದು. ಅಂತರಾಷ್ಟ್ರೀಯ ಮಾರುಕಟ್ಟೆ ನಿಯಮದನ್ವಯ ಅತ್ಯಾಪ್ತ ರಾಷ್ಟ್ರಗಳಿಗೆ ಹೆಚ್ಚಿನ ರಿಯಾಯ್ತಿ ಸಿಗುತ್ತಿದೆ. ಅತ್ಯಾಪ್ತ ಅಂತ ಘೋಷಿಸಿಕೊಂಡ ರಾಷ್ಟ್ರಗಳಿಗೆ ವ್ಯಾಪಾರದಲ್ಲಿ ನಷ್ಟ ಸಂಭವಿಸದಂತೆ ಕೆಲವೊಮ್ಮೆ ಎಚ್ಚರಿಕೆ ವಹಿಸಲಾಗಿರುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv