ನವದೆಹಲಿ: ವಿಶ್ವದಲ್ಲೇ ಓಮಿಕ್ರಾನ್ ಹಾಗೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದೆ. ಇದಕ್ಕಾಗಿ ಗೂಗಲ್ ಡೂಡಲ್ ಕೊರೊನಾ, ಓಮಿಕ್ರಾನ್‍ನನ್ನು ತಡೆಯಲು ಮಾಸ್ಕ್ ಹಾಗೂ ಇನ್ನಿತರೆ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದೆ.
ಈ ಅನಿಮೇಟೆಡ್ ಡೂಡಲ್‍ನಲ್ಲಿ, ಕೊರೊನಾ ಲಸಿಕೆ ತೆಗೆದುಕೊಂಡ ನಂತರ ಗೂಗಲ್ ಸರ್ಚ್ ಎಂಜಿನ್‍ನ ಎಲ್ಲಾ ಅಕ್ಷರಗಳು ಮಾಸ್ಕ್ ಹಾಕಿಕೊಂಡು ಸಂಭ್ರಮಿಸುತ್ತಿರುವುದನ್ನು ಗೂಗಲ್‍ನಲ್ಲಿ ಕಾಣಬಹುದು.
New Google Doodle has been released: “Get Vaccinated. Wear a Mask. Save Lives. …” 🙂#google #doodle #designhttps://t.co/ZNpcnct3gE pic.twitter.com/WeU6Mup5pe
— Google Doodles EN (@Doodle123_EN) January 16, 2022
ಮಾಸ್ಕ್ ಹಾಗೂ ಲಸಿಕೆಯನ್ನು ಹಾಕಿಕೊಂಡು ಎಲ್ಲರೂ ತಮ್ಮ ಜೀವವನ್ನು ಉಳಿಸಿಕೊಳ್ಳಿ ಎಂದು ಗೂಗಲ್ ಡೂಡಲ್ ಸಂದೇಶವನ್ನು ಸಾರಿದೆ. ಕೊರೊನಾ ಕುರಿತು ಮಾಹಿತಿ ಪಡೆಯಲು ಹಾಗೂ ಲಸಿಕೆಯನ್ನು ಪಡೆದುಕೊಳ್ಳಲು ಹತ್ತಿರದ ಮಾಹಿತಿ ಕೇಂದ್ರಗಳು ಎಲ್ಲಿವೆ ಎನ್ನುವುದರ ಕುರಿತು ಇದರಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಕೊರೊನಾ ಲಸಿಕೆ ಪಡೆಯದವರಿಗೆ ತಮ್ಮ ಹತ್ತಿರದ ಲಸಿಕಾ ಕೇಂದ್ರ ಎಲ್ಲಿದೆ ಹಾಗೂ ಅಲ್ಲಿ ಲಸಿಕೆಯನ್ನು ಪಡೆದುಕೊಳ್ಳಲು ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ವಿವರವಾಗಿ ಮಾಹಿತಿ ದೊರೆಯುತ್ತದೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,58,089 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ 8,209 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಲಸಿಕಾಭಿಯಾನದಲ್ಲಿ ದೇಶದಲ್ಲಿ ಇದುವರೆಗೆ ಒಂದನೇ ಹಾಗೂ ಎರಡನೇ ಲಸಿಕೆಯನ್ನು ಸೇರಿ 157.20 ಕೋಟಿ ಲಸಿಕೆ ನೀಡಲಾಗಿದೆ. ಆದರೂ ಕೊರೊನಾ ವೇಗವಾಗಿ ಹರಡುತ್ತಿದೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?