ತಿರುವನಂತನಪುರಂ: ಆ ಧರ್ಮ ಗುರು (Spiritual Guru) ತನ್ನ ಹೆಂಡತಿಯನ್ನು ಹೇಗೆ ಕೊಂದ? ಎಂದು ಗೂಗಲ್‍ನಲ್ಲಿ (Google) ಸರ್ಚ್ ಮಾಡಿ ಸಂಚು ರೂಪಿಸಿ ಪ್ರೇಯಸಿಯನ್ನು ಕೊಲೆಗೈದ (Murder) ದುಷ್ಕರ್ಮಿಗೆ ಜೀವಾವಧಿ ಶಿಕ್ಷೆ ಹಾಗೂ 2.5 ಲಕ್ಷ ರೂ. ದಂಡ ವಿಧಿಸಿ ಕೊಲ್ಲಂನ (Kollam) ಹೆಚ್ಚುವರಿ ಸೆಷನ್ಸ್ ಕೋರ್ಟ್ (Sessions Court) ತೀರ್ಪು ನೀಡಿದೆ.
Advertisement
ಅಪರಾಧಿ ಪ್ರಶಾಂತ್ ನಂಬಿಯಾರ್, 2020ರ ಮಾ. 20ರಂದು ಇಂಟರ್‌ನೆಟ್ ಕೊಲೆಯ ಪ್ರಕರಣವೊಂದನ್ನು ಸರ್ಚ್ ಮಾಡಿ, ಅದರಂತೆ ಪ್ರೇಯಸಿ ಸುಚಿತ್ರಾ ಪಿಳ್ಳೈಯನ್ನು (42) ಹತ್ಯೆ ಮಾಡಿದ್ದ. ಅಲ್ಲದೆ ಕೊಲೆಗೈದ ನಂತರ ಚಲನಚಿತ್ರವೊಂದನ್ನು ನೋಡಿ, ಅದರಲ್ಲಿ ದೇಹವನ್ನು ಕತ್ತರಿಸಿದ್ದ ರೀತಿಯಲ್ಲೇ ತುಂಡು ತುಂಡಾಗಿ ಕತ್ತರಿಸಿದ್ದ. ಬಳಿಕ ಮನೆಯ ಹಿಂದಿನ ಹೊಂಡದಲ್ಲಿ ಎಸೆದಿದ್ದ. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆತನ ಗೂಗಲ್ ಸರ್ಚ್ ಹಿಸ್ಟರಿಯಿಂದ ಕೊಲೆ ರಹಸ್ಯ ಬಯಲಿಗೆಳೆದಿದ್ದರು. ಇದನ್ನೂ ಓದಿ:ಹಿಂಡನ್‍ಬರ್ಗ್ ಪ್ರಕರಣ – ಮೂರು ತಿಂಗಳಲ್ಲಿ ತನಿಖೆಯ ಪ್ರಗತಿ ತೋರಿಸಲು ಸೆಬಿಗೆ ಸುಪ್ರೀಂ ಸೂಚನೆ
Advertisement
Advertisement
ಖಾಸಗಿ ಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಪರಾಧಿ, ತನ್ನ ಹೆಂಡತಿಯ ಸಂಬಂಧಿ ಸುಚಿತ್ರಾಳನ್ನು ಕುಟುಂಬದ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಕೊಂಡಿದ್ದ. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು.
Advertisement
ಎರಡು ಬಾರಿ ವಿಚ್ಛೇದನ ಪಡೆದಿದ್ದ ಸುಚಿತ್ರಾ, ಅಪರಾಧಿಯನ್ನು ಮದುವೆಯಾಗಲು ತಯಾರಿ ನಡೆಸಿದ್ದಳು. ಆತನಿಂದ ಮಗುವನ್ನು ಹೊಂದಿದ್ದಳು. ಆದರೆ ಈಗಾಗಲೇ ಮದುವೆಯಾಗಿ ಪತ್ನಿಯೊಂದಿಗೆ ವಾಸವಾಗಿದ್ದ ಪ್ರಶಾಂತ್ ಮದುವೆಗೆ ನಿರಾಕರಿಸಿದ್ದ. ಆದರೆ ಮದುವೆಯಾಗುವಂತೆ ಪಟ್ಟು ಹಿಡಿದಿದ್ದ ಆಕೆಯನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ – ಬಿವಿ ಶ್ರೀನಿವಾಸ್‍ಗೆ ಸುಪ್ರೀಂ ಜಾಮೀನು